ಹಾಸನ: ಡಿಸಿಎಂ ಡಿಕೆಶಿ ನಿನ್ನೆ ಸಂಜೆ ಕುಟುಂಬ ಸಮೇತ ಹಾಸನದ ಹಾಸನಾಂಬೆಯ ದರ್ಶನ ಪಡೆದಿದ್ದು, ಈ ಸಂದರ್ಭದಲ್ಲಿ ಎರಡೆರಡು ಬಾರಿ ತಾಯಿ ಹಾಸನಾಂಬೆ ಅವರಿಗೆ ಬಲಭಾಗದಿಂದ ಹೂವು ವರವಾಗಿ ನೀಡಿದ್ದು, ಡಿಕೆಶಿ ಖುಷಿಯಾಗಿದ್ದಾರೆ. ನಿನ್ನೆ ಸಂಜೆ ಅವರು ಹಾಸನದ ಹಾಸನಾಂಬೆಯ
ದರ್ಶನಕ್ಕೆ ಪತ್ನಿ ಉಷಾ ಅವರೊಂದಿಗೆ ಆಗಮಿಸಿ, ೧೫ ನಿಮಿಷಗಳ ಕಾಲ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಬಳಿಕ ದೇವಿಯ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸುವ ವೇಳೆ, ತಾಯಿಯ ಬಲಭಾಗದಿಂದ ಎರಡೆರಡು ಬಾರಿ ಹೂವು ವರವಾಗಿ ನೀಡಿದ್ದು, ರಾಜಕಾರಣದಲ್ಲಿ ಇದು ಸಾಕಷ್ಟು ಚರ್ಚೆಯಾಗುತ್ತಿದೆವ್ಯವಹಾರ ನಡೆಯುವ ಸ್ಥಳ ದೇವಸ್ಥಾನ! ಭಕ್ತರು ಹಾಗೂ ಭಗವಂತನ ನಡುವೆ ವ್ಯವಹಾರ ನಡೆಯುವ ಸ್ಥಳ ದೇವಸ್ಥಾನ ಎಂದು ಡಿಸಿಎಂ ಡಿಕೆಶಿ ಹೊಸ ವ್ಯಾಖ್ಯಾನ
ಆಡಿದ್ದಾರೆ.
ನಿನ್ನೆ ಕುಟುಂಬ ಸಮೇತ ಹಾಸನದ ಹಾಸನಾಂಬೆಯ ದರ್ಶನ ಪಡೆದ ಅವರು, ಮಾಧ್ಯಮಗಳ ಮುಂದೆ ಭಕ್ತರು ಹಾಗೂ ಭಗವಂತನ ನಡುವೆ ವ್ಯವಹಾರ ನಡೆಯುವ ಸ್ಥಳ ದೇವಸ್ಥಾನ ಎನ್ನುವುದರ ಮೂಲಕ ಹೊಸ ವ್ಯಾಖ್ಯಾನ ಆಡಿದ್ದಾರೆ. ನಾ ಉಂಟು, ಆ ತಾಯಿ ಉಂಟು ಹೆಚ್ಚಿನ ಅಧಿಕಾರಕ್ಕೆ ದೇವರ ಮುಂದೆ ಏನಾದ್ರೂ ಬೇಡಿಕೊಂಡಿದ್ದೀರಾ? ಎAದು ಡಿಸಿಎಂ ಡಿಕೆಶಿಗೆ ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು, ನಾ ಉಂಟು, ಆ ತಾಯಿ ಉಂಟು. ಇದೆಲ್ಲ
ನಿಮ್ಮ ಮುಂದೆ ಹೇಳಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆಶಿ ತಿಳಿಸಿದ್ದು, ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಮುನ್ಸೂಚನೆ ನೀಡಿದಂತಾಗಿದೆ.



