ಮೇ 2ನೇ ತಾರೀಖು ಹ್ಯಾರಿ ಪಾಟರ್ ಡೇ ಆಗಿ ಆಚರಿಸುತ್ತೇವೆ. ಹ್ಯಾರಿ ಪಾಟರ್ ಕಾದಂಬರಿ ಸರಣಿಯ ಪ್ರಮುಖ ಪಾತ್ರ ಹ್ಯಾರಿ ಪಾಟರ್ ಕಾದಂಬರಿಯನ್ನು ಮೊದಲಿಗೆ 1997ರಲ್ಲಿ ಬರೆದವರು ಜೆಕೆ ರೌಲಿಂಗ್ರವರು ಈ ಪುಸ್ತಕ ಸರಣಿಯು ಬಹಳ ಪ್ರಸಿದ್ಧಿಯನ್ನು ಪಡೆದು 2001ರಿಂದ ಈ ಸರಣಿ ಕಾದಂಬರಿಯು ಚಲನಚಿತ್ರವಾಗಿಯೂ ಪ್ರಸಿದ್ದಿ ಹೊಂದಿದೆ.
ಹ್ಯಾರಿ ಪಾಟರ್ ಪಾತ್ರದ ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ಕಲಿಯಬೇಕು ಎನ್ನುವುದು ಈ ಆಚರಣೆಯ ಮುಖ್ಯ ಉದ್ದೇಶ 2012ರಲ್ಲಿ ಯುನೈಟೆಡ್ ಕಿಂಗ್ಡಂನ ಅಧ್ಯಕ್ಷರಾದ ಡೇವಿಡ್ ಕ್ಯಾಮರಾನ್ ಅಧಿಕೃತವಾಗಿ ಮೇ 2ರನ್ನು ಹ್ಯಾರಿ ಪಾಟರ್ ಡೇ ಎಂದು ಘೋಷಿಸಿದರು.ಹ್ಯಾರಿ ಪಾಟರ್ ಡೇ ಹೇಗೆ ಆಚರಿಸಬಹುದು ಎಂದರೆ ಹ್ಯಾರಿ ಪಾಟರ್ ಪುಸ್ತಕ ಖರೀದಿಸಿ ಓದಿ ಅಥವಾ ಹ್ಯಾರಿ ಪಾಟರ್ ಸಿನೇಮಾ ವಿಕ್ಷೀಸಿ ದಿನದ ಆಚರಣೆಯನ್ನು ಮಾಡಬಹುದಾಗಿದೆ.
ಹ್ಯಾರಿ ಪಾಟರ್ ಪುಸ್ತಕದ ಬಗೆಗೆ ನಾನು ತಿಳಿದಿರಬೇಕಾದ ಕೆಲಸವು ಸತ್ಯಗಳು :ಹ್ಯಾರಿ ಪಾಟರ್ ನ ಲೇಖಕಿ ಜೆಕೆ ರೌಲಿಂಗ್ ಅವರ ಹೆಸರಿನಲ್ಲಿ ಅತೀ ಹೆಚ್ಚು ಮಾರಾಟವಾದ ಪುಸ್ತಕದ ಗಿನ್ನಿಸ್ ವಲ್ರ್ಡ್ ರೆಕಾರ್ಡ್ ಇದೆ.ಹ್ಯಾರಿ ಪಾಟರ್ನ ಹುಟ್ಟುಹಬ್ಬ ಜುಲೈ 31ರಂದು ಇದ್ದು ಲೇಖಕಿಯ ಜನ್ಮ ದಿನವೂ ಅಂದೇ ಆಗಿದೆ.
ರೌಲಿಂಗ್ ಅವರಿಗೆ ಸಿನೆಮಾದಲ್ಲಿ ಹ್ಯಾರಿ ಪಾಟರ್ ತಾಯಿಯ ಪಾತ್ರ ನಿರ್ವಹಣೆ ಮಾಡಲು ಕೇಳಲಾಗಿತ್ತು. ಆದರೆ ಅವರು ಅದನ್ನು ಅಭಿನಯಿಸಲಿಲ್ಲ.
