ಬೆಂಗಳೂರು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಕಲಂ 16 ರ ಪ್ರಕಾರ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗಳಿಗೆ ಈ ಕೆಳಕಂಡಂತೆ ನೇಮಿಸಿ ರಾಜ್ಯ ಸರ್ಕಾರ ಮಾರ್ಚ್ 12 ರಂದು ಆದೇಶ ಹೊರಡಿಸಿದೆ.
* ಡಾ.ಹೆಚ್.ಕೃಷ್ಣ, ಮಂಡ್ಯ – ಅಧ್ಯಕ್ಷರು – ವರ್ಗ – ಸಾಮಾನ್ಯ.
* ಲಿಂಗರಾಜ್ ಕೋಟೆ, ಬೆಂಗಳೂರು – ಸದಸ್ಯರು- ಪರಿಶಿಷ್ಟ ಜಾತಿ.
* ಸುಮಂತ ರಾವ್ – ಮಂಗಳೂರು – ಸದಸ್ಯರು – ಹಿಂದುಳಿದ ವರ್ಗ.
* ಮಾರುತಿ ಎಂ.ದೊಡ್ಡಲಿಂಗಣ್ಣವರ, ಧಾರವಾಡ – ಸದಸ್ಯರು – ಪರಿಶಿಷ್ಟ ಪಂಗಡ.
* ಎ.ರೋಹಿಣಿ ಪ್ರಿಯಾ, ಕನಕಪುರ, ರಾಮನಗರ ಜಿಲ್ಲೆ – ಸದಸ್ಯರು – ಸಾಮಾನ್ಯ.
* ಕೆ.ಎಸ್.ವಿಜಯಲಕ್ಷ್ಮಿ, ಆರ್.ಟಿ.ನಗರ, ಬೆಂಗಳೂರು – ಸದಸ್ಯರು – ಸಾಮಾನ್ಯ.
ಕರ್ನಾಟಕ ರಾಜ್ಯ ಆಹಾರ ಆಯೋಗಕ್ಕೆ ನೇಮಕಗೊಂಡಿರುವ ಅಧ್ಯಕ್ಷರು / ಸದಸ್ಯರ ಅಧಿಕಾರ , ಕರ್ತವ್ಯ ಮತ್ತು ಅಧಿಕಾರವಧಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ಮತ್ತು ಸರ್ಕಾರಿ ಆದೇಶ ಸಂಖ್ಯೆ : ಆನಾಸ /52/ಡಿಆರ್ ಎ/2012 ದಿನಾಂಕ: 10-06-2016 ರಂತೆ ಅನ್ವಯವಾಗುವುದು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಈ ಸರ್ಕಾರಿ ಆದೇಶ ಹೊರಡಿಸಿದ ದಿನಾಂಕದಿಂದ 15 ದಿನಗಳ ಒಳಗಾಗಿ ಆಯೋಗದಲ್ಲಿ ಹಾಜರಾಗಿ ಕಾರ್ಯವರದಿ ಮಾಡಿಕೊಳ್ಳತಕ್ಕದೆಂದು ಅಧ್ಯಕ್ಷರು/ ಸದಸ್ಯರಿಗೆ ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸರ್ಕಾರದ ಕಾರ್ಯದರ್ಶಿ (1&2) ಹನುಮಂತರಾಜು.ಎ ಅವರು ಆದೇಶದಲ್ಲಿ ತಿಳಿಸಿದ್ದಾರೆ.