ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಇಂದು ನಂಜನಗೂಡಿನ ಶ್ರೀ ಕಂಠೇಶ್ವರನ ದರ್ಶನಕ್ಕೆ ತೆರಳಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತುಲಾಭಾರ ಸೇವೆಯನ್ನು ನೆರವೇರಿಸಿದ್ದಾರೆ. ಪತ್ನಿ ಅನಿತಾ ಕುಮಾರಸ್ವಾಮಿ ಅವರ ಜೊತೆಗೆ ಅವರು ತೆರಳಿದ್ದು, ಆರೋಗ್ಯ, ರಾಜಕೀಯದಲ್ಲಿ ಉನ್ನತ ಸ್ಥಾನ ನೀಡುವಂತೆ ಹರಕೆಯನ್ನು ಹೊತ್ತಿದ್ರು. ಹೀಗಾಗಿ, ಇಂದು ನಂಜನಗೂಡಿನ ಶ್ರೀ ಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಾ.ರಾ.ಮಹೇಶ್ ಸೇರಿದಂತೆ ಸ್ಥಳೀಯ ಜೆಡಿಎಸ್ನ ಮುಖಂಡರು ಕುಮಾರಸ್ವಾಮಿಗೆ ಸಾಥ್ ಕೊಟ್ಟಿದ್ದಾರೆ.



