ಐಪಿಎಲ್ 2026ರ ಗುಂಪು ಹಂತದಲ್ಲಿ ಉತ್ತಮವಾಗಿ ಆಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಈವರೆಗೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವ ಗುಜರಾತ್ ಟೈಟಾನ್ಸ್ ಇದೀಗ ಮುಖಾಮುಖಿಯಾಗಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಈವರೆಗ ಆಡಿರುವ 2 ಪಂದ್ಯಗಳನ್ನೂ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದರೆ, ಗುಜರಾತ್ ತಂಡ ಎರಡೂ ಪಂದ್ಯಗಳಲ್ಲಿ ಪರಾಭವ ಅನುಭವಸಿದೆ. ಉಭಯ ತಂಡಗಳು 7 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಡೆಲ್ಲಿ3 ಮತ್ತು ಗುಜರಾತ್ 4ರಲ್ಲಿ ಜಯ ಗಳಿಸಿವೆ. ಏಪ್ರಿಲ್ 8ರಂದು ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಇತ್ತಂಡಗಳು ಗೆಲುವಿಗಾಗಿ ಪೈಪೋಟಿ ನಡೆಸಲಿವೆ.ಆಲ್ರೌಂಡರ್ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿದ್ದು 4 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಲ್ಲಿದೆ. ಆದರೆ ಅಗ್ರ ಕ್ರಮಾಂಕದ ಬ್ಯಾಟರ್ಗಳಾದ ಕನ್ನಡಿಗ ಕೆಎಲ್ ರಾಹುಲ್ ಮತ್ತು ಪಾತುಮ್ ನಿಸ್ಸಾಂಕ ಅವರು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡದಿರುವುದು ತಂಡದ ಮ್ಯಾನೇಜ್ ಮೆಂಟ್ ನ ತಲೆನೋವಿಗೆ ಕಾರಣವಾಗಿದೆ. ಆರಂಭಿಕರು ವಿಫಲರಾದರೂ 4ನೇ ಕ್ರಮಾಂಕದಲ್ಲಿ ಆಢುವ 22 ವರ್ಷದ ಸಮೀರ್ ರಿಜ್ವಿ ಹಿಂದಿನ ಎರಡು ಪಂದ್ಯಗಳಲ್ಲಿ ಸ್ಥಿರ ಬ್ಯಾಟಿಂಗ್ ನೀಡಿರುವುದರಿಂದ ಗೆಲುವಿನ ಹಾದಿಯಲ್ಲಿದೆ. ಮಧ್ಯಮ ಕ್ರಮಾಂಕದಲ್ಲಿ ಅಕ್ಷರ ಪಟೇಲ್ ಮತ್ತು ಡೇವಿಡ್ ಮಿಲ್ಲರ್ ಅವರು ಇರುವುದರಿಂದ ತಂಡದ ಬ್ಯಾಟಿಂಗ್ ಬಲಾಢ್ಯಲಾಗಿದೆ.ಬಲಿಷ್ಠ ಡೆಲ್ಲಿ ಬೌಲಿಂಗ್ಬೌಲಿಂಗ್ ನ ವಿಚಾರ ಬಂದಾಗ ಮಿಚೆಲ್ ಸ್ಟಾರ್ಕ್ ಅನುಪಸ್ಥಿತಿಯಲ್ಲೂ ಲುಂಗಿ ಎನ್ ಗಿಡಿ, ಮುಕೇಶ್ ಕುಮಾರ್, ಕುಲ್ದೀಪ್ ಯಾದವ್ ಮೊದಲಾದವರು ಉತ್ತಮ ಬೌಲಿಂಗ್ ಸಂಘಟಿಸುತ್ತಿದ್ದಾರೆ. ಅಕ್ಷರ್ ಪಟೇಲ್ ಅವರು ಸಹ ಯಾವುದೇ ಸಂದರ್ಭದಲ್ಲಿ ಬೌಲಿಂಗ್ ಗೆ ಇಳಿದು ವಿಕೆಟ್ ಎತ್ತಬಲ್ಲ ಛಾತಿಯನ್ನು ಹೊಂದಿದ್ದಾರೆ. ಇಂತಿಪ್ಪ ಡೆಲ್ಲಿ ತಂಡ ಇದೀಗ ಗುಜರಾತ್ ತಂಡವನ್ನು ಮಣಿಸಿ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದೆ.ಪಿಚ್ ಹೇಗಿದೆ? ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಗೆ ಸಹಕಾರಿ. ಸಮತಟ್ಟಾದ ಪಿಚ್ ನಲ್ಲಿ ಬ್ಯಾಟ್ಸ್ಮನ್ಗಳು ಆರಂಭದಲ್ಲಿ ಮುಕ್ತವಾಗಿ ಆಡಿ ರನ್ ಕೊಳ್ಳೆ ಹೊಡೆಯಬಹುದು. ಆಟ ಮುಂದುವರೆದಂತೆ ಮಧ್ಯಮ ಓವರ್ಗಳಲ್ಲಿ ಸ್ಪಿನ್ನರ್ಗಳು ಹಿಡಿತ ಸಾಧಿಸಬಹುದು. ಮೈದಾನದ ಹೊರಾಂಗಣ ವೇಗವಾಗಿರುವುದರಿಂದ ಚೆಂಡು ರನ್ ಗಳಿಸಲು ಸುಲಭ.



