ಅಹ್ಮದಾಬಾದ್: ಕಳೆದ ಪಂದ್ಯದಲ್ಲಿ ಮಾಯಾಂಕ್ ಯಾದವ್ ಅವರ ಬಿರುಗಾಳಿಯ ವೇಗಕ್ಕೆ ದಿಕ್ಕಾಪಾಲಾದ ಪಂಜಾಬ್ ಕಿಂಗ್ಸ್ ಗುರುವಾರದ ಐಪಿಎಲ್ ಪಂದ್ಯದಲ್ಲಿ ವಿಭಿನ್ನ ಸವಾಲಿಗೆ ಅಣಿಯಾಗಬೇಕಿದೆ.
ಅಹ್ಮದಾಬಾದ್ನಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ. ಸತತ 2 ಪಂದ್ಯಗಳನ್ನು ಸೋತು ಕಂಗೆಟ್ಟಿರುವ ಶಿಖರ್ ಧವನ್ ಪಡೆಗೆ ಇದು ನಿಜಕ್ಕೂ ಅಗ್ನಿಪರೀಕ್ಷೆ.
ಗುಜರಾತ್ ಟೈಟಾನ್ಸ್ ಕಳೆದ ಪಂದ್ಯವನ್ನೂ ತವರಿನಂಗಳದಲ್ಲೇ ಆಡಿತ್ತು. ಹಿಂದಿನ ಪಂದ್ಯದಲ್ಲಷ್ಟೇ ದಾಖಲೆಯ ಮೊತ್ತ ಪೇರಿಸಿ ಬಂದಿದ್ದ ಸನ್ರೈಸರ್ ಹೈದರಾಬಾದ್ ಮರು ಪಂದ್ಯದಲ್ಲೇ ಗಿಲ್ ಪಡೆಗೆ ಮಂಡಿಯೂರಿದ್ದನ್ನು ಮರೆಯುವಂತಿಲ್ಲ. ಹೈದರಾಬಾದ್ಗೆ ಗಳಿಸಲು ಸಾಧ್ಯವಾದದ್ದು 8ಕ್ಕೆ 162 ರನ್ ಮಾತ್ರ. ಇದನ್ನು ಗುಜರಾತ್ ಮೂರೇ ವಿಕೆಟ್ ನಷ್ಟದಲ್ಲಿ ಹಿಂದಿಕ್ಕಿತ್ತು.