ಚಂದಾಪುರ: ಎಸ್.ಎಫ್.ಎಸ್. ಸಂಸ್ಥೆಯ ಶೈಕ್ಷಣಿಕ ಈ ಸಾಧನೆಗೆ ನಿರಂತರ ಪರಿಶ್ರಮ ಮತ್ತು ಶಿಸ್ತುಪಾಲನೆಯ ಹೆಜ್ಜೆಗುರುತುಗಳು ಎದ್ದು ಕಾಣುತ್ತಿವೆ ಎಂಬುದಾಗಿ ರಾಜ್ಯಪಾಲ ರಾದ ತಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ಅವರು ತಾಲ್ಲೂಕಿನ ಹೆಬ್ಬಗೋಡಿ ಸಮೀಪ ವಿರುವ ಎಸ್.ಎಪ್.ಎಸ್.ಕಾಲೇಜಿನಲ್ಲಿ ಗ್ರ್ಯಾಜುಯೇಷನ್ ಡೇ ಕಾರ್ಯಕ್ರಮ ಮತ್ತು ಎಸ್.ಎಪ್.ಎಸ್. ಕಾಲೇಜಿಗೆ ಯುಜಿಸಿ ಮತ್ತು ಕರ್ನಾಟಕ ಸರ್ಕಾರದಿಂದ ನೀಡಿರುವ ಅಟೋ ನೋಮಸ್ ಅದಿಕೃತ ಘೋಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪದವಿ ಹಾಗೂ ಪ್ರಶಸ್ತಿಗಳು ಮುಖ್ಯವಾಗಿದ್ದು ನಗರ ಪ್ರದೇಶಗಳಲ್ಲಿ ದೊರಕುವಂತಹ ಶೈಕ್ಷಣಿಕ ಸೌಲಭ್ಯಗಳು ಸ್ಥಳೀಯ ಗ್ರಾಮಾಂತರ ಪ್ರದೇಶಗಳಲ್ಲಿ ದೊರಕಬೇಕು ಆಗ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಗೆ ಕಾರಣವಾಗುತ್ತದೆ ಎಂದರು.
ಪದವಿ ಪ್ರಮಾಣ ಪತ್ರ ವಿತರಣೆ: ಇದೇ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ರವರು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಣೆ ಮಾಡಿದರು ಹಾಗೂ ವಿಶೇಷವಾಗಿ ಗ್ರ್ಯಾಜುಯೇಷನ್ ಡೇ ಮತ್ತು ಅಟೋ ನೋಮಸ್ ಅನ್ನು ಅಧಿಕೃತವಾಗಿ ಘೋಷಣೆ ಮಾಡಿ ಶುಭ ಹಾರೈಸಿದರು.
ಹೆಮ್ಮೆ ಮತ್ತು ಸಂತೋಷದ ಸುದಿನ:ಎಸ್.ಎಪ್.ಎಸ್. ಕಾಲೇಜಿನ ಪ್ರಾಂಶುಪಾಲರಾದ ಪಾದರ್ ಡಾ. ಬಿನು ಮಾತನಾಡುತ್ತ ಈ ದಿನವು ನಮ್ಮ ಕಾಲೇಜಿಗೆ ಸುವರ್ಣ ಅಕ್ಷರದ ದಿನವಾಗಿದ್ದು ನಮ್ಮ ಕಾಲೇಜಿಗೆ ಕರ್ನಾಟಕ ಸರ್ಕಾರದ ಯುಜಿಸಿ ಮಾನ್ಯತೆಯ ಗೌರವ ಪಡೆದುಕೊಂಡು ನಮ್ಮ ಎಸ್.ಎಪ್.ಎಸ್. ಕಾಲೇಜು “ಎ” ಗ್ರೇಡ್ ಮಾನ್ಯತೆಗೆ ಪಾತ್ರವಾಗಿದೆ.ಈಸುದಿನವು ಹೆಮ್ಮೆ ಹಾಗೂ ಸಂತೋಷದ ಸುದಿನವಾಗಿದೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಎಂ.ಎಸ್.ಎಪ್.ಎಸ್.ನ ಜನರಲ್ ಮ್ಯಾನೇಜರ್ ಡಾ.ಥಾಮಸ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಜಯಕರ್, ಶೇಖ್ ಲತೀಪ್, ಎಸ್.ಎಪ್.ಎಸ್. ಕಾಲೇಜಿನ ಪ್ರಾಂಶುಪಾಲರಾದ ಪಾದರ್ ಡಾ.ಬಿನು, ಪಾದರ್ ರಾಬಿನ್, ಪಾದರ್ ಜಿಜೋ ಮತ್ತು ಎಸ್.ಎಪ್.ಎಸ್ ಶಾಲೆ ಮತ್ತು ಕಾಲೇಜಿನ ಪ್ರಾಂಶುಪಾಲರು. ಎನ್.ಸಿ.ಸಿ.ಕಮಾಂಡರ್ ಚೀಫ್ ಸಂಪತ್ ಕುಮಾರ್, ಉಪಾನ್ಯಾಸಕರು. ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಬಾಗವಹಿಸಿದ್ದರು.