ಗುಡಿಬಂಡೆ: ಪರಿಸರ ನಾಶದಿಂದ ಹವಾಮಾನ ವೈಪರಿತ್ಯ ಉಂಟಾಗಿ ಮಳೆ ಇಲ್ಲದೆ ಬರಗಾಲದ ಛಾಯೆ ಆವರಿಸಿದ್ದರಿಂದ, ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಹಿರಿಯರು ನಿರ್ಮಸಿರುವ ಕಲ್ಯಾಣಿಗಳಿಗೆ ಮರು ಜೀವ ಕೊಡುವ ಆಗಬೇಕೆಂದು ಯೂತ್ ಫಾರ್ ಸೇವಾ ತಂಡದ ಸದಸ್ಯ ಮನೋಜ್ ಅಭಿಪ್ರಾಯ ಪಟ್ಟರು.
ಪಟ್ಟಣದ ಸಂತೆ ಮೈದಾನದ ಪಕ್ಕದಲ್ಲಿರುವ ಬೆಳಗಿರಿ ರಂಗನ ಬಾವಿಯಲ್ಲಿ ಗ್ರಾಮವಿಕಾಸ್, ಯೂತ್ ಫಾರ್ ಸೇವಾ ಸಂಸ್ಥೆಯ ಸದಸ್ಯರು ಹೂಳೆತ್ತುವ ಕೆಲಸವನ್ನು ಮಾಡಿದರು, ಈ ಸಂಧರ್ಬದಲ್ಲಿ ಮಾತನಾಡಿದ ಅವರು, ಬರಗಾಲದಿಂದ ಎಲ್ಲೆಲ್ಲೂ ಕುಡಿವ ನೀರಿಗೂ ಹಾಹಾಕಾರ ಎದುರಾಗಿದೆ, ಅಂತರ್ಜಾಲ ಮಟ್ಟ ಪಾತಾಳಕ್ಕೆ ಕುಸಿದಿದೆ,
ಪ್ರತಿಯೊಬ್ಬರು ಅಂತರ್ಜಾಲ ಮಟ್ಟ ಕುಸಿಯುತ್ತಿರುವ ಬಗ್ಗೆ ಮಾತನಾಡುತ್ತಿದ್ದಾರೆಯೇ ವಿನಃ, ಹೆಚ್ಚಿಸಲು ಬೇಕಾದ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲ ರಾಗುತ್ತಿದ್ದು, ಹಿಂದಿನ ಕಾಲದಲ್ಲಿ ಯಾವುದೇ ಕೊಳವೆ ಬಾವಿಗಳು ಇರಲಿಲ್ಲ, ಆಗ ಕಲ್ಯಾಣಿಗಳು, ಬಾವಿಗಳು, ಕೆರೆ ಕುಂಟೆಗಳೇ ಜನರಿಗೆ ನೀರಿನ ಮೂಲವಾಗಿತ್ತು, ಈಗ ಬಾವಿ, ಕಲ್ಯಾಣಿಗಳನ್ನು ಮುಚ್ಚಿ ಅದರ ಮೇಲೆ ಕಾಂಕ್ರೀಟ್ ಕಟ್ಟಡಗಳು ಏಳುತ್ತಿವೆ, ಇವು ಸಹ ಅಂತರ್ಜಾಲ ಮಟ್ಟ ಕುಸಿಯಲು ಕಾರಣವಾಗಿದೆ,
ಮುಂದಿನ ಪೀಳಿಗೆಯು ಶುದ್ದ ನೀರನ್ನು ಕುಡಿಯುವ ಬೇಕಾದರೆ ಇರುವು ಬಾವಿ, ಕಲ್ಯಾಣಿ, ಕೆರೆ ಕುಂಟೆಗಳ ಅಭಿವೃದ್ದಿಯಾಗಿ ನೀರು ಶೇಖರಣೆ ಆದರೆ ಮಾತ್ರ ಮುಂದಿನ ಪೀಳಿಗೆ ಬದುಕಲು ಸಾದ್ಯ, ಇಲ್ಲವಾದರೆ ಪೆಟ್ರೋಲ್ನ ರೀತಿಯಲ್ಲಿ ನೀರನ್ನು ಖರೀದಿ ಮಾಡಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ ಎಂದರು.
