ಬೆಂಗಳೂರು: ದೊಡ್ಡಬೊಮ್ಮಸಂದ್ರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಗಿರಿಜ ಕಲ್ಯಾಣ ಮಹೋತ್ಸವವನ್ನು ಹಮ್ಮಿಕೊಂಡಿದ್ದಾರೆ ಮಾರ್ಚ್ 8ರ ಶುಕ್ರವಾರ ಬೆಳಿಗ್ಗೆ 6ರಿಂದ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಅಲಂಕಾರ ಸಂಜೆ 4ಕ್ಕೆ ವಾಗ್ದೇವಿ ಮಾತೃಮಂಡಳಿ ಅವರಿಂದ ಪಾರಾಯಣ,
ಸಂಜೆ 5:30ಕ್ಕೆ ಶ್ರೀ ಗಿರಿಜಾ ಕಲ್ಯಾಣೋತ್ಸವ ಪ್ರಾರಂಭ ಸಂಜೆ 6ಕ್ಕೆ ಶ್ರೀ ಶ್ವೇತಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಬಿಲ್ವಾರ್ಚನೆ, ಸಾಮೂಹಿಕವಾಗಿ ಭಕ್ತರಿಂದಲೇ ಶ್ವೇತಲಿಂಗೇಶ್ವರ ಸಾಲಿಗ್ರಾಮಕ್ಕೆ ಮಹಾನದಿಗಳ ಪವಿತ್ರ ಜಲ
ಹಾಗೂ ಹಾಲಿನ ಅಭಿಷೇಕ ಏರ್ಪಡಿಸಲಾಗಿದೆ,
ರಾತ್ರಿ 8ಕ್ಕೆ ನಾಟ್ಯಮಂಜರಿ ಭಕ್ತಿ ಕುಸುಮಾಂಜಲಿಯವರಿಂದ ಭರತನಾಟ್ಯ ಕಾರ್ಯಕ್ರಮ, ರಾತ್ರಿ 10ಕ್ಕೆ ಕಲಶ ಸ್ಥಾಪನೆಗಳು ರಾತ್ರಿ 11ಕ್ಕೆ ಕಲಶಾರ್ಚನೆ ರಾತ್ರಿ 12ಕ್ಕೆ ಮಹಾಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ ಮಹಾ ರುದ್ರ- ದುರ್ಗ ಹೋಮ ಶ್ರೀವಲ್ಲಿ-ದೇವಯಾನಿ ಸಮೇತ ಸುಬ್ರಮಣ್ಯ, ಆಂಜನೇಯ ಹೋಮ, ಮಾರ್ಚ್ 9 ಶನಿವಾರ ಬ್ರಾಹ್ಮೀ ಮುಹೂರ್ತ ಬೆಳಿಗ್ಗೆ 3:3ಕ್ಕೆ ಮಹಾಪೂರ್ಣಾಹುತಿ, ಬೆಳಿಗ್ಗೆ 4:30ಕ್ಕೆ ದೇವರುಗಳಿಗೆ ಕುಂಭಾಭಿಷೇಕ, ಅಲಂಕಾರ,
ಬೆಳಿಗ್ಗೆ 5:30ಕ್ಕೆ ಈ ಪೂಜಾ ಕಾರ್ಯಕ್ರಮಗಳಿಗೆ “ರಾಷ್ಟ್ರೀಯ ರತ್ನ” ವಿದ್ವಾನ್ ವೇದಮೂರ್ತಿ, ಎಸ್. ಎನ್. ಸೋಮಸುಂದರ್ ದೀಕ್ಷಿತರು ಇವರ ಉಪಸ್ಥಿತಿಯಲ್ಲಿ ನಡೆಯಲಿದೆ, ಪೂಜಾ ಕಾರ್ಯಕ್ರಮಗಳಲ್ಲಿ ದೇವಸ್ಥಾನದ ಸಂಸ್ಥಾಪಕಿ ಲಯನ್ ಮಂಜುಳ, ಕಾರ್ಯದರ್ಶಿ ಲಯನ್ ಆರ್. ಲೀಲಾಕೃಷ್ಣ (ಪಿ,ಎಂ,ಜೆ,ಎಫ್), ಜಂಟಿ ಕಾರ್ಯದರ್ಶಿ ಶಿಲ್ಪಾಭರತ್ ಇವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ದೇವಸ್ಥಾನದ ಸಂಸ್ಥಾಪಕ ಹಾಗೂ ಧರ್ಮಾಧಿಕಾರಿಗಳಾದ ಡಾ.ಲಯನ್ ಬಿ. ಎಂ. ರವಿನಾಯ್ಡು ಪಿ,ಎಂ,ಜೆ,ಎಫ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
– ಜಿ.ಎಲ್. ಸಂಪಂಗಿ ರಾಮುಲು