ಮಾಲೂರು: ಕೋಲಾರ ಲೋಕ ಸಭಾಮೀಸಲು ಕ್ಷೇತ್ರಕ್ಕೆ ಕಾಂಗ್ರೇಸ್ ಪಕ್ಷದಿಂದ ಅಭ್ಯರ್ಥಿಯಾಗಿ ಪರಿಶಿಷ್ಟ ಜಾತಿಯ ಬಲಗೈಸಮುದಾಯದವರಿಗೆ ಅವಕಾಶ ನೀಡಬೇಕು ಎಂದು ಐದು ಗ್ಯಾರಂಟಿಗಳ ಜಿಲ್ಲಾ ಉಪಾಧ್ಯಕ್ಷ ಸoತೇಹಳ್ಳಿ ನಾರಾಯಣಸ್ವಾಮಿ ಒತ್ತಾಯ ಮಾಡಿದ್ದಾರೆ.
ಪಟ್ಟಣದ ಕಾಂಗ್ರೇಸ್ ಕಚೇರಿಯಲ್ಲಿ ತಾಲ್ಲೂಕು ಎಸ್ಸಿ ಬ್ಲಾಕ್ ಕಾಂಗ್ರೇಸ್ ಘಟಕದ ವತಿಯಿಂದ ಕರೆಯಲಾಗಿದ್ದ ಪತ್ರಿಕಾ ಘೋಷ್ಠಿ ಯಲ್ಲಿ ಭಾಗವಹಿಸಿ ಮಾತನಾಡಿದರು. 40 ವರ್ಷಗಳಿಂದ ಕೋಲಾರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಕಾಂಗ್ರೇಸ್ ಪಾರ್ಟಿಯಲ್ಲಿ ಎಡಗೈ ಸಮುದಾಯದವರೇ ಸoಸದರಾಗಿದ್ದು ಅವರಿಗೆ ಹೆಚ್ಚಿನ ಬೆಂಬಲ ಕೊಟ್ಟಿದ್ದು ನಮ್ಮ ಸಮುದಾಯದವರು ಕಾಂಗ್ರೇಸ್ ಪಕ್ಷದ ಪರವಾಗಿ ಕೆಲಸ ಮಾಡುತಿದ್ದೇವೆ ಕೋಲಾರ ಲೋಕ ಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಮತದಾರರೇ ಹೆಚ್ಚಾಗಿರುವು ದರಿಂದ 2024ನೇ ಲೋಕಸಭಾ ಚುನಾವಣೆಗೆ ಬಲಗೈ ಸಮುದಾಯದವರಿಗೆ ಕಾಂಗ್ರೇಸ್ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ವರಿಷ್ಠರಲ್ಲಿ ಮನವಿ ಮಾಡಿಕೊಳ್ಳುತೇವೆ ಬಲಗೈ ಸಮುದಾಯದವರ ಪರವಾಗಿ ಬೆಂಬಲ ನೀಡುತ್ತಿರುವ ಎಲ್ಲಾ ಜನ ಪ್ರಿಯ ಶಾಸಕರು ಮುಖಂಡರಿಗೆ ಧನ್ಯವಾದಗಳು ಎಂದು ಹೇಳಿದರು.
ಎಸ್ಸಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೈಲಂಡಹಳ್ಳಿ ನಾರಾಯಣ ಸ್ವಾಮಿ ಮಾತನಾಡಿ ಮಾಜಿ ಸoಸದರು ಹಾಗೂ ಹಾಲಿ ಸಚಿವರು ಆಗಿರುವ ಕೆ ಹೆಚ್ ಮುನಿಯಪ್ಪ ನವರು ತಾವು ಏಳು ಭಾರಿ ಸಂಸದರಾಗಿ ಕೇಂದ್ರ ಮಂತ್ರಿಗಳಾಗಿ ಕಾರ್ಯನಿರ್ವಸಿ ಪ್ರಸ್ತುತ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಸಚಿವರಾಗಿದ್ದಿರಿ ತಮ್ಮ ಪುತ್ರಿಯು ಶಾಸಕರಾಗಿದ್ದಾರೆ ಲೋಕಸಭಾ ಚುನಾವಣೆಯಲ್ಲಿ ದಯವಿಟ್ಟು ಕುಟುಂಬ ರಾಜಕಾರಣಕ್ಕೆ ಒಳಗಾಗದೆ ಬಲಗೈ ಸಮುದಾಯದವರಿಗೂ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡುತ್ತೇವೆ ಎಂದರು.
ಬಲಗೈ ಸಮುದಾಯದಕ್ಕೆ ಸಾಮಾಜಿಕ ನ್ಯಾಯ ಕೊಡಬೇಕು, ಗೊ ಬ್ಯಾಕ್ ಕೆ ಹೆಚ್ ಕುಟುಂಬ ಎಂದು ಘೋಷಣೆ ಕೂಗಿದರ ಮೂಲಕ ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಾಗಪುರ ನವೀನ್ ಎಂ ಅಂಜಿನಪ್ಪ, ಬೇಡಶೆಟ್ಟ ಹಳ್ಳಿ ರಮೇಶ್, ಹೆಚ್ ನಾರಾಯಣಪ್ಪ, ತಂಬ್ಬಳ್ಳಿ ನಾರಾಯಣಸ್ವಾಮಿ, ಕೋಟೆ ಮುನಿರಾಜು, ಲೋಕೇಶ್, ಹರೀಶ್, ಬಿ ಸಿ ಮಂಜುನಾಥ್ ಇದ್ದರು.