This is the title of the web page
This is the title of the web page

ಫೈನಲ್‍ಗೆ ಗುಜರಾತ್ ಲಗ್ಗೆ

ಅಹಮ್ಮದಾಬಾದ್: ಐಪಿಎಲ್ 2023 ರಲ್ಲಿ ಗುಜರಾತ್ ಟೈಟನ್ಸ್ ಫೈನಲ್ ಗೇರಿದೆ. ಮುಂಬೈ ಇಂಡಿಯನ್ಸ್ ವಿರುದ್ಧ 62 ರನ್ ಗಳ ಗೆಲುವು ಸಾಧಿಸಿದ ಗುಜರಾತ್ ಸತತ ಎರಡನೇ ಬಾರಿಗೆ ಫೈನಲ್ ತಲುಪಿದೆ.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಶುಬ್ಮನ್ ಗಿಲ್ ಅವರ ಭರ್ಜರಿ ಶತಕದ ನೆರವಿನಿಂದ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತು. ಗಿಲ್ ನಾಲ್ಕನೇ ಪಂದ್ಯದಲ್ಲಿ ಮೂರನೇ ಶತಕ ಸಿಡಿಸಿ ಮಿಂಚಿದರು. 60 ಎಸೆತಗಳಲ್ಲಿ 10 ಸಿಕ್ಸರ್ ಸಹಿತ 129 ರನ್ ಗಳಿಸಿ ಮುಂಬೈ ಬೌಲರ್ ಗಳನ್ನು ಗೋಳಾಡಿಸಿದರು. ಅವರಿಗೆ ಆರಂಭದಲ್ಲೇ ಸಿಕ್ಕ ಜೀವದಾನ ಮುಂಬೈಗೆ ದುಬಾರಿಯಾಯಿತು. ತಕ್ಕ ಸಾಥ್ ನೀಡಿದ ಸಾಯಿ ಸುದರ್ಶನ್ 43 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈಗೆ ಆರಂಭಿಕರು ಕೈಕೊಟ್ಟರು. ಇಶಾನ್ ಕಿಶನ್ ಗಾಯಗೊಂಡಿದ್ದರಿಂದ ರೋಹಿತ್ ಶರ್ಮಾ ಜೊತೆಗೆ ನೆಹಾಲ್ ವಧೇರಾ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಕ್ಯಾಮರೂನ್ ಗ್ರೀನ್ 30, ಸೂರ್ಯಕುಮಾರ್ ಯಾದವ್ 61, ತಿಲಕ್ ವರ್ಮ 43 ರನ್ ಗಳಿಸಿದರು. ಈ ಮೂವರನ್ನು ಬಿಟ್ಟರೆ ಉಳಿದ ಎಲ್ಲರದ್ದು ಏಕಂಕಿ ಸಾಧನೆ. ಇದರಿಂದಾಗಿ ಮುಂಬೈ 18.2 ಓವರ್ ಗಳಲ್ಲಿ 171 ರನ್ ಗಳಿಗೆ ಆಲೌಟ್ ಆಯಿತು. ಗುಜರಾತ್ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಮೋಹಿತ್ ಶರ್ಮಾ 5 ವಿಕೆಟ್ ಗಳ ಗೊಂಚಲು ಪಡೆದರು.