ಮಡಿಕೇರಿ: ಕೊಡವ ಕೌಟುಂಬಿಕ ಹಾಕಿ ಕಪ್ ಅಂಗವಾಗಿ ನಡೆದ ಕುಂಡ್ಯೋಳಂಡ ಹಾಕಿ ಕೂಟ ಅಧಿಕೃತವಾಗಿ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ. ಫೈನಲ್ ಪಂದ್ಯದ ದಿನವಾದ ರವಿವಾರ ನಾಪೋಕ್ಲುವಿನ ಕೆಪಿಎಸ್ ಶಾಲಾ ಮೈದಾನದಲ್ಲಿ ಉಪಸ್ಥಿತರಿದ್ದ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಅಧಿಕಾರಿಗಳು ವಿಶ್ವದಾಖಲೆ ಪ್ರಮಾಣಪತ್ರವನ್ನು ಸಂಘಟಕರಿಗೆ ಹಸ್ತಾಂತರಿಸಿದರು.
ವಿಶ್ವದ ಬೃಹತ್ ಫೀಲ್ಡ್ ಹಾಕಿ ಕೂಟ ಎಂಬ ಹೆಗ್ಗಳಿಕೆಯನ್ನು ಕುಂಡ್ಯೋಳಂಡ ಹಾಕಿ ಹಬ್ಬ ಪಡೆದುಕೊಂಡಿದೆ. ಇದುವರೆಗೆ ಫೀಲ್ಡ್ ಹಾಕಿಯಲ್ಲಿ ಯಾರೂ ಈ ದಾಖಲೆ ಹೊಂದಿರಲಿಲ್ಲ. ಇದೇ ಮೊದಲ ಬಾರಿಗೆ ಈ ವಿಭಾಗದಲ್ಲಿ ನಾವು ಅರ್ಜಿ ಹಾಕಿ, ದಾಖಲೆ ನಿರ್ಮಿಸಿದ್ದೇವೆ ಎಂದು ಕೂಟದ ಸಂಘಟಕರು ಹೇಳಿದ್ದಾರೆ.