ಬೆಂಗಳೂರು: ನನ್ನ ಮಗನ ಮದುವೆಯ ನಿಶ್ಚಿತಾರ್ಥ ಇದೆ ತಿಂಗಳು 26ರಂದು ನಡೆಯಲಿದ್ದು, ಈ ಶುಭ ಕಾರ್ಯಕ್ಕೆ ಆಮಂತ್ರಣ ಪತ್ರಿಕೆಯನ್ನು ನೀಡಲು ಇಂದು ರಾಜ್ಯದ ಉಪ ಮುಖ್ಯ ಮಂತ್ರಿ ಗಳಾದ ಡಿಕೆ ಶಿವಕುಮಾರ್ ಅವರ ಮನೆಗೆ ಹೋಗಿ ಭೇಟಿ ಮಾಡಿ ನಮ್ಮ ಮನೆಯ ಕಾರ್ಯಕ್ರಮಕ್ಕೆ ಬರಲು ಆಹ್ವಾನ ನೀಡಲು ಹೋಗಿದ್ದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ. ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿರುವ ಅವರು,ಇದೊಂದು ಖಾಸಗಿ ಭೇಟಿಯಾಗಿದ್ದು, ಇದರಲ್ಲಿ ಯಾವುದೇ ರೀತಿ
ರಾಜಕೀಯ ಮಾತುಕತೆ ನಡೆಸಿಲ್ಲ. ಜೊತೆಗೆ ಮಾಜಿ ಸಿಎಂ ಯಡಿಯೂರಪ್ಪ,ಬಸವರಾಜ ಬೊಮ್ಮಾಯಿ, ಸದಾನಂದ ಗೌಡರು, ವಿರೋಧ ಪಕ್ಷ ನಾಯಕರಾದ ಆರ್ ಅಶೋಕ್ ಮಾಜಿ ಸಚಿವರಾದ ಸಿ ಎನ್ ಅಶ್ವಥ್ ನಾರಾಯಣ, ಸಂಸದ ಡಿಕೆ ಸುರೇಶ್, ಮಾಜಿ ಸಚಿವ ಸುನಿಲ್ ಕುಮಾರ್ಸೇರಿದಂತೆ ಹಲವು ಶಾಸಕರು ಮತ್ತು ಎಲ್ಲ ಪಕ್ಷದ ನಾಯಕರನ್ನು ಭೇಟಿನೀಡಿ ನಿಶ್ಚಿತಾರ್ಥ ಆಮಂತ್ರಣ ಪತ್ರಿಕೆಯನ್ನು ನೀಡಿದ್ದೇನೆ.
ಆದ್ರೆ ಬೆಳಗ್ಗೆಯಿಂದಲೇ ನಮ್ಮ ದೃಶ್ಯ ಮಾಧ್ಯಮಗಳು ನಮ್ಮ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಭೇಟಿಗೆ ರಾಜಕೀಯ ಕಲ್ಪಿಸಿರುವುದು ಸತ್ಯಕ್ಕೆ ದೂರವಾದದ್ದು. ನಾನು ಭಾರತೀಯ ಜನತಾ ಪಕ್ಷದ ಶಾಸಕನಾಗಿ ಆಯ್ಕೆಯಾಗಿದ್ದು, ನಾನು ಬಿಜೆಪಿ ಪಕ್ಷದಲ್ಲೇ ಇದ್ದೀನಿ ನಾನು ಯಾವುದೇ ರೀತಿ ಪಕ್ಷ ವಿರೋಧಿ ಚಟುವಟಿಕೆ ಮಾಡಲ್ಲ. ಹೀಗಾಗಿ ಮಾಧ್ಯಮಗಳಿಗೆ ನನ್ನ ಬಗ್ಗೆ ತೋರಿಸುತ್ತಿರುವ ರೀತಿ ಯಾವುದೇ ಚರ್ಚೆ ನಡೆಸಿಲ್ಲ. ದಯವಿಟ್ಟು ಮಾಧ್ಯಮಗಳು ನನ್ನ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಭೇಟಿಗೆ ಯಾವುದೇ ಬೇರೆ ರೀತಿ ಅರ್ಥ ಕಲ್ಪಿಸುವುದು ಬೇಡ ಎಂದು ಮನವಿ ಮಾಡಿದ್ದಾರೆ.