ಬಾಹುಬಲಿ ಮತ್ತು ಮಾಹಿಷ್ಮತಿಯ ಜಗತ್ತಿನಲ್ಲಿ ಇದೂವರೆಗೂ ಕೇಳಿರದ, ಕಂಡಿರದ ಹಾಗೂ ತಿಳಿಯಲಾಗದಿದ್ದ ಅನೇಕ ಘಟನೆಗಳು ಕಥೆಗಳು ಇವೆ. ಕೆಲವು ಪ್ರಾಜೆಕ್ಟ್ಗಳು ಮೇಲಿನ ದೃಶ್ಯಗಳು ತಲ್ಲಣಗೊಳಿಸುತ್ತದೆ. ಬಾಹುಬಲಿ ಕ್ರೌನ್ ಆಫ್ ಬ್ಲಡ್ನ ಬಾಹುಬಲಿ ಪಾತ್ರವನ್ನು ಕನ್ನಡ ಭಾಷೆಗೆ ಧ್ವನಿ ನೀಡಿರುವ ಖ್ಯಾತ ಡಬ್ಬಿಂಗ್ ಕಲಾವಿದ ಸಂತೋಷ್ ಶಿಂಧೆ ಇದರ ಅನುಭವದ ಬಗ್ಗೆ ಖುಷಿಯ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಬಾಹುಬಲಿ ಒಂದು ಸಿನಿಮಾ ಅಲ್ಲ. ಇದೊಂದು ಹಿತವಾದ ಅನುಭವಗಳನ್ನು ಕೊಡಲಿದ್ದು, ವೀಕ್ಷಕರನ್ನು ಮನ ಸೆಳೆಯುತ್ತದೆ. ಪ್ರತಿ ಪಾತ್ರಗಳು ಹಾಗೂ ಉಸಿರುಗಟ್ಟಿಸುವ ದೃಶ್ಯಗಳಿಂದ ತುಂಬಿದ ಸಮೃದ್ದವಾದ ವಿವರವನ್ನು ಜಗತ್ತಿಗೆ ಕೊಡಲಿದೆ. ನನ್ನ ಭಾಷೆಯಲ್ಲಿ ವೀಕ್ಷಕರಿಗೆ ಪಾತ್ರಕ್ಕೆ ಹೊಂದುವಂತೆ ಧ್ವನಿಯನ್ನು ರೂಪಿಸಲು ಪ್ರಯತ್ನ ಮಾಡಿದ್ದೇನೆ.
ಅಲ್ಲಿನ ಪಾತ್ರದ ಭಾವನೆಗಳು, ಪ್ರೇರಣೆಗಳು ಮತ್ತು ಅದರ ಪ್ರಯಾಣವನ್ನು ಅರ್ಥ ಮಾಡಿಕೊಳ್ಳುವುದು. ನನ್ನ ಸಾಲುಗಳನ್ನು ಸರಿಯಾದ ಸ್ವರ, ಒಳಹರಿವು, ತೀವ್ರತೆಯೊಂದಿಗೆ ತಲುಪಿಸಿರುವುದನ್ನು ಒಳಗೊಂಡಿದೆ ಎನ್ನುತ್ತಾರೆ. ಎ ಗ್ರಾಫಿಕ್ ಇಂಡಿಯಾ ಮತ್ತು ಆರ್ಕ ಮೀಡಿಯಾ ವರ್ಕ್ಸ್ ಪ್ರೊಡಕ್ಷನ್ ಅಡಿಯಲ್ಲಿ ಎಸ್.ಎಸ್.ರಾಜಮೌಳಿ-ಶರದ್ದೇವರಾಜನ್ ಕ್ರಿಯೆಟೀವ್ ಮುಖ್ಯಸ್ಥರಾ ಗಿರುತ್ತಾರೆ. ಜೀವನ್.ಜೆ.ಕಾಂಗ್-ನವೀನ್ ಜಾನ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಇವರೆಲ್ಲರೂ ನಿರ್ಮಾಣದಲ್ಲಿ ಪಾಲುದಾರರಾಗಿರುತ್ತಾರೆ.