ಬೆಂಗಳೂರು: ಜಾಮೀನು ಸಿಗುವ ನಿರೀಕ್ಷೆಯಲ್ಲಿರುವ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರು ಸದ್ಯ ಒತ್ತಡದಲ್ಲಿದ್ದಾರೆ.ಕಿಡ್ನಾಪ್ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೇವಣ್ಣ ಅವರು ಇಂದು ಮುಂಜಾನೆ 4.30ಕ್ಕೆ ನಿದ್ರೆಯಿಂದ ಎದ್ದು ಜೈಲಿನ ಬ್ಯಾರಕ್ ನಲ್ಲಿ ಕೆಲ ಹೊತ್ತು ವಾಕಿಂಗ್ ಮಾಡಿದ್ದಾರೆ. ಬಳಿಕ ಜೈಲ್ ಸಿಬ್ಬಂದಿ ಕಾಫಿ ನೀಡಿದ್ದಾರೆ.
ಕಾಫಿ ಕುಡಿದ ಬಳಿಕ ದಿನಪತ್ರಿಕೆಯಲ್ಲಿನ ವಿದ್ಯಮಾನಗಳ ಕಡೆ ಕಣ್ಣಾಡಿಸಿದ್ದಾರೆ. ಜೈಲಿನ ಮೆನು ಪ್ರಕಾರ ಸಿಬ್ಬಂದಿ ಇಂದು ಉಪ್ಪಿಟ್ಟು ನೀಡಿದ್ದಾರೆ.
ಕಳೆದ ಐದು ದಿನಗಳಿಂದ ರೇವಣ್ಣ ಜೈಲಿನಲ್ಲಿದ್ದಾರೆ. ಒಬ್ಬ ಸಾಮಾನ್ಯ ವಿಚಾರಣಾಧೀನ ಬಂಧಿಯಂತೆ ದಿನ ಕಳೆಯುತ್ತಿದ್ದು, ಇಂದು ಬೇಲ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಬೇಲ್ ಸಿಕ್ರೆ ಬಿಡುಗಡೆ ಭಾಗ್ಯ, ಇಲ್ಲ ಅಂದ್ರೆ ಜೈಲಿನಲ್ಲಿ ಸೆರೆವಾಸ ಮುಂದುವರಿಕೆಯಾಗಲಿದೆ.
ಇಂದು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದು ಪುನಃ ವಿಚಾರಣೆಯನ್ನು ಮಧ್ಯಾಹ್ನ 12.15ಕ್ಕೆ ಮುಂದೂಡಲಾಯಿತು.
ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾಗಿದ್ದದೂರಿನ ಹಿನ್ನೆಲೆಯಲ್ಲಿ ರೇವಣ್ಣ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.