ಮಾಜಿ ಮುಖ್ಯಮಂತ್ರಿಗಳಾದ ಕೆ.ಸಿ.ರೆಡ್ಡಿರವರು ಅಂದಿನ ಮೈಸೂರು ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿ ಇಂದು ಸಹ ಜನಮಾನಸದಲ್ಲಿ ಉಳಿದಿದ್ದಾರೆ.ಕೆ.ಸಿ.ರೆಡ್ಡಿರವರು ವಿಧಾನಸೌಧ ಬೆಂಗಳೂರಿನಲ್ಲಿ ಸ್ಥಾಪನೆಯಾಗಬೇಕು ಎಂದು ಯೋಜನೆ ರೂಪಿಸಿ ಆನುಷ್ಠಾನಕ್ಕೆ ತಂದರು, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂರವರ ಅಮೃತಹಸ್ತದಿಂದ ಗುದ್ದಲಿಪೂಜೆ ಮಾಡಿಸಿದರು.
ಬಡವರಿಗೆ ಸೂರು ಸೌಲಭ್ಯ ಮತ್ತು ರಾಜ್ಯದ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ಜಾರಿಗೆ ನವ ಕರ್ನಾಟಕ ನಿರ್ಮಾಣಕ್ಕೆ ನಾಂದಿ ಹಾಡಿದರು.
ಕೆ.ಸಿ.ರೆಡ್ಡಿ ರವರ ಕುಟುಂಬದವರು ನಾಡಿನ ಒಳಿತಿಗಾಗಿ ಶ್ರಮಿಸಿದರು ಅವರ ಮೊಮ್ಮಗಳಾದ ಶ್ರೀಮತಿ ವಸಂತ ಕವಿತಾರವರ ತಾತನವರ ಆದರ್ಶ ಮಾರ್ಗದರ್ಶನ ಮತ್ತು ಸಮಾಜಸೇವೆಯನ್ನು ಮೈಗೊಡಿಸಿಕೊಂಡು ಜನ ಸೇವೆ ಮಾಡುತ್ತಿದ್ದಾರೆ.
ಶ್ರೀಮತಿ ವಸಂತ ಕವಿತಾ ವಿದ್ಯಾವಂತೆ ಪ್ರಾಧ್ಯಪಕಿಯಾಗಿ ಸೇವೆ ಸಲ್ಲಿಸಿ ನಂತರ ಬಡವರ ಸೇವೆ ಮಾಡಬೇಕು ಎಂದು ಅಸ್ಟಿಟಂಟ್ ಪ್ರೋಪೆಸರ್ ವೃತ್ತಿಗೆ ಗುಡ್ ಬೈ ಹೇಳಿದರು, ಕಾಂಗ್ರೆಸ್ ಪಕ್ಷದ ಸಂಘಟನೆ ಸೇರ್ಪಡೆಯಾದರು.ಮಾಜಿ ಮುಖ್ಯಮಂತ್ರಿಗಳಾದ ಕೆ.ಸಿ.ರೆಡ್ಡಿರವರು ಮತ್ತು ಸರೋಜಮ್ಮರವರ ಸವಿ ನೆನಸಿನಲ್ಲಿ ಕೆ.ಸಿ.ರೆಡ್ಡಿ ವೇಲ್ ಫೇರ್ ಫೌಂಡೇಷನ್ ಸ್ಥಾಪಿಸಿದರು.
