ದೊಡ್ಡಬಳ್ಳಾಪುರ: ನ್ಯಾಯಾಲಯಗಳಲ್ಲಿ ಕನ್ನಡ ಬಳಕೆಯಿಂದ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ, ಸರಳವಾದ ಭಾಷೆ ಯಿಂದ ಸಮಾಜಕ್ಕೆ ನ್ಯಾಯಾಲಯದ ತೀರ್ಪುಗಳು, ಹೇಳಿಕೆಗಳು ಸರಳವಾಗಿ ಅರ್ಥವಾಗುತ್ತವೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಮೂರ್ತಿ ಎಂ.ರಘುನಾಥ್ ಅಭಿಪ್ರಾಯ ಪಟ್ಟರು.
ನಗರದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ವಕೀಲರ ದಿನಾಚರಣೆ ಕಾರ್ಯಕ್ರಮ
ವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮದ ಉದ್ಘಾಟಸಿ ಮಾತನಾಡಿದ ಅವರು ಕನ್ನಡ ಉಳಿಸಲು ಕನ್ನಡಿಗರು ಹೋರಾಟ ಮಾಡಬೇಕಾಗಿರುವುದು ದುರದೃಷ್ಟಕರ ಸಂಗತಿ, ನಮ್ಮ ಭಾಷೆ ಇಡೀ ವಿಶ್ವದಲ್ಲೇ ಅತೀ ಶ್ರೇಷ್ಠವಾದ ಭಾಷೆ, ಪ್ರತಿ ಹಂತದಲ್ಲಿ ನಮ್ಮ ಭಾಷೆಯನ್ನ ಆಡಳಿತದಲ್ಲಿ ಬಳಸುವ ಮೂಲಕ ಮತ್ತಷ್ಟು ಸಮೃದ್ಧಗೊಳಿಸಬೇಕಾಗಿದೆ.
ಕನ್ನಡ ಭಾಷೆ ನಮ್ಮ ಭಾಷೆ ಯಾವುದೇ ವಿಷಯ ಸಂವಹನ ನಡೆಸಲು ಮಾತೃಭಾಷೆಯಷ್ಟು ಅದ್ಭುತ ಭಾಷೆ ಮತ್ತೊಂದು ಇಲ್ಲ. ದೊಡ್ಡಬಳ್ಳಾಪುರ ತಾಲ್ಲೂಕಿನ ವಕೀಲರ ಸಂಘದ ಮನವಿಯಂತೆ ವಕೀಲರ ಸಂಘಕ್ಕೆ ಅವಶ್ಯಕವಾಗಿರುವ ನೂತನ ಕಟ್ಟಡ ನಿರ್ಮಾಣ ಮಾಡಲು ಸಹಕರಿಸುತ್ತೇವೆ ಎಂದು ತಿಳಿಸಿದರು.
ನಂತರ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಇದೊಂದು ಐತಿಹಾಸಿಕ ದಿನ ಹಾಗೂ ಕಾರ್ಯಕ್ರಮ ಎಂದ ಅವರು ದೊಡ್ಡಬಳ್ಳಾಪುರ ಮತ್ತು ಬೆಂಗಳೂರು ವಕೀಲರ ಸಂಘಗಳಿಗೆ ಅವಿನಾಭಾವ ಸಂಬಂಧವಿದೆ, ವಕೀಲರ ಯಾವುದೇ ವಿಚಾರಗಳಿರಲಿ ಸದಾಕಾಲವೂ ಸಹಕಾರ ನೀಡುವುದಾಗಿ ಹಾಗೂ ವಕೀಲರ ಕಟ್ಟಡ ನಿರ್ಮಾಣ ಕಾರ್ಯ ತ್ವರಿತವಾಗಿ ನೇರೆವೆರಿಸುವ ಭರವಸೆ ನೀಡಿದರು ನ್ಯಾಯಾಧೀಶರುಗಳು ಸಹ ಉತ್ತಮ ಬಾಂಧವ್ಯವನ್ನು ಹೊಂದಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ವಕೀಲ ಪ್ರಭಾಕರ್ರಾಜು ಅವರು ರಚಿಸಿದ ಜನ್ಮದಾತೆ ಕವನಸಂಕಲನ ಹಾಗೂ ಪುಸ್ತಕ ಬಿಡುಗಡೆಗೊಳಿಸಿ ದರು.
