ಚಾಮರಾಜನಗರ: ಚಾಮರಾಜನಗರ ವಿಶ್ವವಿದ್ಯಾಲಯದ ಸುವರ್ಣಗಂಗೋತ್ರಿ ಆವರಣದಲ್ಲಿ ಸುವರ್ಣ ಸಂಭ್ರಮ -2024ರ ಅಂಗವಾಗಿ ಬುಧವಾರ ಸುವರ್ಣ ಸಂತೆ ಸ್ಪರ್ಧೆಯು ನಡೆಯಿತು.
ಕಾರ್ಯಕ್ರಮದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಉಪನ್ಯಾಸಕ ಡಾ ಮಹದೇವಮೂರ್ತಿ ಮಾತನಾಡಿ ವಿಧ್ಯಾರ್ಥಿಗಳ ಬಹುಮುಖ ಪ್ರತಿಭೆಯನ್ನು ಮತ್ತು ಅವರ ವಿವಿಧ ಕೌಶಲಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭಾರತೀಯ ವ್ಯಾಪಾರ ಪರಂಪರೆಯಲ್ಲಿ ಸಂತೆ ತನ್ನದೇ ಆದ ಹಿನ್ನೆಲೆಯನ್ನು ಹೊಂದಿದೆ ಎಂದರು.
ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಕೌಶಲಗಳನ್ನು ಬೆಳೆಸುವ ಮತ್ತು ವ್ಯಾಪರ ವಹಿವಾಟುಗಳಲ್ಲಿ ಗ್ರಾಹಕರಿಗೆ ಮೋಸ, ವಂಚನೆಯಂತಹ ತೊಂದರೆಗಳ ಬಗೆಗೆ ಜಾಗೃತಿಯನ್ನು ಉಂಟುಮಾಡುವ ಉದ್ದೇಶದಿಂದ ಈ ಸುವರ್ಣ ಸಂತೆಯಂತಹ ಸ್ಪರ್ದೆಗಳು ಮುಖ್ಯವಾಗುತ್ತವೆ ಎಂದು ಡಾ. ಮಹದೇವಮೂರ್ತಿ ತಿಳಿಸಿದರು.
ಕಾರ್ಯಕ್ರಮದ ಸಂಯೋಜಕ ರಾದ ಕನ್ನಡ ವಿಭಾಗದ ಮುಖ್ಯಸ್ಥರಾದ ಬಸವಣ್ಣ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಸವಿತಾ, ಅರ್ಥಶಾಸ್ತ್ರ ಉಪನ್ಯಾಸಕರಾದ ದೀಪ, ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಪೂಜಾ, ಉಪನ್ಯಾಸಕರಾದ ಚೇತನ್ ಇತರರು ಹಾಜರಿದ್ದರು.