ಮುಸ್ತಫಿಝುರ್ ರೆಹ್ಮಾನ್ ಅವರ ಬದಲಿಗೆ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಝರಬಾನಿ ಅವರು ತಂಡಕ್ಕೆ ಸೇರ್ಪಡೆಯಾದ ಸಂತಸದಲ್ಲಿ ಇರುವಾಗಲೇ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಹೊಸ ತಲೆನೋವು ಎದುರಾಗಿದೆ. ತಂಡದ ವೇಗಿ ಹರ್ಷಿತ್ ರಾಣಾ ಅವರು ಗಾಯದ ಕಾರಣಕ್ಕಾಗಿ ಟೂರ್ನಿಯಿಂದ ಹೊರಬಿದ್ದಿದ್ದು ಇದೀಗ ಕೆಕೆಆರ್ ಮತ್ತೊಬ್ಬ ಬದಲಿ ಆಟಗಾರನನ್ನು ಹುಡುಕಬೇಕಾಗಿದೆ.
ಐಸಿಸಿ ಟಿ೨೦ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನವೀಮುಂಬೈನಲ್ಲಿ ನಡೆದ ತಾಮೀಮು ಪಂದ್ಯದ ವೇಳೆ ಹರ್ಷಿತ್ ರಾಣಾ ಅವರ ಮೊಣಕಾಲಿಗೆ ಗಾಯವಾಗಿತ್ತು. ಬಳಿಕ ಅವರು ಇಡೀ ಟಿ೨೦ ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯಬೇಕಾಯಿತು. ಅವರ ಬದಲಿಗೆ ಮೊಹಮ್ಮದ್ ಸಿರಾಜ್ ಅವರು ತಂಡಕ್ಕೆ ಆಯ್ಕೆಯಾದರು. ಫೆಬ್ರವರಿ ೯ರಂದು ಅವರು ಮುಂಬೈನಲ್ಲಿ ಶಸ್ತçಚಿಕಿತ್ಸೆಗೊಳಗಾಗಿದ್ದರು. ಆ ಗಾಯದಿಂದ ಅವರು ಈವರೆಗೂ ಚೇತರಿಸಿಕೊಂಡಿಲ್ಲ. ಐಪಿಎಲ್ ಟೂರ್ನಿ ಪ್ರಾರಂಭ ಆಗುವ ವೇಳೆಗೂ ಅವರು ಗುಣಮುಖರಾಗುವ ಸಾಧ್ಯತೆಯಿಲ್ಲ.
೨೦೨೪ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಐಪಿಎಲ್ ಪ್ರಶಸ್ತಿ ಗೆಲುವಿನಲ್ಲಿ ಹರ್ಷಿತ್ ರಾಣಾ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇಡೀ ಟೂರ್ನಿಯಲ್ಲಿ ಅವರು ೧೯ ವಿಕೆಟ್ ಪಡೆದು ಮಿಂಚಿದ್ದರು. ಅವರ ಈ ಪ್ರದರ್ಶನ ಅವರಿಗೆ ರಾಷ್ಟಿçÃಯ ತಂಡಕ್ಕೆ ರಹದಾರಿಯಾಯಿತು. ಜೊತೆಗೆ ಫ್ರಾಂಚೈಸಿಯು ಅವರನ್ನು ೨೦೨೫ರ ಐಪಿಎಲ್ ವೇಳಿಗೆ ೪ ಕೋಟಿ ರೂಪಾಯಿ ಖರ್ಜು ಮಾಡಿ ಉಳಿಸಿಕೊಂಡಿತು. ಆ ವರ್ಷ ಸಹ ಅವರು ಆಡಿದ ೧೩ ಪಂದ್ಯಗಳಿAದ ಅವರು ೧೫ ವಿಕೆಟ್ ಪಡೆದರು.
ಇದೀಗ ಕೆಕೆಆರ್ ತಂಡ ಹರ್ಷಿತ್ ರಾಣಾ ಅವರಿಗೆ ಸರಿಸಮಾನವಾದ ಮಧ್ಯಮವೇಗದ ಆಲ್ರೌಂಡರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಿದೆ. ಇದೀಗ ತಂಡದಲ್ಲಿ ಆಕಾಶ್ ದೀಪ್, ವೈಭವ್ ಆರೋರಾ, ಉಮ್ರಾನ್ ಮಲಿಕ್ ಮತ್ತು ಕಾರ್ತಿಕ್ ತ್ಯಾಗಿ ಅವರು ತಂಡದಲ್ಲಿರುವ ಮಧ್ಯಮ ವೇಗಿಗಳಾಗಿದ್ದಾರೆ.
ಇದೇವೇಳೆ ಟಿ೨೦ ವಿಶ್ವಕಪ್ ಟೂರ್ನಿ ವೇಳೆ ಗಾಯಗೊಂಡಿದ್ದ ತಂಡದ ಮತ್ತೊಬ್ಬ ವೇಗಿಯಾಗಿರುವ ಶ್ರೀಲಂಕಾದ ಮಥೀಶ್ ಪತಿರಣ ಅವರು ಚೇತರಿಕೆಯ ಹಾದಿಯಲ್ಲಿದ್ದಾರೆ. ಆದರೆ ಅವರ ಲಭ್ಯತೆಯ ಕುರಿತು ಈವರೆಗೂ ಯಾವುದೇ ಖಾತ್ರಿಯಿಲ್ಲ.
ಕೆಕೆಆರ್ಗೆ ಮುಗಿಯದ ತಲೆನೋವು: ಹರ್ಷಿತ್ ರಾಣಾ ಔಟ್!



