ಬೇಲೂರು: 75ನೇ ವರ್ಷದ ಗಣರಾಜ್ಯೋತ್ಸವ ಅಂಗವಾಗಿ ಸಂವಿಧಾನ ಕರ್ನಾಟಕದಾದ್ಯಂತ ಸಂಚರಿಸುತ್ತಿರುವ ಜಾಗೃತಿ ಜಾಥಾ ಕ್ಕೆ ಬೇಲೂರು ತಾಲ್ಲೂಕಿನ ನಾರಾಯಣ ಪುರ ಗ್ರಾಮದಲ್ಲಿ ನಾರಾಯಣ ಪುರ ಗ್ರಾಮ ಪಂಚಾಯತಿ ಅದ್ಯಕ್ಷೆ ಕವಿತಾ ರಘು ಹಾಗೂ ಸಾವಿರಾರು ಗ್ರಾಮಸ್ಥರು ಪೂರ್ಣ ಕುಂಭ ಸಮೇತವಾಗಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
75 ನೇ ವರ್ಷದ ಗಣರಾಜ್ಯೋತ್ಸವ ಅಂಗವಾಗಿ ರಾಜ್ಯ ಸರ್ಕಾರ ಇಡೀ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು,ಹಾಗೂ ಹಾಸನ ಜಿಲ್ಲಾಡಳಿತ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಜಾಥಾ ತಾಲ್ಲೂಕಿನ ಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಹೊರಟು, ಹನಿಕೆ, ಮೂಲಕ ನಾರಾಯಣಪುರ ಗ್ರಾಮಕ್ಕೆ ತೆರಳಿತು.
ಇದೇ ಸಂದರ್ಭದಲ್ಲಿನಾರಾಯಣ ಪುರ ಗ್ರಾಮ ಪಂಚಾಯತಿ ಅದ್ಯಕ್ಷೆ,ಕವಿತಾ ರಘು,ರವರ ನೇತೃತ್ವದಲ್ಲಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಮೇಶ್,ಪಿಡಿಓ ಸೇರಿದಂತೆ ಶಾಲಾ ಮಕ್ಕಳು,ಶಿಕ್ಷಕಿಯರು,ಅಂಗನವಾಡಿ ಶಿಕ್ಷಕಿಯರು,ರೆವಿನ್ಯೂ ಇಲಾಖಾ ಅಧಿಕಾರಿಗಳು,ಪಂ,ವಾಟರ್ ಮನ್ ಗಳು ವಿವಿಧ ಸ್ವ ಸಹಾಯ ಸಂಘಗಳ ಕಾರ್ಯಕರ್ತರು ಭಾಗಿಯಾಗಿ,ಗ್ರಾಮದ ಮುಖ್ಯ ರಸ್ತೆಯಲ್ಲಿ ಭವ್ಯ ಮೆರವಣಿಗೆ ಮಾಡುವ ಮೂಲಕ,ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾರ್ಯ ಕ್ರಮ ಆಯೋಜಿಸಲಾಗಿದ್ದು,ಕಾರ್ಯಕ್ರಮದಲ್ಲಿ ಸಂವಿಧಾನ ಜಾಗೃತಿ ಉಪನ್ಯಾಸ ನೀಡಲಾಯಿತು.ಕಾರ್ಯಕ್ರಮದಲ್ಲಿ ಸಾವಿರಾರು ಗ್ರಾಮಸ್ಥರು ಹಾಗೂ ಗಣ್ಯರು ಆಗಮಿಸಿ ಸ್ಪೂರ್ತಿ ತುಂಬಿದರು.
ಇದೇ ಸಂದರ್ಭದಲ್ಲಿ ಇಲಾಖೆ ಅಧಿಕಾರಿ ಚಂದ್ರಕಾಂತ್ ಮಾತನಾಡಿ,ಈ ಸಂವಿಧಾನ ಜಾಗೃತಿ ಅಭಿಯಾನವನ್ನು ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ನಮ್ಮ ದೇಶದ ಸಂವಿಧಾನದ ಅರಿವು ಪ್ರತಿಯೊಬ್ಬರಿಗೂ ತಿಳಿಯಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಇಂತಹ ಅಭೂತ ಪೂರ್ವ ಕಾರ್ಯ ಕ್ರಮ ಹಮ್ಮಿಕೊಂಡಿದೆ.ನಮ್ಮ ದೇಶ ಸ್ವಾತಂತ್ರ್ಯ ಪೂರ್ವದಲ್ಲಿ ದೇಶವನ್ನು ಹೇಗೆ ಕಟ್ಟಬೇಕು ಎಂಬುದನ್ನು,ಕೇವಲ ಕಾನೂನು ಬರೆಯುವ ಮೂಲಕ ಭಾವನಾತ್ಕವಾಗಿ ಹೇಳಿಕೊಳ್ಳುವುದಷ್ಟೆ ಅಲ್ಲ.
ಸಂವಿಧಾನ ಬರೆಯುವಾಗ ಕೇವಲ ಯಾವುದೆ ಅಂಕಿ,ಅಂಶ ಇಟ್ಟು ಕೊಂಡು ಬರೆಯುವುದಲ್ಲ.ಪ್ರತಿಯೊಂದು ಪದ ಬರೆಯುವಾಗಲು ಅಂಬೇಡ್ಕರ್ ರವರ ಭಾವನೆಗಳು ವ್ಯಕ್ತವಾಗಿವೆ.ಭಾರತ ಸಂವಿಧಾನ ಯಾಕೆ ಶ್ರೇಷ್ಠ ಅಂದರೆ,ಸಂವಿದಾನ ಅಂಕಿ ಅಂಶಗಳ ಮದ್ಯೆ ನಲಿದಾಡುವ ಕಾವ್ಯವಲ್ಲ.ಶೋಷಿತ,ಶೋಷಣೆಗೊಳಗಾದವರ ಹಾಗೂ ಒಬ್ಬ ವ್ಯಕ್ತಿ ಸಮಾಜವನ್ನು ಕಾನೂನಾತ್ಮಕವಾಗಿ ಹೇಗೆ ಇಟ್ಟುಕೊಳ್ಳಬೇಕು ಎಂಬುದನ್ನು ಸಂವಿದಾನದ ಮೂಲಕ ತೋರಿಸಿಕೊಟ್ಟಂತಹ ಹಿರಿಮೆ ಅಂಬೇಡ್ಕರ್ ರವರಿಗಿದೆ.
