ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಮಹಾಲಕ್ಷ್ಮಿಪುರ 68ನೇ ವಾರ್ಡಿನಲ್ಲಿ ಇಂದು ಬೆಳಗ್ಗೆ, ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯನವರು ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
ಸಚಿವರು ಕ್ಷೇತ್ರದಲ್ಲಿ ಮಾಡಿದಂತಹ ಉತ್ತಮ ಕೆಲಸಗಳಾದ ಕುಡಿಯುವ ನೀರಿನ ಘಟಕ, ನವ ನಂದಿನಿ ಪಾರ್ಕ್, ಸರ್ಕಾರಿ ಶಾಲೆಗಳ ನಿರ್ಮಾಣ, ನಮ್ಮ ಕ್ಲಿನಿಕ್, ಮಹಾನಗರ ಪಾಲಿಕೆಗಳ ಶಾಲೆಗಳು, ವಿವಿಧ ಕ್ರೀಡಾ ಮೈದಾನಗಳು ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಮತಯಾಚನೆ ಮಾಡಿದರು.
ಕ್ಷೇತ್ರದ ಜನರಿಂದ ಸಚಿವರಿಗೆ ಉತ್ತಮ ಪ್ರತಿಕ್ರಿಯೆ ಹಾಗೂ ಬೆಂಬಲ ದೊರೆಯಿತು. ಮಹಾಲಕ್ಷ್ಮಿ ಲೇಔಟ್ ನಲ್ಲಿ ಈ ಬಾರಿ ಮತ್ತೊಮ್ಮೆ ಗೋಪಾಲಣ್ಣ ಅವರನ್ನು ಗೆಲ್ಲಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಮಾಜಿ ಉಪಮೇಯರ್ ಎಸ್.ಹರೀಶ್, ಡಾ.ಮಂಜುನಾಥ್ ಗೌಡ, ರೈಲು ನಾರಾಯಣ್, ಶಿವಾನಂದಮೂರ್ತಿ, ವಾರ್ಡ್ ಅಧ್ಯಕ್ಷ ಆರ್.ನಾರಾಯಣ್, ವೆಂಕಟೇಶ್ ಮೂರ್ತಿ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾಜಿ ಉಪಮೇಯರ್ ಎಸ್.ಹರೀಶ್, ವೆಂಕಟೇಶ್ ಮೂರ್ತಿ, ಶಿವಾನಂದ್ ಮೂರ್ತಿ, ರೈಲ್ವೆ ನಾರಾಯಣ್, ವಾರ್ಡ್ ಅಧ್ಯಕ್ಷ ಆರ್.ನಾರಾಯಣ್ ಹಾಗೂ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಉಪಸ್ಥಿತರಿದ್ದರು.
Leave a Review