ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ 64ನೇ ವರ್ಷದ ಶ್ರೀ ಜಾಲಾರಿ ಗಂಗಮಾAಭ ದೇವಸ್ಥಾನದ ಶ್ರೀ ಧರ್ಮರಾಯರ ಹೂವಿನ ಕರಗ ಮಹೋತ್ಸವ ವಿಜೃಂಭಣೆಯಿAದ ಸಾಗಿತು. ಈ ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪುರ ಸಂಸದರಾದ ಡಾ.ಕೆ.ಸುಧಾಕರ್ ರವರು ಕುಟುಂಬಸಮೇತ ಮಕ್ಕಳ ಜೊತೆ ಆಗಮಿಸಿ ಶ್ರೀ ಗಂಗಾಮಾತೆಯ ಕೃಪೆಗೆ ಪಾತ್ರರಾದರು. ಈ ಬಾರಿ ವಿಶೇಷವಾಗಿ ತಾಲ್ಲೂಕಿನ ಹಲವಾರು ಗ್ರಾಮಗಳಿಂದ 100ಕ್ಕೂ ಹೆಚ್ಚು ವಿವಿಧ ದೇವರುಗಳ ಉತ್ಸವ ಮೂರ್ತಿಗಳು ಕರಗದ ಮೆರುಗನ್ನು ಹೆಚ್ಚಿಸಿದವು. ಮತ್ತು ಬಜಾರ್ ರಸ್ತೆ, ಎಂಜಿರಸ್ತೆ, ಮತ್ತು ಬಿಬಿ.ರಸ್ತೆಗಳಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಾಗೂ ನಗರದ ನಾಲ್ಕು ವೃತ್ತಗಳಲ್ಲಿ ವಾದ್ಯಗೋಷ್ಟಿಗಳು ಅಲ್ಲದೆ ಕನಕ ದಾಸ ವೃತ್ತದ ಹತ್ತಿರ ಸಾಸೂಲು ಚಿನ್ನಮ್ಮ ಎಂಬ ಪೌರಾಣಿಕ ನಾಟಕವನ್ನು ಸಹ ಏರ್ಪಡಿಸಲಾಗಿತ್ತು. ಮಲ್ಲಿಗೆಯ ಕಂಪಿನಲ್ಲಿ ‘ಗೋವಿಂದ ಗೋವಿಂದ’ ಎಂಬ ನಾಮಸ್ಮರಣೆಯೊಂದಿಗೆ ಐತಿಹಾಸಿಕ ನಾಡ ಅಬ್ಬ ಎಂದೇ ಹೆಸರುವಾಸಿಯಾದ ಚಿಕ್ಕಬಳ್ಳಾಪುರದ ನಗರದಲ್ಲಿ ಶ್ರದ್ಧ ಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಿತು.
ಈ ಬಾರಿ ನಗರದ ಮುಖ್ಯ ರಸ್ತೆಗಳಲ್ಲಿ ಹೆಚ್ಚಿನ ದೀಪಾಲಂಕಾರ ಏರ್ಪಡಿಸಿದ್ದು ನಗರವು ದೀಪಾಲಂಕಾರದಿAದ ತುಂಬಿ ತುಳುಕುತ್ತಿತ್ತು. ತಮಟೆ ವಾದ್ಯಕ್ಕೆ ಮನಸೋತ ಭಕ್ತಾದಿಗಳು ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಿದ್ದರು. ಪೊಲೀಸ್ ಇಲಾಖೆ ಎಂದೂ ಕಾಣದ ಪೊಲೀಸ್ ಬಂದೊಬಸ್ತ್ ಸ್ವಾಗತಾರ್ಥವಾಗಿತ್ತು.
ಕರಗ ಹೊತ್ತ ಮಾಲೂರು ಕೆ.ಧರ್ಮೇಂದ್ರ ರವರು ನೆನ್ನೆ ರಾತ್ತಿ 10ಗಂಟೆಗೆ ಹೂವಿನ ಕರಗ ಹೊತ್ತು ಇಂದೂ ಸಹ ಈ ಸುದ್ದಿ ಇನ್ನೂ ಈ ಪ್ರಕಟಣೆಗೆ ಹೋಗುತ್ತಿದ್ದರೂ ಕರಗ ಹೊತ್ತ ಕೆ.ಧರ್ಮೇಂದ್ರ ಇನ್ನೂ ನಗರದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದು ಕಳೆದ ಎರಡೂ ವರ್ಷಗಳಂತೆ ಈ ವರ್ಷವೂ ಸಹ ಸತತ 25 ರಿಂದ 27ಗಂಟೆ ಕರಗ ಹೊತ್ತು ಸಂಚರಿಸುತ್ತಿರುವುದು ಈಗಲೂ ಕಾಣುತ್ತಿದೆ. ಈ ಕರಗ ಮಹೋತ್ಸವ ನೋಡಲು ತಾಲ್ಲೂಕಿನ ಸುತ್ತ ಮತ್ತುಲ ಗ್ರಾಮಗಳಿಂದ ಆಗಮಿಸಿದ್ದ ಭಕ್ತಾದಿಗಳಲ್ಲದೆ ನೆರೆಯ ಆಂದ್ರ ಪ್ರದೇಶದಿಂದಲೂ ಸಹ ಆಗಮಿಸಿ ಕರಗವನ್ನು ಕಣ್ತುಂಬಿಕೊAಡರು.
ಪ್ರತಿ ವರ್ಷದಂತೆ ಈ ಬಾರಿಯೂ 64ನೇ ಧರ್ಮರಾಯರ ಕರಗ ಮಹೋತ್ಸವ ಶನಿವಾರ ರಾತ್ರಿ 10 ಘಂಟೆಗೆ ಶ್ರೀ ಜಾಲಾರಿ ಗಂಗಮಾಂಭ ದೇವಸ್ಥಾನದಿಂದ ಹೊರಟ ಹೂವಿನ ಕರಗಕ್ಕೆ ಸಹಸ್ರಾರು ಮಂದಿ ಭಕ್ತರು ಸಾಕ್ಷಿಯಾದರು.
ಮಲ್ಲಿಗೆ ಹೂವಿನಿಂದ ಅಲಂಕೃತವಾಗಿದ್ದ ಕರಗ ದೇವಾಲಯದಿಂದ ಹೊರ ಬರುತ್ತಿದ್ದಂತೆ ದರ್ಶನಕ್ಕಾಗಿ ಕಾಯುತ್ತಿದ್ದ ಭಕ್ತರು ದೇವರ ಮೇಲೆ ಹೂವಿನ ಮಳೆಗರೆದರು. ಭಾವಪರವಶರಾಗಿ ಜೈಕಾರ ಹಾಕಿದರು. ಮೊದಲಿಗೆ ಧರ್ಮರಾಯ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ದೇವಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿದ ‘ಹೂವಿನ ಕರಗ’ ಖಡ್ಗ ಹಿಡಿದಿದ್ದ ನೂರಾರು ವೀರ ಕುಮಾರರ ನಡುವೆ ಭಕ್ತರಿಗೆ ದರ್ಶನ ನೀಡುತ್ತ ನಗರ ಸಂಚಾರ ನಡೆಸಿತು.
ಅದ್ಧೂರಿ ಶ್ರೀ ಜಾಲಾರಿ ಗಂಗಮಾಂಭ ಕರಗ ಮಹೋತ್ಸವ



