ಧಾರವಾಡ: ಬೆಂಗಳೂರು ದಕ್ಷಿಣದ ಚಿರಂತ್ ವಿ.ಶೆಟ್ಟಿ ಮತ್ತು ಧಾರವಾಡದ ದಾನೇಶ್ವರಿ ಕಮ್ಮಾರ್ ಅವರು ಮಂಗಳವಾರ ನಗರದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳ ರಾಜ್ಯಮಟ್ಟದ ಜಿಮ್ನಾಸ್ಟಿಕ್ಸ್ ಸ್ಪರ್ಧೆಯ 17 ವರ್ಷದೊಳಗಿನ ಆಲ್ರೌಂಡರ್ ವಿಭಾಗದಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಗಳಿಸಿದರು.
ಬೆಂಗಳೂರು ದಕ್ಷಿಣದ ವಾರುಣಿ ಬಿ.ಎಸ್. ಅವರು ರಿದಮ್ಯಾಟಿಕ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.ಬಾಲಕರ ಆಲ್ರೌಂಡರ್ ಚಾಂಪಿಯನ್ ವಿಭಾಗದಲ್ಲಿ ಧಾರವಾಡದ ಗಂಗಾಧರ ಮಟ್ಟಿ ದ್ವಿತೀಯ ಮತ್ತು
ಶ್ರೇಯಸ್ ಮಾನೆ ತೃತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ದಕ್ಷಿಣದ ರಿಷ್ಯಾ ಕೆ. ದ್ವಿತೀಯ ಹಾಗೂ ಸೋನಿಕಾ ಗೌಡ ತೃತೀಯ ಸ್ಥಾನ ಗಳಿಸಿದರು.
ರಿದಮ್ಯಾಟಿಕ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯ ಬಾಲಕಿಯರ ಚಾಂಪಿಯನ್ ವಿಭಾಗದಲ್ಲಿ ಬೆಂಗಳೂರು ದಕ್ಷಿಣದ ಪ್ರಾರ್ಥನಾ ಕೆ.ಆರ್. ದ್ವಿತೀಯ ಹಾಗೂ ಧಾರವಾಡದ ಸೌಮ್ಯಾ ಕಿತ್ತೂರು ತೃತೀಯ ಸ್ಥಾನ ಪಡೆದರು.