ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ರಮ್ಯಾ ಕೆಲ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಹೀಗಾಗಿ, ಇವರ ಮಧ್ಯೆ ಒಳ್ಳೆಯ ಫ್ರೆಂಡ್ ಶಿಪ್ ಬೆಳೆದಿದೆ. ರಾಜಕೀಯದಲ್ಲಿ ಇಬ್ಬರ ನಿಲುವು ಬೇರೆ ಬೇರೆ ಇದ್ದರೂ ಅದು ಫ್ರೆಂಡ್ ಶಿಪ್ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಇತ್ತೀಚೆಗೆ ಮಾತನಾಡಿದ್ದ ರಮ್ಯಾ ಅವರು, ಸುದೀಪ್ ರಾಜಕೀಯಕ್ಕೆ ಬರಬೇಕು ಎಂದಿದ್ದರು.
ಈ ಬಗ್ಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ರಮ್ಯಾ ನನಗೆ ಯಾವಾಗಲೂ ಒಳ್ಳೆಯದನ್ನೇ ಬಯಸುತ್ತಾರೆ. ಉತ್ತಮ ಗೆಳತಿ. ಬೇರೆ ಪಕ್ಷದ ಪರ ಪ್ರಚಾರ ಮಾಡುತ್ತೇನೆ ಎಂದಾಗ ಕೊಂಕು ತೆಗೆದು ಸ್ಟೇಟ್‍ಮೆಂಟ್ ಕೊಡೋದು ಸಹಜ. ಆದರೆ, ರಮ್ಯಾ ಎಂದಿಗೂ ಆ ರೀತಿ ಮಾಡಲ್ಲ ಅನ್ನೋದು ಗೊತ್ತು ಎಂದಿದ್ದಾರೆ ಸುದೀಪ್.
Leave a Review