ಬೇಲೂರು: ವಿಶ್ವ ಪಾರಂಪರಿಕ ತಾಣ, ಶಿಲ್ಪಕಲಾ ನಾಡು ಎಂದೇ ಖ್ಯಾತಿ ಪಡೆದ ಬೇಲೂರಿನಲ್ಲಿ ನಡೆದ ಹನುಮ ಜಯಂತಿ ಅಂಗವಾಗಿ ಜರುಗಿದ ಬೃಹತ್ ಶೋಭಾಯಾತ್ರೆ ಅತ್ಯಂತ ಸಂಭ್ರಮ-ಸಡಗರದಿಂದ ನಡೆಸಲಾಯಿತು.
ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳದಲ್ಲಿ ಮೋಕ್ಕಾಂ ಹೂಡುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸುವ ಮೂಲಕ ಶೋಭಯಾತ್ರೆಯನ್ನು ಸಂಪನ್ನಗೊಳಿಸಲಾಯಿತು.ಹೌದು! ಹನುಮನ ಜಾತ್ರೆಗೆ ಹೋಗೋಣ, ಸೀತಾಕಲ್ಯಾಣ ನೋಡೋಣ, ರಾಮನ ಸೇವೆ ಮಾಡೋಣ, ಪಂಚಭಕ್ಷ ಪರಮಾನ್ನ ತಿನ್ನೋಣ, ಹನುಮನ ಕೃಪೆಗೆ ಪಾತ್ರರಾಗೋಣ ಎಂಬಂತೆ ಚನ್ನಕೇಶವನ ಬೀಡಿನಲ್ಲಿ ನಡೆದ ಹನುಮ ಜಯಂತಿ ಪ್ರತಿ ವರ್ಷದಂತೆ ಈ ಭಾರಿ ಕೂಡ ತನ್ನ ವೈಭವಕ್ಕೆ ಸಾಕ್ಷಿಯಾಗಿತ್ತು.
ಪಟ್ಟಣದ ಲಕ್ಷ್ಮೀ ಪುರ ಬಡಾವಣೆಯಲ್ಲಿನ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ 11 ನೇ ವರ್ಷದ ವಾರ್ಷಿಕೋತ್ಸವ ಮತ್ತು ಹನುಮ ಜಯಂತಿ ಅಂಗವಾಗಿ ಕಳೆದ ಐದು ದಿನದಿಂದ ದೇಗುಲದಲ್ಲಿ ವಿವಿಧ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಲಾಯಿತು.
ಶನಿವಾರ ಬೃಹತ್ ಶೋಭಾಯಾತ್ರೆ ಮುನ್ನ ದೇಗುಲದಲ್ಲಿ ಶ್ರೀಯವರಿಗೆ ವಿಶೇಷ ಹೂವುಗಳಿಂದ ಶೃಂಗಾರ ಮಾಡಲಾಯಿತು.
ಮಹಾಮಂಗಳಾರತಿ ಬಳಿಕ ಬಂದ ಸಾವಿರಾರು ಭಕ್ತರಿಗೆ ಅನ್ನ ದಾಸೋಹಕ್ಕೆ ಇಲ್ಲಿನ ಶಾಸಕ ಹೆಚ್.ಕೆ.ಸುರೇಶ್ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಚಾಲನೆ ನೀಡಿದರು. ಸುಮಾರು 15 ಗ್ರಾಮಗಳಿಂದ ಇಲ್ಲಿನ ವೀರಾಂಜನೇಯಸ್ವಾಮಿಗೆ ಬೃಹತ್ ಪುಷ್ಪಮಾಲೆಯನ್ನು ಶ್ರೀಯರವರಿಗೆ ಸಮರ್ಪಿಸಿದ ಬಳಿಕ ದೇಗುಲದ ಬಳಿಯಿಂದಲೇ ಜೈ ಜೈ ಶ್ರೀರಾಮ್, ಜೈ ಭಜರಂಗಿ ಎಂಬ ಘೋಷಣೆಯೊಂದಿಗೆ ಶೋಭಯಾತ್ರೆಗೆ ಆರಂಭಿಸಲಾಯಿತು.
ಶೋಭಯಾತ್ರೆಯಲ್ಲಿ ವೀರಾಂಜನೇಯಸ್ವಾಮಿ ಮತ್ತು ಶಿವಾಜಿ ಮಹಾರಾಜ ಪುತ್ಥಳಿ ವಿಶೇಷವಾಗಿ ಸಾರ?ಕರ್ ಭಾವಚಿತ್ರ ಮೆರವಣಿಗೆಯಲ್ಲಿ ಸಾಗಿದವು. ಯುವಕರು ಮತ್ತು ಯುವತಿಯರಿಗೆ ಪ್ರತ್ಯೇಕವಾಗಿ ಡಿಜೆ ಸೌಂಡ್ ವ್ಯವಸ್ಥೆ ಕಲ್ಪಿಸಿದ ಕಾರಣದಿಂದ ಯುವಕ-ಯವತಿಯರು ಕುಣಿದು ಕುಪ್ಪಳಿಸಿ ಮೆರವಣಿಗೆಗೆ ರಂಗು ತಂದರು.
ಹೇಳಿ-ಕೇಳಿ ಪ್ರವಾಸಿ ತಾಣ ಬೇಲೂರಿನಲ್ಲಿ ವಾಹಣ ದಟ್ಟನೆ ಹೆಚ್ಚಾದ ಕಾರಣದಿಂದಲೇ ಹಾಸನ ಎಸ್ಸಿ ಸ್ಥಳದಲ್ಲಿ ಮೋಕ್ಕಾಂ ಹೂಡಿ ಚಿಕ್ಕಮಗಳೂರು ಮತ್ತು ಹಾಸನ ಕಡೆಗೆ ಪರ್ಯಾಯ ವ್ಯವಸ್ಥೆ ಕಲಿಸಿದಲ್ಲದೆ 700 ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿರುವ ನಿಟ್ಟಿನಲ್ಲಿ ಹೆಜ್ಜೆ-ಹೆಜ್ಜೆಗೆ ಖಾಕಿ ಪಡೆ ಮುನ್ನಚ್ಚರಿಕೆ ವಹಿಸಿದ್ದು ಸುಗಮ ಸಂಚಾರಕ್ಕೆ ಕಾರಣವಾಯಿತು.ಮೆರವಣಿಗೆ ನೆಹರುನಗರಕ್ಕೆ ದಾವಿಸಿದ ಸಂದರ್ಭದಲ್ಲಿ ಹನುಮಭಕ್ತರು ಕ್ಷಣ ಕಾಲ ಭಾಗವಾನ್ ಧ್ವಜವನ್ನು ಹಾರಿಸಿ ಖುಷಿ ಪಟ್ಟರು. ಮೆರವಣಿಗೆಯಲ್ಲಿ ಶಾಸಕ ಹೆಚ್.ಕೆ.ಸುರೇಶ್, ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಸೇರಿದಂತೆ ವಿವಿಧ ಮುಖಂಡರು ಮೆರವಣಿಗೆ ಜೊತೆ ಹೆಜ್ಜೆ ಹಾಕಿದರು.