ನಂತರ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಟಿ.ಎನ್ ಅವರು ಕನ್ನಡ ಭಾಷೆಯ ಇತಿಹಾಸ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವಿಚಾರಗಳನ್ನು ಕುರಿತು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕು ವಕೀಲರ ಸಂಘದ ಅದ್ಯಕ್ಷ ರವಿ ಮಾವಿನಕುಂಟೆ ಅವರು ಮಾತನಾಡಿದ ವಿಶೇಷವಾದ ಈ ದಿನ ವಕೀಲರ ದಿನಾಚರಣೆಹಾಗೂ ಕನ್ನಡ ರಾಜ್ಯೋತ್ಸವ ನಡೆಯುತ್ತಿರುವುದು ಸಂತೋಷದ ವಿಚಾರ, ಎಲ್ಲಾ ಸಹಪಾಠಿಗಳ ಸಹಕಾರದಿಂದ ಈ ದಿನದ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.ಕನ್ನಡ ಭಾಷೆ ಜೇನಿನಂತೆ ಸವಿದಷ್ಟು ಸಿಹಿ ಹೊರ ರಾಜ್ಯಗಳಿಂದ ಬಂದು ಜೀವನ ಕಟ್ಟಿಕೊಂಡಿರುವ ಸಾವಿರಾರು ಕುಟುಂಬಗಳಿಗೆ ನಮ್ಮ ನಾಡಿನ ಸವಲತ್ತು ಬೇಕಿದೆ, ಆದರೆ ಭಾಷೆ ಮಾತ್ರ ಬೇಡವಾಗಿದೆ ಈ ನಡವಳಿಕೆ ಬದಲಾಗಬೇಕಿದೆ ಕೇವಲ ವಾಣಿಜ್ಯ ವಿಚಾರಕ್ಕಾಗಿ ಕನ್ನಡ ಭಾಷೆಯನ್ನು ತಾತ್ಸಾರ ಮಾಡುವ ನಮ್ಮ ನಾಡಿನ ವ್ಯಾಪಾರಸ್ಥರಿಗೆ ನಾಚಿಕೆಯಾಗಬೇಕು ನಮ್ಮ ಮಾತೃಭಾಷೆಯನ್ನು ಬಿಟ್ಟು ಪರ ಭಾಷೆ ಬಳಸಲು ಮುಂದಾಗಿರುವ ವರ್ತನೆಗಳು ಕೂಡಲೇ ನಿಲ್ಲಬೇಕಿದೆ.
ಮೊದಲು ಎಲ್ಲಾ ಕನ್ನಡಿಗರಲ್ಲಿ ನನ್ನ ನಾಡು ನುಡಿಯ ಬಗ್ಗೆ ನನ್ನ ಭಾಷೆ ಎಂಬ ಭಾವನೆ ಮೂಡಬೇಕಿದೆ. ಯಶಸ್ವಿ ಕಾರ್ಯಕ್ರಮವನ್ನು ರೂಪಿಸಲು ಸಹಕರಿಸಿದ ಎಲ್ಲಾ ನನ್ನ ವಕೀಲ ಮಿತ್ರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಬೆಳಿಗ್ಗೆ ಧ್ವಜಾರೋಹಣ ಮಾಡಿದ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಮೇಶ್ ದುರಗಪ್ಪ ಏಕಬೋಟಿ, ನ್ಯಾಯಾಧೀಶರು ಗಳಾದ ನ್ಯಾ.ಅರವಿಂದ ಸಾಯಿಬಣ್ಣ ಹಾಗರಗಿ, ನ್ಯಾ.ಬಿ.ಶಿಲ್ಪ, ನ್ಯಾ. ಪ್ರೇಮ್ ಕುಮಾರ್, ನ್ಯಾ.ಕು// ಸುಷ್ಮ, ನ್ಯಾ.ರವಿಬೆಟಗಾರ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ,ಮಾಜಿ ಅದ್ಯಕ್ಷ ಎ.ಪಿ.ರಂಗನಾಥ, ಖಜಾಂಚಿ ಟಿ.ಜಿ.ರವಿ, ಪರಿಷತ್ತಿನ ಶಿವಕುಮಾರ್ ಪತ್ರಕರ್ತರಾದ ರವಿಕಿರಣ್, ಸಾಹಿತಿ ಚಿಕ್ಕ ಹೆಜ್ಜಾಜಿ ಡಾ.ಮಹದೇವ್, ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಕಲಾತಂಡವರು ಭಾಗಿಯಾಗಿದ್ದರು.