ಚಳ್ಳಕೆರೆ: ರಾಜ್ಯದಲ್ಲಿ ಕೆರೆ ತುಂಬಿಸುವ ಕನಸು ಕಂಡವ ರಲ್ಲಿ ನಾನು ಮೊದಲಿಗ.ಅಂದು ಬರಡಾಗಿದ್ದ.ಬಿಜಾಪುರ ಜಿಲ್ಲೆಯಲ್ಲಿ, ಎಲ್ಲಾ ಕೆರೆಗಳನ್ನು ತುಂಬಿಸುವ ಕೆಲಸವನ್ನು ನಾನು ಮಾಡಿದ್ದೇನೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸುವ ಪ್ರಯತ್ನವನ್ನು ನಾನು ಮಾಡುತ್ತೇನೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಹೇಳಿದರು.
ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿ ಇರುವ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಮಿತಿ ಆಯೋ ಜಿಸಿದ ಸಭೆಯಲ್ಲಿ ಮಾತನಾಡಿ. ಚಿತ್ರದುರ್ಗ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಯ ಕಾಮಗಾರಿ ಯನ್ನು ಸಂಪೂರ್ಣವಾಗಿ ಅನುಷ್ಠಾನ ಗೊಳಿಸುತ್ತೇನೆ. ಕರ್ನಾಟ ಕದ ಅತ್ಯಂತ ಹಿಂದುಳಿದ ಚಿತ್ರದುರ್ಗ ಜಿಲ್ಲೆಯಲ್ಲಿ ಪರಿ ಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಹಾಗೂ ಹಿಂದೂಳಿದ ಸಮಾಜದ ಜನರು ಹೆಚ್ಚಾಗಿ ಜಿಲ್ಲೆಯಲ್ಲಿದ್ದು.
ಇಲ್ಲಿ ಬಡ ಜನರೇ ಹೆಚ್ಚಾಗಿದ್ದು.
ಜನರಿಗೆ ಅರೋಗ್ಯ ಸಮಸ್ಯೆ ಬಂದರೆ ಜಿಲ್ಲಾ ಕೇಂದ್ರ ಚಿತ್ರದುರ್ಗಕ್ಕೆ ಬರುವು ದರಿಂದ ಮೆಡಿಕಲ್ ಕಾಲೇಜ್ ಗೆ ಮೂಲಭೂತ ಸೌಲ ಭ್ಯಗಳಿಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದರಿಂದ ಅತಿ ಹೆಚ್ಚಿನ ಅನುದಾನವನ್ನು ತಂದು. ಮಾದರಿ ಮೆಡಿಕಲ್ ಕಾಲೇಜನ್ನು ಅಭಿವೃದ್ಧಿ ಪಡಿಸುತ್ತೇ ನೆ.ಜಿಲ್ಲೆಗೆ ವಿಮಾನ ನಿಲ್ದಾಣವನ್ನು ತಂದು ವಾಣಿಜ್ಯ ಅಭಿ ವೃದ್ಧಿಗೆ ಸಹಕಾರ ನೀಡುತ್ತೇನೆ.
ಚಿತ್ರದುರ್ಗದ ಜನರ ಬವುದಿನದ ಕನಸ್ಸು ಐತಿಹಾಸಿಕ ಚಿತ್ರದುರ್ಗದಲ್ಲಿ ಮದಕರಿ ನಾಯಕರ ಥೀಮ್ ಪಾರ್ಕ್ ನಿರ್ಮಿಸುತ್ತೇನೆ ಎಂದು ಹೇಳಿದರು. ನಾನು ಕೆಲಸವ ನ್ನು ಮಾಡುವ ಕೆಲಸಗಾರ. ಕಾಂಗ್ರೆಸ್ಸಿಗ ರಂತೆ ಸುಳ್ಳಿನ ಜಂಬದ ಮಾತು ಆಡುವುದಿಲ್ಲ.ಈ ಬಾರಿ ಬಿಜೆಪಿ ಪಕ್ಷದ ಕಮಲ ದ ಗುರುತಿಗೆ ಮತ ನೀಡಿ.ಚಿತ್ರದುರ್ಗ ಲೋಕಸ ಭಾ ಕ್ಷೇತ್ರಕ್ಕೆ ನನ್ನನ್ನು ಈ ಬಾರಿ ಸಂಸದ ನನ್ನಾಗಿ ಆರಿಸಿ ಕಳಿಸಿ. ಮೋದಿಜಿ ಅವರ ಅಭಿವೃದ್ಧಿ ಭಾರತದ ಕನಸು ನನಸಾಗಿಸುವಂತೆ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರಳಿ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ,ಜಯಣ್ಣ,ಎಂ.ಎಲ್. ಸಿ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಬಸವರಾಜ್ ಮಂಡಿ ಮಠ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಬಾಳೆಕಾಯಿ ರಾಮದಾ ಸ್,ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ನಗರ ಸಭೆ ಬಿಜೆಪಿ ಸದಸ್ಯರಾದ ಎಸ್ ಜಯಣ್ಣ, ವೆಂಕಟೇಶ್, ಪಾಲಮ್ಮ,ಬಿಜೆಪಿ ಮುಖಂಡರಾದ ಸೋಮಶೇಖರ ಮಂಡಿಮಠ, ಜಯಪಾಲಯ್ಯ, ವಿಜಯೇಂದ್ರ, ಶಿವಪುತ್ರ ಪ್ಪ, ಜಿ.ಎಂ.ತಿಪ್ಪೇ ಸ್ವಾಮಿ, ಎಂ.ಎಸ್.ಜಯರಾಮ್, ಎ.ಬಿ.ವಿ.ಪಿ ಮಂಜು ನಾಥ್, ಮಾತೃಶ್ರೀಮಂಜುನಾಥ್, ಜೆ.ಡಿ.ಎಸ್ ಪಕ್ಷದ ಮುಖಂಡರಾದ ಎಂ ರವೀಶ್, ಜೆಡಿಎಸ್ ನಗರಸಭಾ ಸದಸ್ಯರಾದ ಸಿ.ಶ್ರೀನಿವಾಸ್, ಪ್ರಮೋದ್, ನಾಗಲಕ್ಷ್ಮಿ, ಕವಿತಾ, ಇತರ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.