ತುಘಲಕ್ ಖ್ಯಾತಿಯ ಅರವಿಂದ್ ಕೌಶಿಕ್ ನಿರ್ದೇಶನದ ಮತ್ತೊಂದು ಪ್ರೇಮ್ಕಹಾನಿ ಅರ್ದಂಬರ್ಧ ಪ್ರೇಮಕಥೆ. ಇದೇ ಶುಕ್ರವಾರ ತೆರೆಕಾಣಲು ಸಿದ್ದವಾಗಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಬಿಗ್ಬಾಸ್ ಖ್ಯಾತಿಯ ದಿವ್ಯಾ ಉರಡುಗ ಹಾಗೂ ಅರವಿಂದ್ ಕೆಪಿ. ಈ ಚಿತ್ರದಲ್ಲಿ ಯುವ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ತನ್ನ ಟೀಸರ್, ಹಾಡುಗಳಿಂದ ಚಿತ್ರಪ್ರೇಮಿಗಳ ಮನ ಗೆದ್ದಿರುವ ಈ ಚಿತ್ರ ಹಲವಾರು ಕಾರಣಗಳಿಂದ ಸುದ್ದಿಯಲ್ಲಿದೆ. ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯ ಅವರು ಚಿತ್ರಕ್ಕೆ 4 ಸುಂದರ ಹಾಡುಗಳನ್ನು ಕಂಪೋಜ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅರವಿಂದ್ ಕೌಶಿಕ್, ಇದೇ ಶುಕ್ರವಾರ ನಮ್ಮಚಿತ್ರ ಬಿಡುಗಡೆಯಾಗುತ್ತಿದ್ದು,
ಈಗ ಟ್ರೈಲರ್ ಲಾಂಚ್ ಮಾಡಿದ್ದೇವೆ, ಇದೊಂದು ಲವ್ಸ್ಟೋರಿ ವಿಥೌಟ್ ಲವ್. ನಾಯಕ, ನಾಯಕಿ ಇಬ್ಬರೂ ಒಂದಾಗಬೇಕು ಅನ್ನೋದೇ ನೋಡುಗರ ಆಸೆಯಾಗಿರುತ್ತೆ, ಅವರು ಒಂದಾಗ್ತಾರಾ, ಇಲ್ವಾ ಅಂತ ಹೇಳೋದೇ ಈ ಚಿತ್ರ. ಇದು ಪ್ಯಾನ್ ಹೃದಯಗಳ ಕಥೆ.