ನವದೆಹಲಿ: ಅಮೇರಿಕನ್ ಗ್ರ್ಯಾಂಡ್ ಮಾಸ್ಟರ್ ಡೇನಿಯಲ್ ನರೋಡಿಟ್ಸ್ಕಿ ಕೇವಲ ೨೯ ನೇ ವಯಸ್ಸಿನಲ್ಲಿ ನಿಧನರಾದರು. ಈ ವಾರದ ಆರಂಭದಲ್ಲಿ ನರೋಡಿಟ್ಸ್ಕಿ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ನಲ್ಲಿರುವ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು ಎಂದು ಅವರ ಕುಟುಂಬ ದೃಢಪಡಿಸಿದೆ. ಮಾರ್ಕಾದಲ್ಲಿನ ವರದಿಯ ಪ್ರಕಾರ, ಅಧಿಕಾರಿಗಳು ಇನ್ನೂ ಅಧಿಕೃತ ಸಾವಿಗೆ ಕಾರಣವನ್ನು ಬಿಡುಗಡೆ ಮಾಡಿಲ್ಲ. ಆದರೆ ಆರಂಭಿಕ ವರದಿಗಳು ಸಂದರ್ಭಗಳ ಬಗ್ಗೆ ಪ್ರಶ್ನೆಗಳನ್ನು
ಹುಟ್ಟುಹಾಕುತ್ತವೆ. ಮಾಜಿ ವಿಶ್ವ ಚಾಂಪಿಯನ್ ವ್ಲಾಡಿಮಿರ್ ಕ್ರಾಮ್ನಿಕ್ ಅವರ, ವಂಚನೆ ಆರೋಪಗಳ ನಂತರ ಅಮೆರಿಕ ಗ್ರ್ಯಾಂಡ್ ಮಾಸ್ಟರ್ ಗಣನೀಯ ಒತ್ತಡದಲ್ಲಿದ್ದರು ಎಂದು ಸೂಚಿಸಲಾಗುತ್ತಿದೆ.
ಜನಪ್ರಿಯ ಆನ್ಲೈನ್ ವೇದಿಕೆ Ches.com ನಲ್ಲಿ ನರೋಡಿಟ್ಸ್ಕಿ ಯನ್ನು ಎದುರಿಸಿದ ಕೊನೆಯ ಆಟಗಾರ ಭಾರತೀಯ ಗ್ರ್ಯಾಂಡ್ ಮಾಸ್ಟರ್ ನಿಹಾಲ್ ಸರಿನ್, ಆನ್ಲೈನ್ನಲ್ಲಿ ಆಡುವಾಗ ಅಮೆರಿಕದ ಆಟಗಾರ ಮೋಸ ಮಾಡಿದ್ದಾರೆ ಎಂದು ಪದೇ ಪದೇ ಆರೋಪಿಸಿದ್ದ ಕ್ರಾಮ್ನಿಕ್ ಅವರನ್ನು ನೇರವಾಗಿ ದೂಷಿಸಿದರು. ಈ
ಆರೋಪವನ್ನು ನರೋಡಿಟ್ಸ್ಕಿ ತೀವ್ರವಾಗಿ ನಿರಾಕರಿಸಿದರು. ಈ ಆರೋಪಗಳಿಂದ ನೊಂದು ಅವರು ಜೀವ ತೆಗೆದುಕೊಂಡಿದ್ದಾರೆ ಎಂದು ನಿಹಾಲ್ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು. ನರೋಡಿಟ್ಸ್ಕಿಯಂತೆಯೇ ೨೧ ವರ್ಷದ ಭಾರತೀಯ ಆಟಗಾರ ಬ್ಲಿಟ್ಜ್ ಚೆಸ್ ತಜ್ಞ, ಮತ್ತು ಇಬ್ಬರೂ ಪರಸ್ಪರ ೨,೦೦೦ ಕ್ಕೂ ಹೆಚ್ಚು ಆನ್ಲೈನ್ ಆಟಗಳನ್ನು ಆಡಿದ್ದಾರೆ.