ಫೌಂಡೇಷನ್ ಮೂಲಕ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಶಾಲೆಯ ಮಕ್ಕಳಿಗೆ ವಿಜ್ಞಾನ ತಂತ್ರಜ್ಞಾನ ಅರಿವು ಮೂಡಿಸುವ ಕಾರ್ಯಕ್ರಮ ವಿಜ್ಞಾನ ಸಲಕರಣೆಗಳ ವಿತರಣೆ ಮತ್ತು ಮಕ್ಕಳಿಗೆ ಪರಿಸರ ಜಾಗೃತಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ವೇಮನ ರೆಡ್ಡಿ ಜನ ಸಂಘದಲ್ಲಿ ನಿರ್ದೇಶಕಿ ಸಮಾಜ ಬಾಂಧವರ ಸಂಘಟನೆಯಲ್ಲಿ ರಾಜ್ಯಾಧ್ಯಂತ ಪ್ರವಾಸ ಮಾಡಿದ್ದಾರೆ.ಶ್ರೀಮತಿ ವಸಂತ ಕವಿತಾ ರವರ ಸೇವಾ ಕಾರ್ಯವನ್ನು ಗುರುತಿಸಿದ ಆಂಧ್ರಪ್ರದೇಶ ಸರ್ಕಾರ ತಿರುಪತಿ ತಿರುಮಲ ದೇವಸ್ಥಾನದ ಎಸ್.ಬಿ.ಬಿ.ಸಿ ನಿರ್ದೇಶಕಿ ನೇಮಕ ಮಾಡಿದರು. ಕಳೆದ ವರ್ಷಗಳಿಂದ ಉತ್ತಮ ಸೇವೆ ನೀಡುತ್ತಾ ಬಂದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಕಳೆದ 30ವರ್ಷಗಳಿಂದ ಸಕ್ರಿಯ ಕಾರ್ಯಕರ್ತೆಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಆಂಧ್ರ, ತೆಲಂಗಾಣ ಮತ್ತು ರಾಜ್ಯದ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಉಸ್ತುವಾರಿಯಾಗಿ ಯಶ್ವಸಿಯಾಗಿ ಕಾರ್ಯನಿರ್ವಹಿಸಿದ್ದಾರೆ.ಮಹಿಳಾ ಪರ ಹೋರಾಟ, ಕಾಂಗ್ರೆಸ್ ಪಕ್ಷ ಸಂಘಟನೆ ಮತ್ತು ಸಮಾಜ ಸೇವೆಯಲ್ಲಿ ಶ್ರೀಮತಿ ವಸಂತ ಕವಿತಾ ರವರು ರಾಜ್ಯದಲ್ಲಿ ಅಪಾರ ಹೆಸರು ಗಳಿಸಿದ್ದಾರೆ.
ಮಹಿಳಾ ಪರ ಧ್ವನಿಯಾಗಿರುವ, ನಾಡಿನ ಪರ ಹೋರಾಟಗಾರ್ತಿ ಶ್ರೀಮತಿ ವಸಂತ ಕವಿತಾ ರವರನ್ನು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ನೇಮಕ ಮಾಡಬೇಕು ಎಂದು ಒತ್ತಾಯವಾಗಿದೆ. ರಾಷ್ಟ್ರಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ ಶ್ರೀಮತಿ ವಸಂತ ಕವಿತಾರವರನ್ನು ವಿಧಾನಪರಿಷತ್ ನೇಮಕ ಮಾಡಬೇಕು ಕಾಂಗ್ರೆಸ್ ಪಕ್ಷ ಮುಖಂಡರು, ಕಾರ್ಯಕರ್ತರು ಮತ್ತು ರೆಡ್ಡಿ ಜನಸಂಘ ಮುಖಂಡರು, ಕೆ.ಸಿ.ರೆಡ್ಡಿ ಕುಟುಂಬ ಮತ್ತು ಅಭಿಮಾನಿಗಳು ಒತ್ತಾಯ ಮಾಡುತ್ತಾ ಇದ್ದಾರೆ.ಶ್ರೀಮತಿ ವಸಂತ ಕವಿತಾ ರವರನ್ನು ವಿಧಾನಪರಿಷತ್ ಆಯ್ಕೆ ಮಾಡುವುದರಿಂದ ರೆಡ್ಡಿ ಸಮುದಾಯದಕ್ಕೆ ನ್ಯಾಯ ಮತ್ತು ಮಹಿಳೆಯರಿಗೆ ಸಮಾನ ಹಕ್ಕು ನೀಡಿದ ಅವಕಾಶ, ಲಾಭ ಕಾಂಗ್ರೆಸ್ ಪಕ್ಷಕ್ಕೆ ಆಗುತ್ತದೆ ಎಂದು ವಸಂತ ಕವಿತಾ ಅವರ ಅಭಿಮಾನಿಗಳ ಅಭಿಪ್ರಾಯವಾಗಿದೆ.