ಮಾಗಡಿ: ಮಾಜಿ ಶಾಸಕರಾದ ಎಚ್. ಸಿ. ಬಾಲಕೃಷ್ಣ ಅವರು ಮಂಗಳವಾರ ತಮ್ಮ ಏಳನೇ ಭಾರಿಯ ಆಯ್ಕೆ ಬಯಸಿ ಚುನಾವಣಾಧಿಕಾರಿ ಡಿ. ರಮೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು. ಸಂಸದ ಡಿ. ಕೆ. ಸುರೇಶ್, ಮಾಜಿ ಸಚಿವ ಎಚ್. ಎಂ. ರೇವಣ್ಣ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಸಂಸ್ಥಾಪಕ ರಾಜ್ಯಾದ್ಯಕ್ಷ ಡಾ. ಎಚ್. ಎಂ. ಕೃಷ್ಣಮೂರ್ತಿ, ಅಲ್ಪಸಂಖ್ಯಾತರ ಮುಖಂಡ ಅಬ್ದುಲ್ ರೆಹಮಾನ್ ಬಾಲಕೃಷ್ಣ ಅವರಿಗೆ ಸಾಥ್ ನೀಡಿದರು.
ಪಟ್ಟಣದ ಕಲ್ಯಾಗೇಟ್ ಶ್ರೀ ವರಸಿದ್ದಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ತಮ್ಮ ಅಭಿಮಾನಿಗಳನ್ನೊಡಗೂಡಿ ತೆರೆದ ವಾಹನದಲ್ಲಿ ಆಗಮಿಸಿ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿ ಹೊರಬಂದಾದ ಬಾಲಕೃಷ್ಣ ಅವರ ತಾಯಿ ಶ್ರೀಮತಿ ಶಾರದಮ್ಮ ಚನ್ನಪ್ಪರವರಿಗೆ ಡಿ. ಕೆ. ಸುರೇಶ್, ಎಚ್. ಎಂ. ರೇವಣ್ಣ, ಎಚ್. ಎಂ. ಕೃಷ್ಣಮೂರ್ತಿ, ಅಬ್ದುಲ್ ರೆಹಮಾನ್ ಅವರು ಕಾಲಿಗೆರೆದು ನಮಸ್ಕರಿಸಿ ಆಶೀರ್ವಾದ ಪಡೆದರು.
ಸಂಸದರಾದ ಡಿ. ಕೆ. ಸುರೇಶ್ ಮಾತನಾಡಿ ಬಾಲಕೃಷ್ಣ ಅವರಿಗೆ ಈ ಭಾರಿ ಆಶೀರ್ವಾದ ಮಾಡಿದರೆ ಸರಕಾರದಲ್ಲಿ ಉತ್ತಮ ಸ್ಥಾನಮಾನ ಸಿಗುವ ಎಲ್ಲಾ ಲಕ್ಷಣಗಳಿವೆ. ಕಾಂಗ್ರೆಸ್ಸಿಗರಾದ ನಾವೆಲ್ಲರೂ ಸೇರಿ ನಾಡಪ್ರಭು ಕೆಂಪೇಗೌಡರ ಹೆಸರನ್ನು ಉಳಿಸಲು ಶ್ರಮಿಸುತ್ತೇವೆ. ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರಕಾರವನ್ನು ತೊಲಗಿಸಿ ಮಾಗಡಿಯನ್ನು ಅತ್ಯತ್ತಮ ಕ್ಷೇತ್ರ ಮಾಡುತ್ತೇವೆ. ಇದೇ ಜಿಲ್ಲೆಯ ಡಿ. ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶವಿದ್ದು ನಾವೆಲ್ಲರೂ ಸೇರಿ ಅವರ ಗೆಲುವಿಗೆ ಕೈ ಜೋಡಿಸಬೇಕಿದೆ ಎಂದು ಸುರೇಶ್ ತಿಳಿಸಿದರು.
ಮಾಜಿ ಸಚಿವರಾದ ಎಚ್. ಎಂ. ರೇವಣ್ಣ ಮಾತನಾಡಿ ಡಬಲ್ ಇಂಜಿನ್ ಸರಕಾರವು ರಾಜ್ಯದ ಜನತೆಯನ್ನು ಬೆಲೆ ಏರಿಕೆಯ ಬಿಸಿಗೆ ದೂಡಿದೆ. ಪಿ. ಎಸ್. ಐ. ಹಗರಣ, 40% ಕಮೀಷನ್ ಪಡೆದಿರುವುದೇ ಬಿಜೆಪಿಗರ ಸಾಧನೆಯಾಗಿದೆ. ರಾಜ್ಯದ ಜನತೆ ಈ ಬ್ರಷ್ಠ ಬಿಜೆಪಿಯನ್ನು ತೊಲಗಿಸಲು ನಿರ್ದರಿಸಿದ್ದಾರೆ. ಈ ಕ್ಷೇತ್ರದ ಅಭ್ಯರ್ಥಿ ಕಳೆದ ಭಾರೀ ಸೋಲನುಭವಿಸಿದರೂ ಸಹ ಆತ್ಮವಿಶ್ವಾಸ ಕಳೆದುಕೊಳ್ಳದೆ ತಾಲ್ಲೂಕಿನ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರಿಗೆ ಆಸರೆಯಾಗಿದ್ದಾರೆ. ನಾವು ನೀವು ನನ್ನ ಅಭಿಮಾನಿಗಳು ಸೇರಿಕೊಂಡು ಅವರ ಗೆಲುವಿಗೆ ಹಗಲಿರುಳು ಶ್ರಮಿಸೋಣ ಎಂದು ರೇವಣ್ಣ ಕರೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ಎಚ್. ಸಿ. ಬಾಲಕೃಷ್ಣ ಮಾತನಾಡಿ ತಾಲ್ಲೂಕಿನ ಪ್ರಭುದ್ದ ಮತದಾರರು ನನಗೆ ಮತ ನೀಡಿದರೆ ನನ್ನ ಅಭಿವೃದ್ಧಿಗಲ್ಲ ತಾಲ್ಲೂಕು ಅಭಿವೃದ್ಧಿ ಮಾಡಲಾಗುತ್ತದೆ. ಪಕ್ಷಕ್ಕೆ ಆಗಮಿಸುವ ಕಾರ್ಯಕರ್ತರು ಮುಖಂಡರು ನಾಯಕರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುವುದು. ಪ್ರಸ್ತುತ ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯದ್ಯಕ್ಷರಾದ ಡಾ. ಎಚ್. ಎಂ. ಕೃಷ್ಣಮೂರ್ತಿ ಅವರು ನಮ್ಮಲ್ಲಿ ಆಗಮಿಸಿರುವುದು ನಮಗೆ ರಾಜಕೀಯ ಶಕ್ತಿ ಬಂದಿದೆ.
