ಹುಬ್ಬಳ್ಳಿ: ಕರ್ನಾಟಕ ವಿಶ್ವವಿದ್ಯಾಲದ ಬಿ.ಎಡ್ ನಾಲ್ಕನೇ ಸೆಮಿಸ್ಟರ್ ಫಲಿತಾಂಶ ಬಿಡುಗಡೆಯಾಗಿದ್ದು, ನಗರದ ಶ್ರೀ ಸಾಯಿ ಬಿ.ಇಡಿ ಕಾಲೇಜಿನ ವಿದ್ಯಾರ್ಥಿಗಳಾದ ಲತೀಫ್ ಮಕಾನದಾರ ಶೇ.೮೮.೩೩ ಡಾ.ಆನಂದ ಕಟ್ಟಿಮನಿ ಶೇ.೮೮.೧೬ ಮತ್ತು ಯಾಸೀನ್ ಖಾಜಿ ಶೇ. ೮೬.೦೫ ಅಂಕಗಳನ್ನು ಪಡೆದುಕೊಂಡು ತೇರ್ಗಡೆಯಾಗಿದ್ದಾರೆ.ಇವರ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಆರ್.ಎಸ್. ಹೊಸೂರು, ಪ್ರಾಚಾರ್ಯರಾದ ಪಿ. ಎಸ್ ಕೆಂಗಾರ ಹಾಗೂ ಸಿಬ್ಬಂದಿ ವರ್ಗ ಅಭಿನಂದನೆಯನ್ನು ಸಲ್ಲಿಸಿದ್ದಾರೆ.