ನಂತರ ಮುಖಂಡ ಜಿ.ಕೆ.ಜಗನ್ನಾಥ್ ಮಾತನಾಡಿ ಹಿರಿಯರು ಪರಿಸರ ಉಳಿಸಲು ಅನೇಕ ಮಾರ್ಗಗಳಲ್ಲಿ ಅನೇಕ ಮಾರ್ಗಗಳನ್ನು ನಮಗೆ ಬಿಟ್ಟು ಕೊಟ್ಟಿದ್ದಾರೆ,
ಆದರೆ ಅವುಗಳನ್ನು ನಾವು ಅಭಿವೃದ್ದಿಯ ನೆಪದಲ್ಲಿ ಹಾಳು ಮಾಡಿ, ನಮ್ಮ ವಿನಾಶವನ್ನು ನಾವೇ ತಂದು ಕೊಳ್ಳುತ್ತಿದ್ದೇವೆ, ಹಿರಿಯರು ಕೊಟ್ಟಿರುವ ಅಲ್ಲಲ್ಲಿ ಉಳಿದಿರುವ ಕಲ್ಯಾಣಿಗಳನ್ನು ನಾವು ಉಳಿಸಿಕೊಳ್ಳದೆ ಮುಚ್ಚಿದ ಪಕ್ಷದಲ್ಲಿ ಕುಡಿಯುವ ನೀರಿಗೆ ಮತ್ತಷ್ಟು ಅಹಾಕಾರ ಎದುರಿಸಬೇಕಾಗುತ್ತದೆ ಎಂದರು.
ನಂತರ ಗುಂಪು ಮರದ ಆನಂದ್ ಮಾತನಾಡಿ,
ಹಿರಿಯರು ನದಿ ಮೂಲಗಳಿಲ್ಲದ ಜಾಗಗಳಲ್ಲಿ ಅಂತರ್ಜಲ ಹೆಚ್ಚಿಸಲು ಕಲ್ಯಾಣಿಗಳು, ಕೆರೆ, ಕುಂಟೆಗಳನ್ನು ನಿರ್ಮಾಣ ಮಾಡಿದ್ದು, ಅಂತಹ ಪ್ರದೇಶಗಳಿಗೆ ಕಲ್ಯಾಣಿಗಳು, ಕೆರೆ ಕುಂಟೆಗಳೇ ಪ್ರಮುಖ ಜಲ ಮೂಲಗಳಾಗಿದ್ದು, ಅಂತರ್ಜಲ ಹೆಚ್ಚಳ ಮಾಡುವ ಸಲುವಾಗಿ ಜಲ ಮೂಲಗಳ ಪುನಶ್ಚೇತನ ಮಾಡಬೇಕು ಎಂದರು.
ಈ ಸಂಧರ್ಬದಲ್ಲಿ ಮುಖಂಡರಾದ ರಾಜಗೋಪಾಲ್, ರವಿಕುಮಾರ್, ಚಿರಂಜೀವಿ, ಶಿಕ್ಷಕ ರಾಮಾಂಜಿನಪ್ಪ, ಎನ್.ನವೀನ್, ಯೂತ್ ಫಾರ್ ಸೇವ ಸಂಸ್ಥೆಯ ರಾಜ್ಯ ಸಂಚಾಲಕ ರಾಘವೇಂದ್ರ, ಸುರೇಶ್ ಕುಮಾರ್, ಬೇಶಾಜರ್, ಚಂದನ್ ಕುಮಾರ್, ದೀರಜ್, ಚಿನ್ಮಯ್, ಕುಸುಮ ಸೇರಿದಂತೆ ಮುಂತಾದವರು ಹಾಜರಿದ್ದರು.