ದುಬೈನಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯಭೇರಿ ಸಾಧಿಸಿತು. ಆದರೆ, ಭಾರತ ತಂಡ ಏಷ್ಯನ್ ಕ್ರಿಕೆಟ್
ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮತ್ತು ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದ ಕಾರಣ ಭಾರತ ಟ್ರೋಫಿ ಗೆದ್ದಿದ್ದರು ನೀಡಲಿಲ್ಲ. ಈ ಬಗ್ಗೆ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಕ್ರಿಕೆಟ್ ಆಡಲು ಪ್ರಾರಂಭಿಸಿದ ದಿನಗಳಿAದಲೂ ಇಂತಹ ಪದ್ಧತಿಯನ್ನು ನಾನೆಂದು ಎದುರಿಸಿರಲಿಲ್ಲ. ಚಾಂಪಿಯನ್ಗಳಾದರೂ ಟ್ರೋಪಿ ಕೊಡದಿರುವುದು ಇದೆಂತಹ ಪ್ರಕ್ರಿಯೆ. ಇಂತಹ ವ್ಯವಸ್ಥೆಯನ್ನು ನಾನೆಂದು ಕಂಡಿರಲಿಲ್ಲ? ಎAದು ಚಾಂಪಿಯನ್ ತಂಡಕ್ಕೆ ಟ್ರೋಫಿ ನೀಡದ ಏಸಿಸಿ ನಿರ್ಧಾರದ ಬಗ್ಗೆ ಸೂರ್ಯ ಕುಮಾರ್ ಯಾದವ್ ಅವರು ಮತ್ತು ಅಭಿಷೇಕ್ ಶರ್ಮಾ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ನಿಜವಾಗಿಯೂ ನನ್ನ ಟ್ರೋಫಿಗಳು ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತಿವೆ. ನನ್ನ ೧೪ ಜನರ ನನ್ನ ತಂಡ ಸಹಾಯಕ ಸಿಬ್ಬಂದಿಯೇ ನನ್ನ ಟ್ರೋಪಿ. ಅವರಿಂದಲೇ ಈ ಪ್ರಶಸ್ತಿಯನ್ನು ಗೆಲ್ಲಲು ಕಾರಣ. ನಾವು ೪ನೇ ತಾರೀಖಿನಿಂದ ದುಬೈನಲ್ಲಿ ಇದ್ದೇವೆ. ಇಂದು ಒಂದು ಪಂದ್ಯ ಆಡಿದ್ದೇವೆ. ಎರಡು ದಿನಗಳಲ್ಲಿ ಎರಡು ಬ್ಯಾಕ್-ಟು-ಬ್ಯಾಕ್ ಉತ್ತಮ ಪಂದ್ಯಗಳನ್ನು ಉತ್ತಮವಾಗಿ ಆಡಿದ್ದೇವೆ. ನಾವು ಟ್ರೋಫಿ ಪಡೆಯಲು ಅರ್ಹರು. ಇದಕ್ಕಿಂತ ಹೆಚ್ಚೇನನ್ನು ನಾನು ಹೇಳಲಾರೆ ಎಂದು ಹೇಳಿದರು.
ಭಾರತೀಯ ಸೇನೆ ಪಂದ್ಯದ ಹಣ ಅರ್ಪಣೆ ತಮ್ಮ ಮಾತು ಮುಂದುವರೆಸಿ, ಏಷ್ಯಾ ಕಪ್ ಪಂದ್ಯಾವಗಳಿAದ ತಾವು ಗಳಿಸಿದ ಸಂಪೂರ್ಣ ಪAದ್ಯ ಶುಲ್ಕವನ್ನು ಭಾರತೀಯ ಸಶಸ್ತç ಪಡೆಗಳಿಗೆ ನೀಡುವುದಾಗಿ ಘೋಷಿಸಿದರು.
ನಮ್ಮ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಮುಂಬರುವ ವಿಶ್ವಕಪ್ ವರ್ಷಕ್ಕೆ ಈ ಕ್ಷಣಗಳು ಬಹಳ ಮುಖ್ಯ. ಟ್ರೋಫಿ ನೀಡದಿದ್ದಕ್ಕೆ ಬೇಸರವಿಲ್ಲ. ನಾವು ಗೆದ್ದಾಗ ಕ್ರೀಡಾಂಗಣದಲ್ಲಿ ಜನರ ಸಂತೋಷ, ಸಂಭ್ರಮದ ಕ್ಷಣ ನಮ್ಮ ಮುಂದಿನ ಪಂದ್ಯಕ್ಕೆ ಸ್ಪೂರ್ತಿ. ಆಟ ಮುಗಿದ ಮೇಲೆ ನೆನಪುಗಳು ಉಳಿಯುತ್ತವೆ.
ಆದರೆ ಟ್ರೋಫಿಯಲ್ಲ ಎಂದು ಸೂರ್ಯಕುಮಾರ್ಯಾದವ್ ಹೇಳಿದರು.
ಭಾರತಕ್ಕೆ ಗೆಲುವು: ಪಂದ್ಯದ ಕೊನೆ ಕ್ಷಣದವರೆಗೂ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ೫ ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಏಷ್ಯಾಕಪ್ನಲ್ಲಿ೯ನೇ ಬಾರಿ (ಏಕದಿನ-೭, ಟಿ೨೦-೨) ಪ್ರಶಸ್ತಿ ಗೆದ್ದ ಟೀಮ್ ಇಂಡಿಯಾ ಏಷ್ಯಾ ಖಂಡಕ್ಕೆ ತಾನೇ ಅಪತಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತು.