ಈಗಾಗಲೇ ತನ್ನ ಬೀಡುಬೀಸಾದ ಬ್ಯಾಟಿಂಗ್ ನಿಂದ ಕ್ರಿಕೆಟ್ ಜಗತ್ತಿನಲ್ಲೇ ಹೊಸ ಸಂಚಲನ ಸೃಷ್ಟಿಸಿರುವ ವೈಭವ್ ಸೂರ್ಯವಂಶಿ ಮತ್ತು ಪ್ರಸ್ತುತ ವಿಶ್ವದ ನಂಬರ್ ಒನ್ ವೇಗದ ಬೌಲರ್ ಜಸ್ಟ್ರೀತ್ ಬುಮ್ರಾ ಮುಖಾಮುಖಿಯಾದರೆ ಏನಾಗಬಹುದು. ಈ ಕುತೂಹಲಕ್ಕೆ ಉತ್ತರವಾಗಲಿದೆ ಏಪ್ರಿಲ್ 7ರಂದು ಗುವಾಹಟಿಯ ಬಾರ್ಸಾಪರ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ. ತನ್ನ ಗತದಿನ ವೈಭವಕ್ಕೆ ಮರಳಲು ಪ್ರಯತ್ನಿಸುತ್ತಿರುವ ಮುಂಬೈ ಮತ್ತು ಈ ಸೀಸನ್ ನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ರಾಜಸ್ಥಾನಗಳ ನಡುವಿನ ಹಣಾಹಣಿ ಬಹಳ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಇದೆ.
ಲೀಗ್ ಹಂತದಲ್ಲಿ 2 ಪಂದ್ಯಗಳನ್ನು ಆಡಿರುವ ರಾಜಸ್ಥಾನ ಎರಡನ್ನೂ ಗೆದ್ದು 4 ಅಂಕಗಳೊAದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಆರ್ ಸಿಬಿ ಬಳಿಕ 2ನೇ ಸ್ಥಾನದಲ್ಲಿದೆ. ಇದೇವೇಳೆ ಆಡಿರುವ 2 ಪಂದ್ಯಗಳಲ್ಲಿ ಒಂದನ್ನು ಗೆದ್ದಿರುವ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮೊದಲ ಪಂದ್ಯವನ್ನು ಗೆದ್ದಿದ್ದ ಮುಂಬೈ 2ನೇ ಪಂದ್ಯದಲ್ಲಿ ಡಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನುಭವಿಸಿದ್ದರು. ಈ ಹಿಂದಿನ ದಾಖಲೆಗಳನ್ನು ಗಮನಿಸಿದಲ್ಲಿ ಮುಂಬೈ ಮತ್ತು ರಾಜಸ್ಥಾನಗಳೆರಡೂ ಮೈದಾನದಲ್ಲಿ ಜಗಜಟ್ಟಿಗಳಂತೆ ಕಾದಾಡಿವೆ. ಈವರೆಗೆ ನಡೆದಿರುವ 31 ಪಂದ್ಯಗಳಲ್ಲಿ 16 ಪಂದ್ಯಗಳನ್ನು ಮುಂಬೈ ಗೆದ್ದಿದ್ದರೆ, 14 ಬಾರಿ ರಾಜಸ್ಥಾನ ಗೆಲುವಿನ ನಗು ಬೀರಿದೆ. ಒಂದು ಪಂದ್ಯ ರದ್ದಾಗಿದೆ.
ಮರಳಿದ ಹಾರ್ದಿಕ್ ಪಾಂಡ್ಯ ಈ ಹಿಂದಿನ ಪಂದ್ಯದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿ ಮುಂಬೈ ತಂಡಕ್ಕೆ ದೊಡ್ಡ ಹೊಡೆತ ನೀಡಿತ್ತು. ಹಂಗಾಮಿ ನಾಯಕರಾಗಿ ಕಾರ್ಯನಿರ್ವಿಹಿಸಿದ್ದ ಸೂರ್ಯಕುಮಾರ್ ಯಾದವ್ ಅವರು ತಂಡಕ್ಕೆ ಗೆಲುವು ತಂದುಕೊಡಲು ಶ್ರಮಿಸಿದರೂ ಸಾಧ್ಯವಾಗಿರಲಲ್ಲ. ಇದೀಗ ಹಾರ್ದಿಕ್ ಅವರು ಗುಣಮುಖರಾಗಿ ತಂಡವನ್ನು ಸೇರಿಕೊಳ್ಲುವ ಸಾಧ್ಯತೆ ಹೆಚ್ಚಿದ್ದು ಮುಂಬೈ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.ಪಿಚ್ ವರದಿ ಗುವಾಹಟಿಯ ಬಾರ್ಸಾಪರ ಕ್ರೀಡಾಂಗಣದಲ್ಲಿರುವ ಪಿಚ್ ಬ್ಯಾಟಿಂಗ್ ಸ್ನೇಹಿ ಎಂದೇ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ. ಹೀಗಾಗಿ ಪಂದ್ಯ ದೊಡ್ಡ ಮೊತ್ತವನ್ನು ಕಾಣುವುದು ಖಚಿತ. ಈ ಪಿಚ್ ನಲ್ಲಿ ಉತ್ತಮ ಬೌನ್ಸ್ ಇರುವುದರಿಂದ ಬ್ಯಾಟ್ಸ್ಮನ್ಗಳು ಹೆಚ್ಚು ಆತ್ಮವಿಶ್ವಾಸ ಮತ್ತು ಮುಕ್ತವಾಗಿ ಆಡಲು ಸಾಧ್ಯ. ಪಂದ್ಯದ ಆರಂಭಿಕ ಓವರ್ ಗಳಲ್ಲಿ ವೇಗದ ಬೌಲರ್ಗಳು ಪಿಚ್ ನಿಂದ ಲಾಭ ಪಡೆಯಬಹುದಾದರೂ ಹೊತ್ತು ಹೋದಂತೆ ಬ್ಯಾಟಿಂಗ್ ಗೆ ಅನು?ಕಲಕರವಾದ ವಾತಾವರಣ ನಿರ್ಮಾಣವಾಗುತ್ತದೆ. ಎರಡನೇ ಇನ್ನಿಂಗ್ಸ್ ನಲ್ಲಿ ಇಬ್ಬನಿ ಮಹತ್ವದ ಪಾತ್ರ ವಹಿಸುವುದರಿಂದ ಬೌಲರ್ ಗಳು ರನ್ ನಿಯಂತ್ರಣ ಮತ್ತು ವಿಕೆಟ್ ಗಳಿಕೆಗೆ ಹರಸಾಹಸ ಪಡಬೇಕು. ಈ ಕ್ರೀಡಾಂಗಣದಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ 167 ಆಗಿದೆ.ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚು.
ಬುಮ್ರಾ V/s ಸೂರ್ಯವಂಶಿ ಫೈಟ್ಗೆ ಗುವಾಹಟಿ ರೆಡಿ



