ಚನ್ನರಾಯಪಟ್ಟಣ: ಕೇಂದ್ರ ಸರ್ಕಾರದ ಯೋಜನೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರೈಲ್ವೆ ರಾಷ್ಟ್ರೀಯ ಹೆದ್ದಾರಿ ಬೆಳಿಗ್ಗೆ ಮಾತ್ರ ಅನುದಾನ ಅಲ್ಲ ಹಳ್ಳಿಗಾಡಿನ ಜನತೆಗೂ ಅನುದಾನ ಸಿಗುವಂತೆ ಮಾಡಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವರಾದ ಎಂ ನಾರಾಯಣಸ್ವಾಮಿ ಹೇಳಿದರು.
ದೇವನಹಳ್ಳಿ ತಾಲೂಕು ಐಬಾಸಪುರ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ ಕೇಂದ್ರ ಸರ್ಕಾರದ ಪ್ರಧಾನ
ಮಂತ್ರಿ ಮೋದಿ ಅವರು ಹಳ್ಳಿಗಾಡಿನ ಪ್ರದೇಶದ ರೈತರಿಗೆ ಕಿಸಾನ್ ಸಮಾನ್ ಯೋಜನೆ ಹಾಗೂಬ್ಯಾಂಕುಗಳ ಮುಖಾಂತರ ಅಟಲ್ ಬಿಹಾರಿ ಪೆನ್ಷನ್ ಸ್ಕೀಮ್ ಪ್ರತಿ ಗ್ರಾಮಕ್ಕೂ ಜಲಜೀವನ್ ಮಿಷನ್ ವತಿಯಿಂದ ಮನೆಮನೆಗೂ ನೀರಿನ ಕೊಳಾಯಿ ಎಲ್ಲವೂ ಕೇಂದ್ರ ಸರ್ಕಾರ ನೀಡುತ್ತಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಪ್ರಧಾನ ಮಂತ್ರಿ ಆದ ಮೇಲೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ ಹೊಸ ಹೊಸ ರೈಲ್ವೆ ಯೋಜನೆಗಳು ಜಾರಿ ಮಾಡಿದ್ದಾರೆ ಈ ಯೋಜನೆಗಳು ಹಳ್ಳಿಗಾಡಿನ ಜನರಿಗೆ ತಲುಪುವಂತೆ ವಿಕಸಿತ ಭಾರತ ಕಾರ್ಯಕ್ರಮವನ್ನು ಆಯೋಜಿಸಿ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಹಳ್ಳಿಗಾಡಿನ ಜನರಿಗೆ ತಿಳಿಸುವ ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.
ಬಿಜೆಪಿ ಮುಖಂಡ ನಾರಾಯಣಗೌಡ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ವಿಕಾಸದ ಭಾರತ ಎಂದು ಹೆಸರು ಎಂದರೆ ಭಾರತ ಅಭಿವೃದ್ಧಿ ಆಗುತ್ತಿದೆ ಎಂಬುದು ಸಾರ್ವಜನಿಕರಿಗೆ ತಿಳಿಯುವುದಕ್ಕಾಗಿ ವಿಕಸಿತ ಭಾರತ ಯಾತ್ರೆಯಲ್ಲಿ ಬ್ಯಾಂಕುಗಳಿಂದ ಯಾವ ಯಾವ ಯೋಜನೆ ಹಳ್ಳಿಗಾಡಿನ ಜನತೆಗೆ ಸಿಗುತ್ತದೆ 40ವರ್ಷದ ಒಳಗಿರುವ ಯುವಕರಿಗೆ ಅಟಲ್ ಬಿಹಾರಿ ಪೆನ್ಷನ್ ಸ್ಕೀಮ್ ಮಾಡಿಸಿದರೆ ನಿಮಗೆ 60 ವರ್ಷ ಆದಮೇಲೆ ಟೆನ್ಶನ್ ನಿಮ್ಮ ಖಾತೆಗೆ ಸಿಗುತ್ತದೆ ಅದರ ಮೇಲೆ ವಿಮೆ ಸೌಲಭ್ಯವು ಇರುತ್ತದೆ ಇವೆಲ್ಲ ಸೌಲಭ್ಯಗಳನ್ನು ತಿಳಿಯುತ್ತದೆ ಇದನ್ನು ಎಲ್ಲರೂ ಸದುಪಯೋಗದ ಪಡೆದುಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ನಾಗಮಣಿ ಮಂಜುನಾಥ್ ಮಾತನಾಡಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸರ್ಕಾರಗಳ ಯೋಜನೆಗಳು ಸಾರ್ವಜನಿಕರಿಗೆ ತಿಳಿಸಿದರೆ ಪಡೆದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆಐ ಬಸಾಪುರ ಗ್ರಾಮದಲ್ಲಿ ಬ್ಯಾಂಕ್ ಸೌಲಭ್ಯ ಇಲ್ಲದ ಕಾರಣ ಚನ್ನರಾಯಪಟ್ಟಣ ದೇವನಹಳ್ಳಿ ವಿಜಯಪುರಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಇದರಿಂದ ಐ ಬಸಾಪುರ ಗ್ರಾಮದಲ್ಲಿ ಬ್ಯಾಂಕ್ ಸೌಲಭ್ಯ ಹಾಗೂ ಎಟಿಎಂ ತೆರೆದರೆ ಜನರಿಗೆ ಅನುಕೂಲವಾಗುತ್ತದೆ ಎಂದು ಸಚಿವರಿಗೆ ಮನವಿ ಮಾಡಿದರು.
ಪ್ರಗತಿಪರ ರೈತರಿಗೆ ಸನ್ಮಾನಿಸಿದರು ರೈತರ ಔಷಧಿ ಸಿಂಪಡಣೆ ಮಾಡುವ ದ್ರೋಣ ಯಂತ್ರವನ್ನು ಪ್ರಾತ್ಯಕ್ಷಿಕೆ ತೋರಿಸಿದರು
ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಆದ ಮೋಹನ್ ಕುಮಾರ್ ಮಧುಕರ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಎವಿಎನ್ ನಾರಾಯಣಸ್ವಾಮಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎಚ್ ಎಮ್ ರವಿಕುಮಾರ್ ಜಿಲ್ಲಾ ಮುಖಂಡ ಎವಿಆರ್ ಪ್ರಭಾಕರ್ ಬುಳ್ಳಳ್ಳಿ ರಾಜಪ್ಪ ಗ್ರಾಮ ಮಾಜಿ ಅಧ್ಯಕ್ಷ ಆನಂದ್ ರಾಮೇಗೌಡ ಎಂ ಪಿ ಸಿ ಎಸ್ ಮಾಜಿ ಅಧ್ಯಕ್ಷ ಬಿ ರಾಜಣ್ಣ ಜಿಲ್ಲಾ ಹಾಗೂ ತಾಲೂಕು ಬಿಜೆಪಿ ಮುಖಂಡರುಗಳು ಇನ್ನು ಮುಂತಾದವರು ಹಾಜರಿದ್ದರು.