ಮುಳಬಾಗಲು: ಕೆಲ ವರ್ಷಗಳಿಂದ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು, ಇನ್ನೂ ಉತ್ತಮ ಸೇವೆ ಮಾಡಬೇಕೆಂಬ ಉದ್ದೇಶದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧೆ ಮಾಡಿದ್ದೆ ಚುನಾವಣೆಯಲ್ಲಿ ಮತದಾರರು ನನ್ನೆಗೆ ಬೆಂಬಲ ನೀಡದೇ ಇದ್ದರೂ ಅವರ ಜೊತೆಗೆ ಎಂದಿಗೂ ಇದ್ದುಕೊಂಡು ನನ್ನ ಸೇವೆ ಮುಂದುವರಿಸುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಜಿ.ಎಂ.ಗೋವಿಂದಪ್ಪ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲ ಅಭ್ಯರ್ಥಿಗಳು ಮತ ಪಡೆಯಲು ಹಲವಾರು ರೀತಿಯಲ್ಲಿ ಮತದಾರರನ್ನೂ ಓಲೈಸಲು ಅಮಿಷಗಳನ್ನು ಒಡ್ಡಿದ್ದಾರೆ. ಆದರೆ, ನಾನು ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸ್ಥಳೀಯವಾಗಿ ಸ್ಪಧೆರ್ ಮಾಡಿದ್ದೇನೆ. ಜನ ಯಾವುದೇ ತೀರ್ಪು ನೀಡಿದರೂ ಅದನ್ನು ಸ್ವಾಗತ ಮಾಡುತ್ತೇನೆ.
ಮುಂಬರುವ ದಿನಗಳಲ್ಲಿ ಸಮಾಜ ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡುವ ಮೂಲಕ ಜನರ ವಿಶ್ವಾಸ ಪಡೆದುಕೊಂಡು ಮುಂದೆ ನಡೆಯುವ ಚುನಾವಣೆಯಲ್ಲಿ ಸ್ಪಧೆರ್ ಮಾಡುತ್ತೇನೆ. ನನ್ನೆ ಸೇವೆ ಗುರ್ತಿಸಿ ಬೆಂಬಲ ನೀಡಿರುವವರಿಗೆ ಕೃತಜ್ಞತೆಗಳನ್ನೂ ಮಾಡುತ್ತೇನೆ ಎಂದರು.
ಮುಖಂಡರಾದ ಡಿ.ವೆಂಕಟೇಶಪ್ಪ, ಕೃಷ್ಣಪ್ಪ, ಎಂ.ರಘುನಾಥ್, ರಾಮಕೃಷ್ಣ, ಮಂಜುನಾಥ್, ಹನುಮಾಪ್ಪ, ಅಮರನಾಥ್, ಹರಿ, ಜೈ ಭೀಮ್ ರಘು ಮತ್ತಿತರರು ಹಾಜರಿದ್ದರು.
Leave a Review