ಬೆಂಗಳೂರು: ಶ್ರೀರಾಮಪುರದ ನಾಲ್ಕನೇ ಅಡ್ಡರಸ್ತೆಯಲ್ಲಿರುವ ಶ್ರೀ ಗೀತಾ ಮಂದಿರ ಟ್ರಸ್ಟ್ ವತಿಯಿಂದ ಡಿಸೆಂಬರ್ 22 ಮತ್ತು 23 ಗೀತಾ ಜಯಂತಿ ಮತ್ತು ವೈಕುಂಠ ಏಕಾದಶಿ ಪ್ರಯುಕ್ತ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಕಾರ್ಯಕ್ರಮಗಳು: ಡಿಸೆಂಬರ್ 22, ಶುಕ್ರವಾರ, “ಗೀತಾ ಜಯಂತಿ” : ಬೆಳಗ್ಗೆ 10-00ಕ್ಕೆ “ಗೀತಾ ಪಾರಾಯಣ” 12-00ಕ್ಕೆ ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ. ಸಂಜೆ 6-30ಕ್ಕೆ : “ಹರಿನಾಮ ಸಂಕೀರ್ತನೆ” ಗಾಯನ : ಶ್ರೀಮತಿ ಭವಾನಿ ಭುವನ್, ಪಿಟೀಲು : ವಿ|| ಎಂ.ಎಸ್. ಗೋವಿಂದಸ್ವಾಮಿ, ಮೃದಂಗ : ಶ್ರೀ ಬಿ.ಜೆ. ಭುವನ್ ಶರ್ಮಾ.
(ಈ ಕಾರ್ಯಕ್ರಮದ ಪ್ರಾಯೋಜಕರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಬೆಂಗಳೂರು. ಡಿಸೆಂಬರ್, 23, ಭಾನುವಾರ, “ವೈಕುಂಠ ಏಕಾದಶಿ” : ದರ್ಶನದ ಸಮಯ : ಬೆಳಗ್ಗೆ 8-00 ರಿಂದ 1-00, ಸಂಜೆ 5-00 ರಿಂದ 9-00. ಸಾಂಸ್ಕೃತಿಕ ಕಾರ್ಯಕ್ರಮ :
ಸಂಜೆ 6-00 ರಿಂದ 8-00 :ಶ್ರೀರಾಮಪುರದ ಶ್ರೀ ವೈಷ್ಣವಿ ವಾಸವಿ ಮಹಿಳಾ ಮಂಡಲಿಯ ಸದಸ್ಯರಿಂದ “ಅನ್ನಮಾಚಾರ್ಯರ ಕೀರ್ತನೆ”ಗಳ ಗಾಯನ.ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟಿನ ಪದಾಧಿಕಾರಿಗಳು ವಿನಂತಿಸಿದ್ದಾರೆ.