ನಮ್ಮ ದೇಶ ಜಾತ್ಯಾತೀತ ದೇಶವಾಗಬೇಕು ಎಂಬ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಒಂದೇ ಓಟು,ನೀಡುವ ಮೂಲಕ ಮತದಾನದ ಹಕ್ಕನ್ನು ನೀಡಲಾಗಿದೆ.ನಿಮ್ಮ ಮತವನ್ನು ಮಾರಿಕೊಳ್ಳದೆ,ಸದೃಡ ಸಮಾಜವನ್ನು ಕಟ್ಟುವಂತಹ ನಾಯಕರನ್ನ ಆಯ್ಕೆ ಮಾಡಿ,ಉತ್ತಮ ಸಮಾಜವನ್ನು ಕಟ್ಟುವಲ್ಲಿ ನಾವೆಲ್ಲ ಮುಂದಾಗಬೇಕಿದೆ ಎಂದು ಉಪನ್ಯಾಸ ನೀಡಿದರು.
ನಂತರ ಗ್ರಾ.ಪಂ ಅದ್ಯಕ್ಷೆ ಕವಿತಾ ರಘು ಮಾತನಾಡಿ,ಸಂವಿಧಾನ ಜಾರಿಯಾಗಿ,75 ವರ್ಷ ತುಂಬಿದ ಬಳಿಕ ಘನ ಸರ್ಕಾರ ಸಂವಿಧಾನದ ಬಗ್ಗೆ ಸಂಪೂರ್ಣ ಅರಿವು ಮೂಡಿಸಬೇಕು.ಭಾರತದ ಸಂವಿಧಾನಕ್ಕೆ ಜಗತ್ತಿನಲ್ಲಿಯೇ ಉನ್ನತ ಸ್ಥಾನಮಾನವಿದೆ.ಅಂಬೇಡ್ಕರ್ ರಚಿಸಿದ ಸಂವಿಧಾನ ಯಾವುದೆ ಒಂದು ಜಾತಿ,ಧರ್ಮ,ವರ್ಗಕ್ಕೆ ಸೀಮಿತವಾಗದೆ,ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು ಸಿಗುವಂತಹ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ.
ವಿಶೇಷವಾಗಿ, ಮಹಿಳೆಯರಿಗೆ,ಶೋಷಿತ ವರ್ಗಕ್ಕೆ ನೀಡಿದ ರಾಜಕೀಯ ಮೀಸಲಾತಿಯಿಂದ ಇಂದು ಎಲ್ಲರೂ ರಾಜಕೀಯವಾಗಿ, ಆರ್ಥಿಕವಾಗಿ,ಸಾಮಾಜಿಕವಾಗಿ,ಸ್ಥಾನ ಮಾನ ಪಡೆಯಲು ಅನುಕೂಲವಾಗಿದೆ.ಸಂವಿಧಾನದಲ್ಲಿ ಹಕ್ಕುಗಳ ಜೊತೆಗೆ ಕರ್ತವ್ಯ ಪಾಲನೆಗೆ ಹೆಚ್ಚು ಒತ್ತು ನೀಡಿದ್ದಾರೆ ಸಂವಿಧಾನದ ಬಗ್ಗೆ ಸಮಗ್ರವಾಗಿ ಅರಿತುಕೊಂಡರೆ ಪ್ರತಿಯೊಬ್ಬ ಪ್ರಜೆಯೂ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಹೋಗಬಹುದು,ಮತ್ತು ಸದೃಢ ಸಮಾಜವನ್ನು ಕಟ್ಟಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಪ್ರಸ್ತಾವನೆಯನ್ನು ಓದುವ ಮೂಲಕ ಸಂವಿಧಾನ ಬಲವರ್ಧನೆಗೆ ಗ್ರಾಮಸ್ಥರು, ವಿದ್ಯಾರ್ಥಿಗಳು,ಅಧಿಕಾರಿಗಳು ಆಶಾಕಾರ್ತೆಯರು,ಶಿಕ್ಷಕಿಯರು ಒಟ್ಟಾಗಿ ಸಂಕಲ್ಪ ಮಾಡಿದರು.ಕಾರ್ಯಕ್ರಮದಲ್ಲಿ,,ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಶಿವಮರಿಯಪ್ಪ.ಗ್ರಾಮ ಪಂಚಾಯತಿ ಉಪಾದ್ಯಕ್ಷ ಪರ್ವತೇಗೌಡ.ಪಿಡಿಓ ರಿಯಾನ್ ಪಾಷ.ಸದಸ್ಯರಾದ ಶಶಿಕಲಾ ಮೋಹನ್,ಲೀಲಾವತಿರಮೇಶ್.ವಸಂತಾದೇವರಾಜ್.ರೆವಿನ್ಯೂ ಇನ್ಸ್ಪೆಕ್ಟರ್ ಪ್ರಕಾಶ್.ಹಾಗೂ ಗ್ರಾಮಸ್ಥರು ಭಾಗಯಾಗಿದ್ದರು.