ಬೆಳಗಾವಿ: ನಾನಾಗಿಯೇ ದೆಹಲಿಗೆ ಹೋಗುವುದಿಲ್ಲದೆಹಲಿಯಿಂದ ಕರೆ ಬಂದ ಮೇಲೆ ಹೋಗುತ್ತೇನೆ ಎಂದು ಬಿಜೆಪಿಯ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಿನ್ನೆ ದೆಹಲಿಗೆ ಬರಲು ಸೂಚನೆ ಕೊಟ್ಟಿದ್ದಾರೆ.ಯಾವಾಗ ಕರೆ ಬರುತ್ತದೆ ಆಗ ಹೋಗುತ್ತೇನೆ. ರಮೇಶ್ ಜಾರಕಿಹೊಳಿ ಸೇರಿದಂತೆ ಅವರಿಗೂ ಹೇಳಿರಬಹುದು. ದೆಹಲಿಗೆ ಹೋಗುವುದು ನಿಶ್ಚಿತ, ಖಚಿತ. ಉಚಿತ ಮಾತ್ರ ಅಲ್ಲ ಎಂದು ಹೇಳಿದ್ದಾರೆ.
ಹಣ ಕೊಟ್ಟು ಟಿಕೆಟ್ ಪಡೆದು ಹೋಗಬೇಕು. ಕರ್ನಾಟಕದಲ್ಲಿ ಇಬ್ಬರು ಮಹಾನುಭಾವರು ಇದ್ದಾರೆ.ಅವರಿಂದ ಕರ್ನಾಟಕದಲ್ಲಿ ಈ ಪರಿಸ್ಥಿತಿ ಬಂದಿದೆ. ಇಬ್ಬರು ಸಿಂಗ್ಗಳಿಂದ ಈ ನಿರ್ಧಾರ ಮಾಡಿದ್ದೇನೆ. ದೆಹಲಿಯ ಒಬ್ಬರು, ಕರ್ನಾಟಕ ಒಬ್ಬರು ಇದ್ದಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇದೇ ಸಂದರ್ಭದಲ್ಲಿ ಕಳೆದ 4ರಂದು ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಮೌಲಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದ್ದ ವೇದಿಕೆಯಲ್ಲಿ ಐಸಿಸ್ ಸಂಪರ್ಕ ಹೊಂದಿರುವ ಮೌಲಿಯೊಬ್ಬರು ಕುಳಿತಿದ್ದರು ಎಂದು ಆರೋಪಿಸಿದ್ದಾರೆ. ತಾವು ಈ ಮಾತನ್ನು ಲಘುವಾಗಿ ಹೇಳುತ್ತಿಲ್ಲ. ಗಂಭೀರವಾಗಿ ಹೇಳುತ್ತಿದ್ದೇನೆ ಎಂದು ಸಹ ಅವರು ತಿಳಿಸಿದ್ದಾರೆ.