ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಪಾಲಿಕೆಗಳಾಗಿ ವಿಂಗಡಿಸಿ ಗ್ರೇಟರ್ ಬೆಂಗಳೂರು ಅಥಾರಿಟಿಯನ್ನು ಅಸ್ಥಿತ್ವಕ್ಕೆ ತಂದ ಮೇಲೆ ಈಗ ಅದರ ಚುನಾವಣೆಯನ್ನು ಎದುರಿಸುವ ಸವಾಲ್ ಸರ್ಕಾರದ ಮುಂದಿದೆ.
ಸುಪ್ರೀಕೋರ್ಟ್ ನಿರ್ದೇಶನದ ಪ್ರಕಾರ ಜೂನ್ ತಿಂಗಳ ಅಂತ್ಯದ ವೇಳೆಗೆ ಐದು ಪಾಲಿಕೆಗಳಿಗೆ ಚುನಾವಣೆ ನಡೆಸಬೇಕಾಗಿದೆ.
ಇದೀಗ ಚುನಾವಣೆ ನಡೆಸುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಸರ್ಕಾರ ಅಸ್ಥಿತ್ವಕ್ಕೆ ತಂದಿರುವ ಐದು ಪಾಲಿಕೆಗಳಿಗೆ ಕಚೇರಿ ಕಟ್ಟಡ ಕಟ್ಟಲು ಸೂಕ್ತ ಸ್ಥಳ ಗುರುತಿಸಬೇಕು. ಕಟ್ಟಡ ಕಟ್ಟಬೇಕು. ಆ ಕಟ್ಟಡದಲ್ಲಿ ಪಾಲಿಕೆ, ಸಭಾಂಗಣ, ಮಹಾಪೌರರ-ಉಪಮಹಾಪೌರರ ಕಚೇರಿ ಕಟ್ಟಡ, ವಿಶೇಷ ಸ್ಥಾಯಿಸಮಿತಿಗಳ ಕೊಠಡಿ. ಕಚೇರಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಕಾರುಗಳ ವ್ಯವಸ್ಥೆ, ಹೀಗೆ ಹಲವು ಸುಸರ್ಜಿತ ವ್ಯವಸ್ಥೆಯನ್ನು ಮಾಡಬೇಕಿದೆ.
ಇಷ್ಟೆಲ್ಲಾ ಪ್ರಕ್ರಿಯೆ ನಡೆಸಲು ಸುಮಾರು ಒಂದು ವರ್ಷಗಳಿಗೂ ಹೆಚ್ಚು ಕಾಲ ಸಮಯ ತೆಗೆದುಕೊಳ್ಳಲಿದೆ. ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಬೆಂಗಳೂರು ಹಲವು ಬಡಾವಣೆಗಳನ್ನು ಜಿಬಿಎ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ.
ಬನಶಂಕರಿ ಜೆಪಿನಗರ ವಿಶ್ವೇಶ್ವರಯ್ಯ ಬಡಾವಣೆಯ ಹಲವು ಪ್ರದೇಶಗಳನ್ನು ಜಿಬಿಎ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. ಇವುಗಳ ತೆರಿಗೆಯನ್ನು ಸಹ ಜಿಬಿಎ ಪಡೆದು ಅವುಗಳ ನಿರ್ವಹಣೆಯನ್ನು ಜಿಬಿಎ ಮಾಡುತ್ತಿದೆ. ಒಟ್ಟಾರೆ ನಿಗದಿತ ಅವಧಿಯೊಳಗೆ ಜಿಬಿಎ ಚುನಾವಣೆ ನಡೆಸಲು ಸಾಕಷ್ಟು ಸುಸಜ್ಜಿತ ಸೌಲಭ್ಯಗಳಿಲ್ಲದೆ ನಡೆಸುವುದು ಸವಾಲಾಗಿ ಪರಿಣಮಿಸಿದೆ.
ಜಿಬಿಎ ಚುನಾವಣೆ ಸವಾಲ್ , ನಿಗದಿತ ಸಮಯಕ್ಕೆ ಮಾಡಲು ಅಸಾಧ್ಯದ ಮಾತು?



