ಜಕಾರ್ತ: ಭಾರತದ ರುದ್ರಾಂಕ್ಷ್ ಪಾಟೀಲ ಮತ್ತು ಮೆಹುಲಿ ಘೋಷ್ ಜೋಡಿ ಮಂಗಳವಾರ ಇಲ್ಲಿ ನಡೆದ ಏಷ್ಯಾ ಒಲಿಂಪಿಕ್ ಕ್ವಾಲಿಫೈಯರ್ನ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಐದನೇ ಚಿನ್ನದ ಪದಕವನ್ನು ತಂದುಕೊಟ್ಟಿದೆ.
ಫೈನಲ್ನಲ್ಲಿ ಚೀನಾದ ಶೆನ್ ಯುಫಾನ್ ಮತ್ತು ಝು ಮಿಂಗ್ಶುವೈ ವಿರುದ್ಧ 16-10 ಅಂತರದಲ್ಲಿ ಭಾರತದ ಜೋಡಿ ಜಯ ಸಾಧಿಸಿತು.
10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಅರ್ಜುನ್ ಚೀಮಾ ಮತ್ತು ರಿದಮ್ ಸಾಂಗ್ವಾನ್ ಜೋಡಿ ವಿಯೆಟ್ನಾಂನ ಥು ವಿನ್ಹ್ ಟ್ರಿನ್ ಮತ್ತು ಕ್ವಾಂಗ್ ಹುಯ್ ಫಾಮ್ ಅವರ ಎದುರು ಸೋತು ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು. ರಿದಮ್ ಮತ್ತು ಅರ್ಜುನ್ ಅವರ ತಂಡವು ಅರ್ಹತಾ ಸುತ್ತಿನಲ್ಲಿ ಒಟ್ಟು 582 ಅಂಕಗಳೊಂದಿಗೆ ಅಗ್ರಸ್ಥಾನ ಪಡೆಯಿತು.
ವಿಯೆಟ್ನಾಂನ ಎರಡನೇ ಸ್ಥಾನದಲ್ಲಿರುವ ಜೋಡಿ (580) ಗಿಂತ ಮುಂದಿತ್ತು. ಇದಕ್ಕೂ ಮುನ್ನ ನಡೆದ ಅರ್ಹತಾ ಸುತ್ತಿನಲ್ಲಿ ರುದ್ರಾಂಕ್ಷ್ ಮತ್ತು ಮೆಹುಲಿ ಜೋಡಿ 631.3 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆಯಿತು. ಯುಫಾನ್ ಮತ್ತು ಮಿಂಗ್ಶುವಾಯಿ 632.3 ಅಂP ಗಳಿಸಿ ಪ್ರಥಮ ಸ್ಥಾನ ಪಡೆಯಿತು.