ರಾಮನಗರ: ನಗರದಲ್ಲಿ ಉತ್ತಮ ಮಳೆಯಾಗುತ್ತಿದ್ದರೂ ಇನ್ನು ಸಮರ್ಪಕವಾಗಿ ನೀರಿನ ಭಾಗ್ಯ ಇಲ್ಲದೆ ಜನರು ತತ್ತರಿಸುವಂತಾಗಿದೆ.ಐಜೂರು ಬಡಾವಣೆ ಮಹಿಳೆಯರು ಶುಕ್ರವಾರ ಜಲ ಮಂಡಳಿ ಬಳಿ ಜಮಾವಣೆಗೊಂಡು ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡದ ಜಲ ಮಂಡಳಿ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ಮಹಿಳೆಯರು ಒಂದು ಕಡೆ ಜಲ ಮಂಡಳಿ ಅಧಿಕಾರಿಗಳ ಬೇಜವಾಬ್ದಾರಿ ಇನ್ನೊಂದು ಕಡೆ ಬಡಾವಣೆಯ ಮುಖಂಡರನ್ನು ಕುಡಿಯುವ ನೀರು ಕೇಳಿದರೆ ನೀವು ಬಿಜೆಪಿಗೆ ಮತ ನೀಡಿದ್ದೀರಾ, ಅವರನ್ನೇ ನೀರು ಕೇಳಿ ಎನ್ನುತ್ತಿದ್ದಾರೆ, ಕಳೆದ ಎರಡು ವಾರಗಳಿಂದ ನಗರದ ಕೆಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದ್ದು ಅಸಮರ್ಪಕ ನೀರು ಪೂರೈಕೆಯ ವಿರುದ್ದ ನಾಗರಿಕರು ಜಲ ಮಂಡಳಿ ಹಾಗೂ ಕಾಂಗ್ರೆಸ್ ಮುಖಂಡರ ವಿರುದ್ಧ ಪ್ರತಿಭಟನೆ ನಡೆಸಿದರು.
ಐಜೂರು ಭಾಗಕ್ಕೆ ಕಳೆದ 15 ದಿನಗಳಿಂದ ನೀರಿನ ಪೂರೈಕೆ ಇಲ್ಲ. ಯಾವ ಕಾರಣಕ್ಕೆ ಪೂರೈಕೆ ಮಾಡುತ್ತಿಲ್ಲ. ಪ್ರತಿ ಸಲ ಒಂದಿಲ್ಲಾ ಒಂದು ಕಾರಣ ಹೇಳಿ ದಿನ ದೂಡುತ್ತಿದ್ದಾರೆ. ಇದರಿಂದ ಬಹಳ ತೊಂದರೆಯಾಗಿದೆ ಎಂದು ಮಹಿಳೆಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದರುಪ್ರಭಾವಿಗಳ ಬೀದಿಗಳಿಗೆ 2ದಿನಕೊಮ್ಮೆ ಟ್ಯಾಂಕರ್ ನೀರು ಬಿಟ್ಟರೆ, ನಮ್ಮ ಬೀದಿಗೆ 15 ದಿನಕ್ಕೊಮ್ಮೆ ಟ್ಯಾಂಕರ್ ನೀರು ನೀಡುತ್ತಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಅಧಿಕಾರಿಗಳು ಕತೆ ಒಂದ್ ಆದರೆ ಇತ್ತ ವಾರ್ಡ್ ಮುಖಂಡರ ಕಥೆನೆ ಬೇರೆ ನೀರು ಕೇಳಿದ್ರೆ ಬಿಜೆಪಿ ಅವರನ್ನ ಕೇಳಿ ಅನ್ನುತ್ತಾರೆ ನೋಡಿ ಕುಡಿಯುವ ನೀರು ಕೇಳಿದ್ರೆ ನೀವು ವೋಟ್ ಹಾಕಿರೋದು ಬಿಜೆಪಿಗೆ ನೀವು ಬಿಜೆಪಿ ಅವರನ್ನೇ ನೀರು ಕೇಳಿ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿರುವ ಮಾತಿಗೆ ಮಹಿಳೆಯರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಲಿ ಮಾಡುವ ಜನ 500 ರೂ ಕೊಟ್ಟು ಟ್ಯಾಂಕರ್ ಅಲ್ಲಿ ನೀರು ತರುಸ್ಕೊಳ್ಳೋಕೆ ಆಗುತ್ತಾ, ಜನವರಿಯಿಂದಲೂ ಇದೇ ಸಮಸ್ಯೆ ಆಗಿದೆ, ನಮಗೆ ನೀರಿಗೆ ತುಂಬಾ ತೊಂದರೆ ಆಗ್ತಿದೆ ಎಂದು ಅಳಲು ತೋಡಿ ಕೊಂಡಿದ್ದಾರೆ. ಸಂಬಂದಪಟ್ಟವರು ಇತ್ತ ಗಮನ ಹರಿಸಿ ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ನೀರು ಒದಗಿಸಲಿ ಎಂಬುದೇ ನಮ್ಮ ಆಶಯವಾಗಿದೆ.