ಹ್ಯಾರಿ ಪಾಟರ್ ಸರಣೆಇಯಲ್ಲಿ 7 ಪುಸ್ತಕಗಳಿವೆ.
ಕಾಲ್ಪನಿಕ ಪಾತ್ರಗಳ ಫೆಂಟಾಸಿ ಕತೆಯ ರೋಚಕ ಪುಸ್ತಕವಾಗಿರುವ ಈ ಪುಸ್ರಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಮನರಂಜನೆ ಮಾಡುವ ಪುಸ್ತಕ/ಸಿನೇಮಾ ಆಗಿದೆ. ಜೊತೆಗೆ ವೆಬ್ ಸಿರೀಸ್ ಕೂಡ ಮಾಡಿದ್ದಾರೆ ಹ್ಯಾರಿ ಪಾಟರ್ ಕಥೆಗಳಲ್ಲಿ ದುಷ್ಟ ಶಕ್ತಿ ಮತ್ತು ಒಳ್ಳೆಯ ಶಕ್ತಿಗಳ ನಡುವಿನ ಯುದ್ಧಗಳನ್ನು ಚಿತ್ತಿಸಿದೆ.
ಲೇಖಕಿಯಾದ ಜೋನಿ ರೌಲಿಂಗ್ ಬ್ರಿಟೀಷ್ ಲೇಖಕಿ, ಅವರ ಜನನ ಜುಲೈ 31 , 1965ರಲ್ಲಿ ಆಗಿದೆ. ಹ್ಯಾರಿ ಪಾಟರ್ ಸರಣಿಯು 1997ರಿಂದ 2007ರವರೆಗೆ 7 ಭಾಗಗಳಲ್ಲಿ ಮುದ್ರಿತವಾಗಿದ್ದು 600 ಮಿಲಿಯನ್ ಪ್ರತಿ ಮಾರಾಟವಾಗಿದ್ದು ಇದು ಗಿನ್ನೆಸ್ ದಾಖಲೆಯಲ್ಲಿ ಸೇರಿಕೊಂಡಿದೆ. ಲೇಖಕಿ ಸಂಶೋಧಕಿಯಾಗಿ ದ್ವಿಭಾಷ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.
ಲೇಖಕಿ ತನ್ನ ಮೊದಲ ಮಗುವಿನ ಜನನದ ನಂತರ ಪತಿಯಿಂದ ವಿಚ್ಚೇದನ ಪಡೆದು ಆರ್ಥಿಕವಾಗಿ ಸಬಲರಾಗುವ ವಿಚಾರ ಬಂದಾಗ ಹುಟ್ಟಿದ ಈ ರೋಚಕ ಕಾದಂಬರಿಯು ಬಡತನದಲ್ಲಿದ್ದ ಲೇಖಕಿಯನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಕೂಡ ತಂದು ಕೊಟ್ಟಿದೆಜನರಲ್ಲಿ ಸದಾಭಿರುಚಿಯ ಪುಸ್ತಕ ಪ್ರಜ್ಞೆ ಹಾಗೂ ಸಿನಿಮಾ ಪ್ರಜ್ಞೆ ಮೂಡಿಸುವಲ್ಲಿ ಈ ಆಂಗ್ಲ ಕಾದಂಬರಿ ಯಶಸ್ವಿಯಾಗಿ ವಿಶ್ವ ದಾಖಲೆ ಮಾಡಿರುವುದರಿಂದ ಈ ದಿನದ ಆಚರಣೆ ಮಹತ್ವ ಪಡೆಯುತ್ತದೆ.
ಮಾಧುರಿ ದೇಶಪಾಂಡೆ, ಬೆಂಗಳೂರು