ಚಳ್ಳಕೆರೆ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ದಿನನಿತ್ಯ ಜನರೊಂದಿಗೆ ಬೆರೆತು ಕಚೇರಿಯಲ್ಲಿ ಕೂತು ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿ ಕೆಲಸ ಮಾಡಿದಾಗ ನಿಮ್ಮ ಬಗ್ಗೆ ಯಾವುದೇ ದೂರುಗಳು ಬರೆಯುವುದಿಲ್ಲ ಎಂದು ತಾಲೂಕು ಪಂಚಾಯಿತಿ ಇ.ಒ ಶಶಿಧರ್ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಪಿ.ಡಿ.ಒ,ಕಾರ್ಯದರ್ಶಿಗಳು, ಕರ ವಸುಲಿದಾರರು, ಕಂಪ್ಯೂಟರ್ ಆಪರೇಟರ್ಸ್ ಗಳಿಗೆ ಏರ್ಪಡಿಸಿದ್ದ. ಪ್ರಗತಿ ಪರಿಶೀಲನ ಸಭೆ ಹಾಗೂ ಸಿಬ್ಬಂದಿಗಳು ಆಯೋಜಿಸಿದ್ದ. ಹೊಸ ವರ್ಷ ಆಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರದಿಂದ ಬರುವ ಸುತ್ತೋಲೆಗಳನ್ನು ಅವುಗಳನ್ನು ಸಕಾಲಕ್ಕೆ ಪಾಲನೆ ಮಾಡುತ್ತಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಗ್ರಾಮಗಳಿಗೆ ಬಿಡುಗಡೆಯಾಗುವ ಅನುದಾನವನ್ನು. ಗ್ರಾಮಗಳ ಅಗತ್ಯ ಮೂಲಭೂತ ಸೌಲಭ್ಯಗಳ ಕ್ರಿಯಾಯೋಜನೆ ರೂಪಿಸಿ ಅನುಮೋದನೆಯನ್ನು ಪಡೆದು.ಅನುಷ್ಠಾನಗೊಂಡ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿಗಳನ್ನು ನಿರ್ಮಿಸಿ.
ಗ್ರಾಮಗಳಲ್ಲಿ ಆಸ್ತಿಗಳ ಸರ್ವೆ ಕಾರ್ಯಮಾಡುವ ಮೂಲಕ ಆನ್ ಲೈನ್ ಅಳವಡಿಸಬೇಕು. ಇ ಸ್ವತ್ತು ನಿಗದಿತ ಅವಧಿ ಒಳಗೆ ಜನರನ್ನು ಕಚೇರಿಗೆ ಅಲೆದಾಡಿಸದೆ ಮಾಡಿಕೊಡಬೇಕು. ಕರ ವಸೂಲಿ ಮಾಡಿದ ಹಣವನ್ನು ದುರುಪಯೋಗಪಡಿಸಿಕೊಳ್ಳದೆ. ವಸುಲಾತಿ
ಯಾದ ಹಣವನ್ನು ಬ್ಯಾಂಕಿಗೆ ಪಾವತಿ ಮಾಡಿ.
ನರೇಗಾ ಸೇರಿದಂತೆ ವಿವಿಧ ಯೋಜನೆಗಳ ಕಾಮಗಾರಿಗಳ ಗುಣಮಟ್ಟ ಹಾಗೂ ಚೆಕ್ ಲಿಸ್ಟ್ ಪ್ರಕಾರ ಕಡಿತಗಳನ್ನು ಸಿದ್ಧಪಡಿಸಬೇಕು ಎಂದು ಸಭೆಯಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಹೇಳಿದರು.ಸಭೆಯಲ್ಲಿ ನರೇಗಾ ಸಹಾಯಕ ನಿರ್ದೇಶಕ, ಸಂತೋಷ್, ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಸಂಪತ್ ಕುಮಾರ್, ಲೆಕ್ಕಾಧಿಕಾರಿ ಕೆಂಚಪ್ಪ, ಸಹಾಯಕ ಲೆಕ್ಕಾಧಿಕಾರಿ ದಿವಾಕರ್, ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದೇವೇಂದ್ರಪ್ಪ, ಮಾಜಿ ಅಧ್ಯಕ್ಷ ದೇವರಾಜ್, ಜಿಲ್ಲಾಪಿಡಿಒಗಳ ಮಾಜಿ ಅಧ್ಯಕ್ಷ ಗುಂಡಪ್ಪ, ಈ ಸಭೆಯಲ್ಲಿ ವಿಶೇಷ ಚೇತನ ಪ್ರಥಮ ದರ್ಜೆ ಸಹಾಯಕ ನೌಕರನಿಂದ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷ ಆಚರಣೆ ಮಾಡಿದರು.