ಕನಕಪುರ: ಸಾತನೂರು ಕೆ.ಇ.ಬಿ.ಉಪವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಚೇರಿ ಮಹಡಿಯ ಮೇಲೆ ನಾಡು ಬಾವುಟವನ್ನು ಹಾರಿಸಿ, ನಾಡಗೀತೆ ಹಾಡಿದರು, ನಂತರ ಜನರಿಗೆ ಸಿಹಿ ಹಂಚಿ 68 ನೇ ರಾಜ್ಯೋತ್ಸವ ಹಾಗೂ 50ನೇ ಕರ್ನಾಟಕ ಸಂಬ್ರಮ ಆಚರಣೆ ಮಾಡಿದರು.
ಹೊರ ರಾಜ್ಯದಿಂದ ನಮ್ಮ ನಾಡಿಗೆ ಬಂದು ಕನ್ನಡವನ್ನು ಕಲಿತು ಇಲ್ಲೇ ಜೀವನವನ್ನು ನಡೆಸುತ್ತಿರುವ ಕೆಲವು ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎ ಇ ಇ, ರಂಗಸ್ವಾಮಿ, ಶಾಖಾಧಿಕಾರಿ ಗಳಾದ ಬಾಬು ಪ್ರಸಾದ್, ಗವಿರಾಜು, ನಾರಾಯಣ್, ಹಾಗೂ ವಿ ಅರ್ ದೊಡ್ಡಿ ಉಪವಿತರಣ ಕೇಂದ್ರದ ಕಿರಿಯ ಅಭಿಯಂತರರಾದ ಆನಂದ್, ಗಿರೀಶ್, ಮತ್ತು ಎಲ್ಲಾ ನೌಕರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.