ಚಿಕ್ಕಮಗಳೂರು: ಡಿ.ಕೆ. ಶಿವಕುಮಾರ್ ಅವರು ಯಾರ ಪೂಜೆ ಮಾಡುತ್ತಿದ್ದಾರೆ. ಅವರು ನಿಜಕ್ಕೂ ರೈತರ ಮಗನಾ? ರೈತರ ಮಕ್ಕಳಿಗೆ ಇ.ಡಿ. ನೋಟಿಸ್ ಕೊಟ್ಟಿರುವುದನ್ನು ಎಲ್ಲಾದರೂ ನೋಡಿದ್ದೀರಾ ಎಂದು ಮಾಜಿ ಎಚ್.ಡಿ. ಸಿಎಂ ಕುಮಾರಸ್ವಾಮಿ ಮೂಡಿಗೆರೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಹೀಗೆ ಮಾತನಾಡಿದರೆ ಕಳೆದ ಬಾರಿ 79 ಸ್ಥಾನ ಗೆದ್ದ ನೀವು ಈ ಬಾರಿ 29ಕ್ಕೆ ಇಳಿಯುತ್ತಿರಾ ಎಂದು ಎಚ್ಚರಿಕೆ ನೀಡಿದ್ದಾರೆ.
ಓರ್ವ ಮುಖ್ಯಮಂತ್ರಿಯನ್ನು ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ಸಿಗರು ಅವರಿಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡಿದ್ದರು. ಹಾಸನದಲ್ಲಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಕೆಂಡಾಮಂಡಲವಾದ ಕುಮಾರಸ್ವಾಮಿ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅವರು ಸರಿಯಾಗಿ ಆಡಳಿತ ನಡೆಸಲಿಲ್ಲ. ಜನರ ಕಷ್ಟ ಕೇಳಲಿಲ್ಲ ಎನ್ನುವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಕೆಂಡಾಮಂಡಲವಾದ ಕುಮಾರಸ್ವಾಮಿ, ಅವರಿಗೆ ಇನ್ನಷ್ಟು ದುಡ್ಡು ಹೊಡೆಯಲು ಬಿಡಬೇಕಿತ್ತಾ ಎಂದು ವಾಗ್ದಾಳಿ ನಡೆಸಿದ್ದಾರೆ.
ನಿಮ್ಮ ಬಂಡವಾಳ ನನಗೆ ಚೆನ್ನಾಗಿ ಗೊತ್ತಿದೆ ಮೈತ್ರಿ ಸರ್ಕಾರದಲ್ಲಿ ನನ್ನನ್ನು ಯಾವ ರೀತಿ ನಡೆಸಿಕೊಂಡರು ಎಂಬುವುದು ನನಗೆ ಗೊತ್ತಿದೆ. ಇರಿಗೇಶನ್ ಸಚಿವನಾಗಿ ಏನೇನೋ ನಡೆಸಿದ್ದೀರಾ. ನಿಮ್ಮ ಬಂಡವಾಳ ನನಗೆ ಚೆನ್ನಾಗಿ ಗೊತ್ತಿದೆ. ನಾನು ನಿಮಗೆ ಎಷ್ಟು ಸ್ವತಂತ್ರ ಕೊಟ್ಟಿದ್ದೆ, ನೀವು ಯಾವ ರೀತಿ ನಡೆದುಕೊಂಡಿದ್ದೀರಿ ಎಂಬುದು ನನಗೆ ತಿಳಿದಿದೆ. ನಾವೇನು ನಿಮ್ಮ ಮನೆ ಬಾಗಿಲಿಗೆ ಬಂದಿರಲಿಲ್ಲ. ಸಿಎಂ ಸ್ಥಾನ ಕೊಡುತ್ತೇವೆ ಎಂದು ಹುಡುಕಿಕೊಂಡು ಬಂದವರು ನೀವು. ಬೇಡ ಯಾರನ್ನಾದರೂ ಮಾಡಿಕೊಳ್ಳಿ ಅಂತ ಹೇಳಿದ್ದೇವು ಎಂದರು.
ಕಾಂಗ್ರೆಸ್ ವಿರುದ್ಧ ಎಚ್.ಡಿ.ಕೆ ವಾಗ್ದಾಳಿ ನಿಮಗೆ ಶಕ್ತಿ ಇಲ್ಲ. ಅದಕ್ಕೆ ನಮ್ಮ ಮನೆ ಬಾಗಿಲಿಗೆ ಬಂದಿದ್ದೀರಿ. ನಿಮಗೆ ಶಕ್ತಿ ಇದ್ದಿದ್ದರೆ ಯಾಕೆ ಬರುತ್ತಿದ್ದೀರಿ ಎಂದು ಲೇವಡಿ ಮಾಡಿದ್ದಾರೆ. ನನ್ನ ಬಗ್ಗೆ ಲಘುವಾಗ ಮಾತನಾಡುತ್ತೀರಾ? ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಿಕೊಳ್ಳಿ ಅಂತಾ ನಾವು ಹೇಳಿದ್ದೇವಲ್ಲ. ದೇವೇಗೌಡರ ಜೊತೆ ಮಾತನಾಡುವಾಗ ಗುಲಾಂ ನಬಿ ಆಜಾದ್, ಪರಮೇಶ್ವರ್, ಸಿದ್ದರಾಮಯ್ಯ, ಖರ್ಗೆ ಇದ್ದರಲ್ಲ ಅವರನ್ನೇ ಕೇಳಿ. ನಿಮಗೆ ಯಾವ ನೈತಿಕತೆ ಇದು ಎಂದು ಜೆಡಿಎಸ್ ಬಗ್ಗೆ ಮಾತನಾಡುತ್ತೀರಾ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
Leave a Review