ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಸ್ಟ್ ಪಂದ್ಯ ಸೋತಿರುವ ಪ್ರವಾಸಿ ಭಾರತ ತಂಡ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಇತ್ತಂಡಗಳ ನಡುವಣ ಈ ಪಂದ್ಯ ಬುಧವಾರ(ನಾಳೆ) ಕೇಪ್ ಟೌನ್ನಲ್ಲಿ ಆರಂಭಗೊಳ್ಳಲಿದೆ.
ಈ ಪಂದ್ಯಕ್ಕೆ ಭಾರತ ತಂಡ ವಿಶೇಷ ಬ್ಯಾಟಿಂಗ್ ಅಭ್ಯಾಸ ನಡೆಸಿದೆ. ಆದರೆ, ತಂಡದ ಯುವ ಆಟಗಾರ ಶುಭಮನ್ ಗಿಲ್ ಹೆಬ್ಬೆರಳಿನ ಗಾಯಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ಬ್ಯಾಟಿಂಗ್ ಅಭ್ಯಾಸ ನಡೆಸುವ ವೇಳೆ ಗಿಲ್ ಹೆಬ್ಬೆರಳಿನ ಗಾಯಕ್ಕೀಡಾಗಿದ್ದಾರೆ ಎನ್ನಲಾಗಿದೆ. ಗಿಲ್ ಅವರ ಹೆಬ್ಬರಳಿಗೆ ಫಿಸಿಯೊ ಬ್ಯಾಡೆಂಜ್ ಸುತ್ತುತ್ತಿರುವ ಫೋಟೊ ವೈರಲ್ ಆಗಿದೆ. ಫೋಟೊದಲ್ಲಿ ಗಿಲ್ ಗಾಯದಿಂದ ಬಳಲುತ್ತಿರುವಂತೆ ಕಾಣುತ್ತಿದೆ. ಸದ್ಯ ಬಿಸಿಸಿಐ ಗಿಲ್ ಗಾಯಗೊಂಡಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.