![]() |
![]() |
![]() |
![]() |
![]() |
ಕಾಬೂಲ್: ಅಫ್ಘಾನಿಸ್ಥಾನದ ಏಕದಿನ ವಿಶ್ವಕಪ್ ಕ್ರಿಕೆಟ್ ತಂಡ ಬುಧವಾರ ಅಂತಿಮಗೊಂಡಿದೆ. ಹಶ್ಮತ್ ಉಲ್ಲಾ ಶಾಹಿದಿ ತಂಡವನ್ನು ಮುನ್ನಡೆಸಲಿದ್ದಾರೆ. ನವೀನ್ ಉಲ್ ಹಕ್ 2 ವರ್ಷಗಳ ಬಳಿಕ ಏಕದಿನ ತಂಡಕ್ಕೆ ಮರಳಿರುವುದು ವಿಶೇಷ. ಮೂವರು ಮೀಸಲು ಆಟಗಾರರನ್ನೂ ತಂಡ ಹೊಂದಿದೆ. ಅಫ್ಘಾನಿಸ್ಥಾನ ತನ್ನ ಮೊದಲ ಪಂದ್ಯವನ್ನು ಅ. 7ರಂದು ಬಾಂಗ್ಲಾದೇಶ ವಿರುದ್ಧ ಧರ್ಮಶಾಲಾದಲ್ಲಿ ಆಡಲಿದೆ.
ಅಫ್ಘಾನಿಸ್ಥಾನ ತಂಡ: ಹಶ್ಮತ್ ಉಲ್ಲಾ ಶಾಹಿದಿ (ನಾಯಕ), ರೆಹಮಾನುಲ್ಲ ಗುರ್ಬಜ್, ಇಬ್ರಾಹಿಂ ಜದ್ರಾನ್, ರಿಯಾಜ್ ಹಸನ್, ರೆಹಮತ್ ಶಾ, ನಜೀಬುಲ್ಲ ಜದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖೀಲ್, ಅಜ್ಮತುಲ್ಲ ಒಮರ್‍ಜಾಯ್, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ಫಜಲ್ ಹಕ್ ಫಾರೂಖೀ, ಅಬ್ದುಲ್ ರೆಹಮಾನ್, ನವೀನ್ ಉಲ್ ಹಕ್. ಮೀಸಲು ಆಟಗಾರರು: ಗುಲ್ಬದಿನ್ ನೈಬ್, ಶರಾಫದ್ದೀನ್ ಅಶ್ರಫ್, ಫರೀದ್ ಅಹ್ಮದ್ ಮಲಿಕ್.
![]() |
![]() |
![]() |
![]() |
![]() |
Leave a Review