ಮಳವಳ್ಳಿ: ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ದಾಸನ ದೊಡ್ಡಿ ಗ್ರಾಮದ ಗುತ್ತಿಗೆದಾರರಾದ ಪುಟ್ಟಸ್ವಾಮಿ ಅವರು ಮಾರೇಹಳ್ಳಿಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯದಲ್ಲಿ ಉರುಳುಸೇವೆ ಮಾಡಿ ದೇವರ ಹರಕೆಯನ್ನು ತೀರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ಎಚ್ಡಿ. ಕುಮಾರಸ್ವಾಮಿ ಅವರು ಗೆಲುವು ಸಾಧಿಸಿದರೆ ಉರುಳಿ ಸೇವೆ ಮಾಡುವೆ ಎಂದು ಹರಕೆ ಕಟ್ಟಿಕೊಂಡಿದ್ದೆ ಅದರಂತೆ ಇಂದು ಹರಕೆ ತಿರೀಸಿದ್ದೇನೆ ಕುಮಾರಸ್ವಾಮಿಯವರಿಗೆ ಹಾಗೂ ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ಆಶಿಸಿದರು ಕುಮಾರಸ್ವಾಮಿ ಅವರು ಮಂತ್ರಿಗಳಾಗಿ ಹೆಚ್ಚು ಅಭಿವೃದ್ಧಿ ಮಾಡಲಿ ಎಂದು ಹೇಳಿದರು.
ಕುಮಾರಸ್ವಾಮಿಯವರ ಅಭಿಮಾನಿಯಾದಪೇಟೆ ಬೀದಿ ರಮೇಶ್ ಮಾತನಾಡಿ ಗುತ್ತಿಗೆದಾರರದ ಪುಟ್ಟಸ್ವಾಮಿಯವರು ಇಷ್ಟು ವಯಸ್ಸಿನಲ್ಲಿ ಕುಮಾರಸ್ವಾಮಿಯವರು ಗೆದ್ದು ಬರಲಿ ಎಂದು ಹರಕೆ ಕಟ್ಟಿಕೊಂಡು ಉರುಳು ಸೇವೆ ಮಾಡಿದ್ದಾರೆ ಇವರಿಗೆ ಕುಮಾರಸ್ವಾಮಿಯವರಿಗೆ ಒಳ್ಳೆಯದು ಮಾಡಲಿ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜೋಗಿಪುರ ಗ್ರಾಮದ ಬಸವರಾಜು ಪುಟ್ಟಬಸವೇಗೌಡ ರಾಮೇಗೌಡ ಮರಿಸ್ವಾಮಿ ಮಹೇಶ್ ಸಣ್ಣ ಗೌಡರು ಹಲವರು ಪಾಲ್ಗೊಂಡಿದ್ದರು.