ಮುಂಬೈ: ಡಬ್ಲ್ಯುಪಿಎಲ್ ಕೂಟದ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ಪರಸ್ಪರ ಸೆಣಸಾಡಲಿವೆ.
ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಕೂಟದ ಮೊದಲ ಸೋಲು ಅನುಭವಿಸಿತ್ತು.
ಅತ್ತ ಗುಜರಾತ್ ಕಳೆದ ಪಂದ್ಯದಲ್ಲಿ ಕೂಟದ ಮೊದಲ ಗೆಲುವು ಸಂಪಾದಿಸಿತ್ತು. ಗುಜರಾತ್ ಗೆ ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಇಂದು ಗೆಲುವು ಅನಿವಾರ್ಯ.
ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಒಂದು ಪಂದ್ಯ ಬಿಟ್ಟರೆ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಮಿಂಚಿದೆ. ಗುಜರಾತ್ ಗೆ ಕಳೆದ ಪಂದ್ಯದಲ್ಲಿ ಸೋಫಿಯಾ ಡಂಕ್ಲಿ ಅತ್ತುತ್ತಮ ಆರಂಭ ಒದಗಿಸಿದ್ದಾರೆ. ಹೀಗಾಗಿ ಇಂದು ಮತ್ತೊಮ್ಮೆ ಪೈಪೋಟಿ ಭರಿತ ಪಂದ್ಯ ನಿರೀಕ್ಷಿಸಬಹುದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.
Leave a Review