ಟೊರಾಂಟೊ: ಭಾರತದ ಗ್ರ್ಯಾಂಡ್ ಮಾಸ್ಟರ್ ಡಿ.ಗುಕೇಶ್ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ಐದನೇ ಸುತ್ತಿನಲ್ಲಿ ಅಜರ್ಬೈಜಾನ್ನ ನಿಜತ್ ಅಬಸೋವ್ ಅವರನ್ನು ಮಣಿಸಿ ಜಂಟಿ ಅಗ್ರಸ್ಥಾನಕ್ಕೆ ಏರಿದರು.
ಒಂಬತ್ತು ಸುತ್ತುಗಳು ಬಾಕಿಯಿದ್ದು, 17 ವರ್ಷದ ಗುಕೇಶ್ ಮತ್ತು ರಷ್ಯಾದ ಇಯಾನ್ ನೆಪೊಮ್ನಿಯಾಚಿ (ಫಿಡೆ) ಅವರೊಂದಿಗೆ 3.5 ಪಾಯಿಂಟ್ಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.ಅಗ್ರಶ್ರೇಯಾಂಕದ ಫ್ಯಾಬಿಯಾನೊ ಕರುವಾನ (ಅಮೆರಿಕ) ಅರ್ಧ ಪಾಯಿಂಟ್ನಿಂದ ಹಿಂದೆ ಇದ್ದಾರೆ.
ದಿನದ ಇತರ ಪಂದ್ಯಗಳಲ್ಲಿ ಅಮೆರಿಕದ ಹಿಕಾರು ನಕಾಮುರಾ ಅವರು ಫ್ರಾನ್ಸ್ನ ಫಿರೋಜಾ ಅಲಿರೆಜಾ ವಿರುದ್ಧ ಗೆಲುವು ಸಾಧಿಸಿದರೆ, ಭಾರತದ ಆರ್. ಪ್ರಜ್ಞಾನಂದ ಅವರು ಇಯಾನ್ ಅವರೊಂದಿಗೆ ಡ್ರಾ ಮಾಡಿಕೊಂಡರು. ಭಾರತದ ಮತ್ತೊಬ್ಬ ಆಟಗಾರ ವಿದಿತ್ ಗುಜರಾತಿ ಕೂಡ ಕರುವಾನಾ ವಿರುದ್ಧ ಡ್ರಾ ಸಾಧಿಸಿದರು.