ಪಟ್ಟಾಯ (ಥಾಯ್ಲೆಂಡ್): ಭಾರತದ ಸುಹಾಸ್ ಯತಿರಾಜ್, ಪ್ರಮೋದ್ ಭಗತ್ ಮತ್ತು ಕೃಷ್ಣ ನಗರ್ ಅವರು ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ನ ಪುರುಷರ ಸಿಂಗಲ್ಸ್ನ ತಮ್ಮ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ವಿಶ್ವದ ಮೂರನೇ ರ್ಯಾಂಕಿನ ಯತಿರಾಜ್ ಎಸ್ಎಲ್4 ವಿಭಾಗದಲ್ಲಿ ಇಂಡೋನೇಶ್ಯದ ಫ್ರೆಡಿ ಸೆತಿಯಾವಾನ್ ಅವರನ್ನು 21-18, 21-18 ಗೇಮ್ಗಳಿಂದ ಉರುಳಿಸಿ ಚೊಚ್ಚಲ ವಿಶ್ವ ಪ್ರಶಸ್ತಿ ಗೆದ್ದರು. ಕರ್ನಾಟಕ ಮೂಲದ 40ರ ಹರೆಯದ ಯತಿರಾಜ್ 2007ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದಾರೆ.