ಬೆಂಗಳೂರು: ಬೆಂಗಳೂರು ಪದವೀಧರರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಮೋಜಿಗೌಡ ಗೆಲುವು ನಿಶ್ಚಿತ ಎಂಬುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.ಅವರು ಬಿಟಿಎಂ ವಿಧಾನಸಭಾ ಕ್ಷೇತ್ರದ ಕೊರಮಂಗಲದಲ್ಲಿ ಬೆಂಗಳೂರು ಪದವೀಧರರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಮೋಜಿಗೌಡ ಪರವಾಗಿ ಹಮ್ಮಿಕೊಂಡಿದ್ದ ಪದವೀಧರರು ಹಾಗೂ ಶಿಕ್ಷಕರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಪದವೀಧರ ಮತದಾರ ಹೃದಯದಲ್ಲಿ ರಾಮೋಜಿ ಗೌಡ:- ಕಳೆದ ಎರಡು ಬಾರಿಯೂ ಬಹಳ ಅಲ್ಪಮತಗಳ ಅಂತರದಿಂದ ರಾಮೋಜಿಗೌಡ ಅವರು ಸೋತಿದ್ದಾರೆ ಆದರೆ ಈ ಬಾರಿ ಅವುಗಳೆಲ್ಲವೂ ಧನಾತ್ಮಕವಾಗಿ ಪರಿವರ್ತನೆ ಆಗಿದ್ದು ಬೆಂಗಳೂರಿನ ಪದವೀಧರರು ರಾಮೋಜಿಗೌಡ ಅವರನ್ನು ಹೆಚ್ವಿನ ಮತಗಳ ಅಂತರದಿಂದ ಗೆಲ್ಲಿಸುವ ನಿರ್ಧಾರವನ್ನು ಮಾಡಿದ್ದಾರೆ ಇದರ ಬಗ್ಗೆ ಸಮಿಕ್ಷೆಗಳು ಮತ್ತು ಮತದಾರರ ಅಭಿಪ್ರಾಯ ಹೇಳಿವೆ ಎಂದರು.
ಸಮಾಜ ಸೇವೆಯೇ ಕೈ ಹಿಡಿಯುತ್ತದೆ:- ಇದೇ ಸಂದರ್ಭದಲ್ಲಿ ಮಾಜಿ ಶಾಸಕಿ ಹಾಗೂ ಸಂಸದ ಅಭ್ಯರ್ಥಿಯಾಗಿದ್ದ ಸೌಮ್ಯರೆಡ್ಡಿ ಮಾತನಾಡಿ ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ರಾಮೋಜಿಗೌಡ ಅವರು ಮಾಡಿಕೊಂಡುಬರುತ್ತಿರುವ ಉದ್ಯೋಗ ಮೇಳ, ಕೌಶಲ್ಯ ತರಬೇತಿ ಸೇವಾಕಾರ್ಯಗಳು ಲಕ್ಷಾಂತರ ಯುವಕರಿಗೆ ದಾರಿದೀಪವಾಗಿದೆ ಇದರ ಜೊತೆಯಲ್ಲಿ ಶಿಕ್ಷಕರ ಕುಂದುಕೊರತೆಗಳನ್ನು ಸುಧಾರಣೆಗಾಗಿ ಸದಾ ಶ್ರಮಿಸುತ್ತಿದ್ದು ಜನಾನುರಾಗಿ ಜನಮನದೊಳಗೆ ಅಚ್ಚೊತ್ತಿದ್ದಾರೆ ಆದುದ್ದರಿಂದ ಇಂತಹ ನಿಜವಾದ ಜನನಾಯಕರಿಗೆ ಈ ಬಾರಿ ಪದವೀಧರರು ಕೈ ಹಿಡಿದು ಮೇಲ್ತುತ್ತಾರೆ ಎಂಬುದಾಗಿ ತಿಳಿಸಿದರು.
ಪಕ್ಷಾತೀತ ಬೆಂಬಲ ವ್ಯಕ್ತ ;- ಅಭ್ಯರ್ಥಿ ರಾಮೋಜಿಗೌಡ ಮಾತನಾಡಿ ನಾನು ದಿನ 24 ಗಂಟೆಯು ಜನಸೇವೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಶಿಕ್ಷಕರು ಹಾಗೂ ಪದವೀಧರರ ನಡುವೆ ಸಂಪರ್ಕದಲ್ಲಿ ಇದ್ದಿನಿ ನನ್ನ ಈಪ್ರಾಮಾಣಿಕ ಸೇವೆಯನ್ನು ಗುರುತಿಸಿ ಪಕ್ಷಾತೀತವಾಗಿ ನನಗೆ ಬೆಂಬಲ ವ್ಯಕ್ತವಾಗುತ್ತಿವೆ ಕಳೆದ ಬಾರಿ ತಪ್ಪು ಮಾಡಿದ್ದಿವಿ ಆ ತಪ್ಪುಗಳನ್ನು ತಿದ್ದಿಕೊಳ್ಳಲು ರಾಮೋಜಿಗೌಡ ಅವರನ್ನು ಗೆಲ್ಲಿಸೇ ತೀರುತ್ತಿವಿ ಎಂಬುದಾಗಿಕ್ಷೇತ್ರದ ಎಲ್ಲಡೆಯ ಪದವೀಧರ ಬೆಂಬಲ ಕೇಳಿಬರುತ್ತಿದೆ,
ಇದೇ ತಿಂಗಳು 13 ನೇತಾರೀಖ್ ಪಕ್ಷದ ಹಿರಿಯ ಮುಖಂಡರೊಂದಿಗೆ ಬೃಹತ್ ರ್ಯಾಲಿಯ ಮೂಲಕ ನಾಮಪತ್ರ ಸಲ್ಲಿಸಲಾಗುತ್ತಿದೆ ಎಂಬುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ, ಕೆಪಿಸಿಸಿ ಪ್ರಚಾರ ಸಮಿತಿ ಸದಸ್ಯರಾದ ಕೆ.ವಾಸುದೇವಾರೆಡ್ಡಿ, ಕಾಂಗ್ರೆಸ್ ಮುಖಂಡರು ಹಾಗೂ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸಗೌಡ ಬಸವರಾಜ್ ಹುರಿಕಾರ್, ತಿಮ್ಮಯ್ಯ ಪುರ್ಲೆ ಹಾಗೂ ಮಾಜಿ ಪಾಲಿಕೆ ಸದಸ್ಯರಾದ ಬಿ. ಎನ್. ಮಂಜುನಾಥ ರೆಡ್ಡಿ, ಜಿ. ಮಂಜುನಾಥ್, ನಾಗರಾಜು ಭೈರಸಂದ್ರ, ಎಂ. ಚಂದ್ರಪ್ಪ, ಎಂ. ಮುನಿರಾಜು, ಮಹಮ್ಮದ್ ನವಾಬ್ ರಿಜ್ವಾನ್, ಮಂಜುಳ ಸಂಪತ್ ಕುಮಾರ್, ಪದ್ಮಾವತಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.