ನಾವು ಅವರನ್ನು ಮತ್ತು ಅವರ ಅಭಿಮಾನಿಗಳನ್ನು ಅತ್ಯಂತ ಪ್ರೀತಿ, ವಿಶ್ವಾಸ, ಗೌರವಯುತವಾಗಿ ನಡೆಸಿಕೊಳ್ಳಲಾಗುವುದು. ಅವರು ಸುಮಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಕೆಂಪೇಗೌಡ ಜಯಂತಿಯನ್ನು ನಾವೆಲ್ಲರೂ ಸೇರಿ ಮಾಡಲಾಗುವುದು ಎಂದು ಬಾಲಕೃಷ್ಣ ಸ್ಪಷ್ಟಪಡಿಸಿದರು.
ಊಹಾಪೋಹಕ್ಕೆ ತೆರೆ:ಈ ಹಿಂದೆ ರಾಜಾಜಿನಗರ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ದಿಸಿದ್ದ ಡಾ. ಎಚ್. ಎಂ. ಕೃಷ್ಣಮೂರ್ತಿ ಅಲ್ಲಿ ಸೋಲನುಭವಿಸಿದ್ದರು. ಬಳಿಕ ಜಿಲ್ಲಾ ಉಸ್ತುವಾರಿ ಮಂತ್ರಿ ಅಶ್ವತ್ ನಾರಾಯಣ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಬಿಜೆಪಿ ಪಕ್ಷವು ಕೃಷ್ಣಮೂರ್ತಿ ಅವರನ್ನು ರಾಜ್ಯ ಕೆಂಪೇಗೌಡ ಅಭಿವೃದ್ಧಿ ಸಮಿತಿಗೆ ನಾಮ ನಿರ್ದೇಶಕರನ್ನಾಗಿ ಮಾಡಲಾಗಿತ್ತು. ಜೇಡ್ರಳ್ಳಿ ಕೃಷ್ಣಮೂರ್ತಿಯವರು ಜೆಡಿಎಸ್ ಸೇರುತ್ತಾರೆ. ಕಾಂಗ್ರೆಸ್ಸಿಗರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಿತ್ತರಿಸಿದ್ದರು.
ಇದಕ್ಕೆ ಪುಷ್ಠಿ ನೀಡುವಂತೆ ಕೃಷ್ಣಮೂರ್ತಿಯವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಪ್ರಕಟಿಸುವುದಾಗಿ ಹೇಳಿಕೆ ನೀಡಿ ಕೊಂಚ ಕಾಲ ಊಹಾಪೋಹಕ್ಕೆ ತೆರೆ ಎಳೆದಿದ್ದರು. ಹುಚ್ಚಹನುಮೇಗೌಡಪಾಳ್ಯದ ತಮ್ಮ ಮನೆದೇವರಾದ ಕಾಲ ಭೈರವೇಶ್ವರ ದೇವಾಲಯದಿಂದ ಮಂಗಳವಾರ ಬಾಲಕೃಷ್ಣರ ಸಹೋದರ ಎಚ್. ಎನ್. ಅಶೋಕ್ ಅವರನ್ನೊಡಗೂಡಿ ಸೋಮೇಶ್ವರ ದೇವಾಲಯದ ಬಳಿಯಲ್ಲಿ ಬಾಲಕೃಷ್ಣ ಸಮ್ಮುಖದಲ್ಲಿ ಸೇರ್ಪಡೆಯಾಗುತ್ತಿದ್ದಂತೆ ಊಹಾಪೋಹಗಳಿಗೆ ಕೃಷ್ಣಮೂರ್ತಿ ತೆರೆ ಎಳೆದರು. ವಿಧಾನಪರಿಷತ್ ಸದಸ್ಯರಾದ ಎಸ್. ರವಿ. ಸಿಎಂ ಲಿಂಗಪ್ಪ, ಮಾಜಿ ಶಾಸಕ ರಾಜು, ಕೈ ಕಾರ್ಯಕರ್ತರು ಮುಖಂಡರು ಬಾಲಕೃಷ್ಣ ಅಭಿಮಾನಿ ಕಾರ್ಯಕರ್ತರು ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಹಾಜರಿದ್ದರು.
Leave a Review