ವೈವಾಹಿಕ ಜೀವನದಲ್ಲಿ ಕಹಿ ಅನುಭವಿಸಿರುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರು ಇದೀಗ ಮತ್ತೆ ಪ್ರೇಮಪಾಶದಲ್ಲಿ ಬಿದ್ದಿದ್ದಾರಾ? ಈ ಬಗ್ಗೆ ಯಾವುದೇ
ಖಚಿತತೆ ಇಲ್ಲ. ಆದರೆ ಟೀಂ ಇಂಡಿಯಾ ವೈಟ್ ಬಾಲ್ ತಂಡದ ಆಲ್ರೌಂಡರ್ ಮುಂಬೈನಲ್ಲಿ ಯುವತಿಯೊಬ್ಬಳೊAದಿಗೆ ಕಾಣಿಸಿಕೊಂಡಿರುವುದು ಇದೀಗ ಊಹಾಪೋಹಕ್ಕೆ ಕಾರಣವಾಗಿದೆ. ರೂಪದರ್ಶಿಯಾಗಿರುವ ಮಹೈಕಾ ಶರ್ಮಾ ಅವರೇ ಹಾರ್ದಿಕ್ ಪಾಂಡ್ಯ ಅವರ ಜೊತೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಯುವತಿ ಎಂದು ತಿಳಿದು ಬಂದಿದೆ. ಈ ಬಗ್ಗೆ ಇವರಿಬ್ಬರೂ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಅಥವಾ ಪೋಸ್ಟ್ ಮಾಡಿಲ್ಲ.
ಆದರೂ, ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿರುವುದು ಇವರ ಸಂಬAಧ ಅಧಿಕೃತವಾಗಿದೆ ಎಂದು ಗಾಳಿಸುದ್ದಿಯಾಗಿರುವುದು ಮಾತ್ರ ಸುಳ್ಳಲ್ಲ.
ವಿವಾಹ ವಿಚ್ಛೇದನ ಪಡೆದಿರುವ ಕ್ರಿಕೆಟಿಗರಾಗಿರುವ ಶಿಖರ್ ಧವನ್ ಮತ್ತು ಯುಜುವೇಂದ್ರ ಚಹಲ್ ಅವರು ತಮ್ಮ ನೂತನ ಸ್ನೇಹಿತೆಯರೊಂದಿಗೆ ಈಗಾಗಲೇಕಾಣಿಸಿಕೊಂಡಿದ್ದಾರೆ. ಆದರೆ ೨೦೨೪ ರಲ್ಲಿ ವಿಚ್ಛೇದನ ಪಡೆದ ನಂತರ ಹಾರ್ದಿಕ್ ಪಾಂಡ್ಯ ಅವರು ಯುವತಿಯೊಬ್ಬಳ ಜೊತೆ ಸಾರ್ವಜನಿಕವಾಗಿ
ಕಾಣಿಸಿಕೊಂಡಿರುವುದು ಇದೇ ಮೊದಲು. ಇದರ ಫೋಟೋ ಮತ್ತು ವಿಡಿಯೋಗಳು ಇದೀಗ ವೈರಲ್ ಆಗಿವೆ.
ಮುಂಬೈ ಇಂಡಿಯನ್ಸ್ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಭಾರತ ತಂಡದ ಪ್ರಮುಖ ಆಲ್ರೌಂಡರ್ ಆಗಿದ್ದಾರೆ. ಇತ್ತೀಚೆಗೆ ಏಷ್ಯಾ ಕಪ್ ಸೂಪರ್ ೪ ಪಂದ್ಯದ ವೇಳೆ ಲ್ ನಲ್ಲಿ ಅವರು ಆಡಲು ಸಾಧ್ಯ ಆಗಿರಲಿಲ್ಲ. ಗಾಯದಿಂದ ಇನ್ನೂ ಅವರು ಚೇತರಿಸಿಕೊಳ್ಳದ್ದರಿಂದ ಅವರನ್ನು ಆಸ್ಟೆçÃಲಿಯಾ ವಿರುದ್ಧ ವೈಟ್ ಬಾಲ್ ಸರಣಿಗೂ ಅವರನ್ನು ಬಿಸಿಸಿಐ ಆಯ್ಕೆ ಮಂಡಳಿ ಪರಿಗಣಿಸಿಲ್ಲ. ಇದೀಗ ಅವರು ಯುವತಿಯೊಂದಿಗೆ ಕಾಣಿಸಿಕೊAಡಿರುವುದು ತೀವ್ರ ಚರ್ಚೆಗೆ
ಕಾರಣವಾಗಿದೆ.
ಮಹೈಕಾ ಶರ್ಮಾ ಯಾರು? ಮಹೈಕಾ ಶರ್ಮಾ ಒಬ್ಬ ಭಾರತೀಯ ಫ್ಯಾಷನ್ ಮಾಡೆಲ್. ಅವರು ತಮ್ಮ ಹೆಸರಿನಲ್ಲಿ ಹಲವಾರು ಪ್ರಮುಖ ಸಾಧನೆಗಳನ್ನು ಹೊಂದಿದ್ದಾರೆ. ಅವರ ಇನ್ಸ್ಟಾಗ್ರಾಂ ಬಯೋಗ್ರಫಿ ಪ್ರಕಾರ, ಅವರು Iಈಂ ಮಾಡೆಲ್ ಆಫ್ ದಿ ಇಯರ್, ಉಕಿ ಬೆಸ್ಟ್ ಡ್ರೆಸ್ಡ್, ಇಂಡಿಯಾಸ್ ನೆಕ್ಸ್÷್ಟ ಸೂಪರ್ಮೋಡೆಲ್, ಮತ್ತು ಎಲ್ ಮಾಡೆಲ್ ಆಫ್ ದಿ ಸೀಸನ್ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.